ಅಗರ್ತಲಾದ ಅಸಿಸ್ಟೆಂಟ್ ಹೈ ಕಮಿಷನ್ ಕಚೇರಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಬಾಂಗ್ಲಾದೇಶ ಸಮನ್ಸ್ ಜಾರಿ ಮಾಡಿದೆ .
ನಾವು ನಮ್ಮ ಕಳವಳವನ್ನು ವ್ಯಕ್ತಪಡಿಸಲು ವರ್ಮಾ ಅವರಿಗೆ ವಿದೇಶಾಂಗ ಸಚಿವಾಲಯಕ್ಕೆ ಬರುವಂತೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಂಗಾಮಿ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಹಮೀದುಲ್ಲಾ ಅವರ ಕರೆಯ ಮೇರೆಗೆ ಸಂಜೆ 4 ಗಂಟೆಗೆ ಭಾರತದ ಹೈಕಮಿಷನ್ ವಿದೇಶಾಂಗ ಸಚಿವಾಲಯವನ್ನು ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಭಾರತ, ಬಾಂಗ್ಲಾದೇಶದೊಂದಿಗೆ “ಸ್ಥಿರವಾದ, ರಚನಾತ್ಮಕ ಸಂಬಂಧ” ಹೊಂದಲು ಬಯಸುತ್ತದೆ. ಯಾವುದೇ ಒಂದು ಸಮಸ್ಯೆಯು ದ್ವಿಪಕ್ಷೀಯ ಸಂಬಂಧಗಳಿಗೆ ಅಡ್ಡಿಯಾಗಬಾರದು ಎಂದು ವರ್ಮಾ ಪ್ರತಿಕ್ರಿಯಿಸಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ” ಎಂದು ಹಂಗಾಮಿ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಹಮೀದುಲ್ಲಾ ಹೇಳಿದ್ದಾರೆ.
ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಹಿಂದೂ ಮುಖಂಡ ಚಿನ್ಮೋಯ್ ಕೃಷ್ಣದಾಸ್ ಅವರ ಬಂಧನವನ್ನು ಖಂಡಿಸಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಉದ್ರಿಕ್ತ ಜನರ ಗುಂಪು ಅಸಿಸ್ಟೆಂಟ್ ಹೈ ಕಮಿಷನ್ ಕಚೇರಿ ಆವರಣಕ್ಕೆ ನುಗ್ಗಿ ಗೇಟ್, ಧ್ವಜಸ್ತಂಭ ಹಾಳು ಮಾಡಿದ್ದು ಘಟನೆಗೆ ಭಾರತ ತೀವ್ರ ವಿಷಾದ ವ್ಯಕ್ತಪಡಿಸಿತ್ತು.