ಇಸ್ಕಾನ್ ಸದಸ್ಯ , ಹಿಂದು ಸಮುದಾಯದ ಮುಖಂಡ ಚಿನ್ಮಯ್ ಕೃಷ್ಣದಾಸ ಪ್ರಭು ಬಿಡುಗಡೆಗೆ ಆಗ್ರಹಿಸಿ ಢಾಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸೋಮವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಕೃಷ್ಣದಾಸ್ ಪ್ರಭುವನ್ನು ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ದೇಶವನ್ನು ತೊರೆಯದಂತೆ ನಿರ್ಬಂಧಿಸಿದ್ದರು. ಈ ಮಧ್ಯೆ, ಮಂಗಳವಾರ ಢಾಕಾದ ನ್ಯಾಯಾಲಯ ಕೃಷ್ಣ ದಾಸ್ ಪ್ರಭು ವಿರುದ್ಧದ ದೇಶದ್ರೋಹ ಆರೋಪವನ್ನು ಎತ್ತಿಹಿಡಿದಿದ್ದು ಜಾಮೀನು ನಿರಾಕರಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ ದೇಶದಲ್ಲಿಹಿಂದೂಗಳ ಮೇಲೆ ನಡೆದಿದ್ದ ದೌರ್ಜನ್ಯ ವಿರೋಧಿಸಿ ಚಿನ್ಮಯ್ ಪ್ರಭು ನೇತೃತ್ವದಲ್ಲಿಹೋರಾಟ ನಡೆದಿತ್ತು. ರಂಗ್ಪುರದಲ್ಲಿನ.22 ರಂದು ಚಿನ್ಮಯ್ ಪ್ರಭು ನೇತೃತ್ವದಲ್ಲಿಪ್ರತಿಭಟನಾ ರಾರಯಲಿ ನಡೆಸಿದ್ದ ಹಿಂದೂ ಸಮುದಾಯ ಮುಖಂಡರು, ಬಾಂಗ್ಲಾದೇಶದಲ್ಲಿಭಾಗವಧ್ವಜ ಹಾರಿಸಿದ್ದರು. ಕೇಸರಿಧ್ವಜ ಹಾರಿಸಿದ್ದ ಚಿನ್ಮಯ್ ಪ್ರಭು ವಿರುದ್ಧ ಬಾಂಗ್ಲಾದೇಶ ಮಧ್ಯಂತರ ಸರಕಾರ ದೇಶದ್ರೋಹ ಸೇರಿದಂತೆ 18 ಪ್ರಕರಣ ದಾಖಲಿಸಿದೆ. ಬಾಂಗ್ಲಾದೇಶದಲ್ಲಿಹಿಂದೂ ಧಾರ್ಮಿಕ ಮುಖಂಡ ಚಿನ್ಮಯ್ ಬಂಧನದ ಮಾಹಿತಿಯನ್ನು ಕೇಂದ್ರ ಸರಕಾರ ಖಚಿತಪಡಿಸಿದೆ.