ನವದೆಹಲಿ:- ಅಕ್ಟೋಬರ್ನಲ್ಲಿ ಹೆಚ್ಚು ಬ್ಯಾಂಕ್ ಗಳ ರಜೆ ಇದೆ. ಹೀಗಾಗಿ ಗ್ರಾಹಕರು ಬ್ಯಾಂಕ್ ಕೆಲಸ ಗಳನ್ನು ಬೇಗ ಬೇಗ ಮುಗಿಸಿಕೊಂಡರೆ ಒಳಿತು.
ವಾಹನ ಸವಾರರೇ ಗಮನಿಸಿ: ಬೆಂಗಳೂರಿನ ಈ ರಸ್ತೆಗಳು 2 ತಿಂಗಳು ವಾಹನ ಸಂಚಾರ ಬಂದ್!
ಅಕ್ಟೋಬರ್ ತಿಂಗಳಲ್ಲಿ ಹಬ್ಬ ಹರಿದಿನಗಳು ಹೆಚ್ಚಿವೆ. ದಸರಾ, ದೀಪಾವಳಿ, ದುರ್ಗಾ ಪೂಜೆ, ನವರಾತ್ರಿ ಎಲ್ಲವೂ ಅಕ್ಟೋಬರ್ನಲ್ಲೇ ಇವೆ. ಜೊತೆಗೆ ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿಗಳಿಗೂ ರಜೆ ಇದೆ.
ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿ ಬ್ಯಾಂಕುಗಳು ಯಾವ್ಯಾವಾಗ ರಜೆ ಹೊಂದಿವೆ ಎನ್ನುವ ವಿವರ ಇಲ್ಲಿ ಮುಂದಿದೆ.
2024ರ ಅಕ್ಟೋಬರ್ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು
ಅ. 1, ಮಂಗಳವಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಿಮಿತ್ತ ರಜೆ
ಅ. 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
ಅ. 3, ಗುರುವಾರ: ನವರಾತ್ರಿ, ಮಹಾರಾಜ ಅಗ್ರಸೇನ ಜಯಂತಿ
ಅ. 6: ಭಾನುವಾರದ ರಜೆ
ಅ. 10, ಗುರುವಾರ: ಮಹಾಸಪ್ತಮಿ
ಅ. 11, ಶುಕ್ರವಾರ: ಮಹಾನವಮಿ
ಅ. 12: ಎರಡನೇ ಶನಿವಾರ ಮತ್ತು ದಸರಾ, ಆಯುಧ ಪೂಜೆ (ದೇಶದೆಲ್ಲೆಡೆ ರಜೆ)
ಅ. 13: ಭಾನುವಾರದ ರಜೆ
ಅ. 14, ಸೋಮವಾರ: ದುರ್ಗಾ ಪೂಜೆ, ದಸರಾ (ಸಿಕ್ಕಿಂ ಮೊದಲಾದ ಕೆಲವೆಡೆ ರಜೆ)
ಅ. 16, ಬುಧವಾರ: ಲಕ್ಷ್ಮೀ ಪೂಜೆ (ಕೋಲ್ಕತಾ, ಅಗಾರ್ತಲಾದಲ್ಲಿ ರಜೆ)
ಅ. 17, ಗುರುವಾರ: ವಾಲ್ಮೀಕಿ ಜಯಂತಿ, ಕಾಟಿ ಬಿಹು (ಹಲವೆಡೆ ರಜೆ)
ಅ. 20: ಭಾನುವಾರ ರಜೆ
ಅ. 26: ನಾಲ್ಕನೇ ಶನಿವಾರದ ರಜೆ
ಅ. 27: ಭಾನುವಾರದ ರಜೆ
ಅ. 31, ಗುರುವಾರ: ನರಕ ಚತುರ್ದಶಿ, ದೀಪಾವಳಿ (ಎಲ್ಲೆಡೆ ರಜೆ)
2024ರ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜಾದಿನಗಳು
ಅ. 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
ಅ. 3, ಗುರುವಾರ: ನವರಾತ್ರಿ
ಅ. 6: ಭಾನುವಾರದ ರಜೆ
ಅ. 10, ಗುರುವಾರ: ಮಹಾಸಪ್ತಮಿ
ಅ. 11, ಶುಕ್ರವಾರ: ಮಹಾನವಮಿ
ಅ. 12: ಎರಡನೇ ಶನಿವಾರ
ಅ. 13: ಭಾನುವಾರದ ರಜೆ
ಅ. 17, ಗುರುವಾರ: ವಾಲ್ಮೀಕಿ ಜಯಂತಿ
ಅ. 20: ಭಾನುವಾರ ರಜೆ
ಅ. 26: ನಾಲ್ಕನೇ ಶನಿವಾರದ ರಜೆ
ಅ. 27: ಭಾನುವಾರದ ರಜೆ
ಅ. 31, ಗುರುವಾರ: ದೀಪಾವಳಿ