ನವದೆಹಲಿ:- ಬ್ಯಾಂಕ್ ಗ್ರಾಹಕರೇ ನೀವು ಸುದ್ದಿ ಓದಲೇಬೇಕು ನಿಮ್ಮ ಬ್ಯಾಂಕ್ ಕೆಲಸ ಏನಿದ್ದರೂ ಬೇಗ ಬೇಗ ಮಾಡ್ಕೊಬಿಡಿ. ಯಾಕಂದ್ರೆ ಮುಂದಿನ ತಿಂಗಳು ಬರೋಬ್ಬರಿ 13 ದಿನಗಳು ಬ್ಯಾಂಕ್ ರಜೆಗಳಿವೆ.
ಈ ವರ್ಷದ ಕ್ಯಾಲಂಡರ್ ಪ್ರಕಾರ ಆಗಸ್ಟ್ ತಿಂಗಳಲ್ಲಿ ಒಟ್ಟು 13 ರಜಾ ದಿನಗಳಿವೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಇವೆ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ, ರಾಖಿ ಹಬ್ಬಗಳೂ ಇವೆ. ಹೆಚ್ಚಿನ ರಾಜ್ಯಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ರಾಖಿ ಹಬ್ಬಕ್ಕೆ ರಜೆ ಇದೆ. ಕರ್ನಾಟಕದಲ್ಲಿ ಈ ಮೂರು ದಿನಗಳಲ್ಲೂ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆಗಸ್ಟ್ 24ರಿಂದ 26ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ. ಹೀಗಾಗಿ, ಬ್ಯಾಂಕ್ನಲ್ಲಿ ಕೆಲಸ ಇರುವವರು ರಜಾ ದಿನಗಳ ಪಟ್ಟಿಯನ್ನು ಗಮನಿಸಿ, ತಮ್ಮ ಕೆಲಸ ಕಾರ್ಯಗಳ ವೇಳಾಪಟ್ಟಿ ಬದಲಿಸುವುದು ಉತ್ತಮ.
ಆಗಸ್ಟ್ 8, ಗುರುವಾರ: ತೆಂಡೋಂಗ್ ಲೋ ರುಮ್ ಫಾಟ್ – ಸಿಕ್ಕಿಂ ರಾಜ್ಯದಲ್ಲಿ ರಜೆ
ಆಗಸ್ಟ್ 10, ಎರಡನೇ ಶನಿವಾರ: ಎಲ್ಲಾ ಬ್ಯಾಂಕ್ಗಳಿಗೂ ರಜೆ
ಆಗಸ್ಟ್ 11, ಭಾನುವಾರ: ಎಲ್ಲಾ ಬ್ಯಾಂಕ್ಗಳಿಗೂ ರಜೆ
ಆಗಸ್ಟ್ 13, ಮಂಗಳವಾರ: ದೇಶಪ್ರೇಮಿಗಳ ದಿನ – ಮಣಿಪುರ ರಾಜ್ಯದಲ್ಲಿ ರಜೆ
ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನೋತ್ಸವ – ಎಲ್ಲಾ ಬ್ಯಾಂಕ್ಗಳಿಗೂ ರಜೆ
ಆಗಸ್ಟ್ 16, ಶುಕ್ರವಾರ: ಡೀ ಜೂರ್ ಟ್ರಾನ್ಸ್ಫರ್ ಡೇ – ಪುದುಚೇರಿಯಲ್ಲಿ ರಜೆ
ಆಗಸ್ಟ್ 18, ಭಾನುವಾರ: ಎಲ್ಲಾ ಬ್ಯಾಂಕ್ಗಳಿಗೂ ರಜೆ
ಆಗಸ್ಟ್ 19, ಸೋಮವಾರ: ರಾಖಿ ಹಬ್ಬ (ಉ. ಪ್ರ., ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರ್ಯಾಣ ರಾಜ್ಯಗಳಲ್ಲಿ ಬ್ಯಾಂಕ್ ರಜೆ)
ಆಗಸ್ಟ್ 24, ನಾಲ್ಕನೇ ಶನಿವಾರ: ಎಲ್ಲಾ ಬ್ಯಾಂಕ್ಗಳಿಗೂ ರಜೆ
ಆಗಸ್ಟ್ 25, ಭಾನುವಾರ: ಎಲ್ಲಾ ಬ್ಯಾಂಕ್ಗಳಿಗೂ ರಜೆ
ಆಗಸ್ಟ್ 26, ಸೋಮವಾರ: ಕೃಷ್ಣ ಜನ್ಮಾಷ್ಟಮಿ – ಹೆಚ್ಚಿನ ರಾಜ್ಯಗಳಲ್ಲಿ ರಜೆ
ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳ ಪಟ್ಟಿ
ಆಗಸ್ಟ್ 4, ಭಾನುವಾರ
ಆಗಸ್ಟ್ 10, ಎರಡನೇ ಶನಿವಾರ
ಆಗಸ್ಟ್ 11, ಭಾನುವಾರ
ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನೋತ್ಸವ
ಆಗಸ್ಟ್ 18, ಭಾನುವಾರ
ಆಗಸ್ಟ್ 19, ಸೋಮವಾರ: ರಾಖಿ ಹಬ್ಬ
ಆಗಸ್ಟ್ 24, ನಾಲ್ಕನೇ ಶನಿವಾರ
ಆಗಸ್ಟ್ 25, ಭಾನುವಾರ
ಆಗಸ್ಟ್ 26, ಸೋಮವಾರ: ಕೃಷ್ಣ ಜನ್ಮಾಷ್ಟಮಿ
ಸೆಪ್ಟಂಬರ್ನಿಂದ ಡಿಸೆಂಬರ್ವರೆಗೆ ಇರುವ ಬ್ಯಾಂಕ್ ರಜಾ ದಿನಗಳು
ಸೆಪ್ಟಂಬರ್ 7, ಶನಿವಾರ: ಗಣೇಶ ಚತುರ್ಥಿ
ಸೆಪ್ಟಂಬರ್ 15, ಭಾನುವಾರ: ಈದ್ ಮಿಲಾದ್
ಅಕ್ಟೋಬರ್ 2, ಬುಧವಾರ: ಗಾಂಧಿ ಜಯಂತ್, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 11, ಶುಕ್ರವಾರ: ಮಹಾನವಮಿ
ಅಕ್ಟೋಬರ್ 12, ಶನಿವಾರ: ದಸರಾ
ಅಕ್ಟೋಬರ್ 17, ಗುರುವಾರ: ವಾಲ್ಮೀಕಿ ಜಯಂತಿ
ನವೆಂಬರ್ 1, ಶುಕ್ರವಾರ: ದೀಪಾವಳಿ
ನವೆಂಬರ್ 18, ಸೋಮವಾರ: ಕನಕದಾಸ ಜಯಂತಿ
ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬ