ಬಾಂಗ್ಲಾದೇಶ ಬ್ಯಾಂಕ್ ಜುಲೈ ದಂಗೆಯ ಫೀಚರ್ ಗಳನ್ನು ಒಳಗೊಂಡಂತೆ ಹೊಸ ನೋಟುಗಳನ್ನು ಮುದ್ರಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಕೇಂದ್ರೀಯ ಬ್ಯಾಂಕ್ ಪ್ರಕಾರ, ಮಧ್ಯಂತರ ಸರ್ಕಾರದ ಸೂಚನೆಗಳ ಮೇರೆಗೆ ಟಕಾ 20, 100, 500 ಮತ್ತು 1,000 ರ ನೋಟುಗಳನ್ನು ಮುದ್ರಿಸಲಾಗುತ್ತಿದೆ.
ಸದ್ಯ ಮುದ್ರಿಸಲಾಗುತ್ತಿರುವ ಹೊಸ ಕರೆನ್ಸಿ ನೋಟುಗಳಲ್ಲಿ ‘ಬಂಗಬಂಧು’ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರಗಳು ಇರುವುದಿಲ್ಲ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಧಾರ್ಮಿಕ ರಚನೆಗಳು, ಬಂಗಾಳಿ ಸಂಪ್ರದಾಯಗಳು ಮತ್ತು ಜುಲೈ ದಂಗೆಯ ಸಮಯದಲ್ಲಿ ಚಿತ್ರಿಸಿದ ‘ಗೀಚುಬರಹ’ಗಳನ್ನು ಕರೆನ್ಸಿ ನೋಟುಗಳಲ್ಲಿ ಸೇರಿಸಲಾಗುತ್ತಿದೆ.
‘ಮುಂದಿನ ಆರು ತಿಂಗಳೊಳಗೆ ಹೊಸ ನೋಟು ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ನಾನು ಭಾವಿಸುತ್ತೇನೆ’ ಎಂದು ಬಾಂಗ್ಲಾದೇಶ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಹುಸ್ನೇರಾ ಶಿಖಾ ಹೇಳಿದ್ದಾರೆ. ವಿವಾದಾಸ್ಪದ ಉದ್ಯೋಗ ಕೋಟಾದ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ, ರಾಷ್ಟ್ರಪಿತ ಎಂದು ಕರೆಯಲ್ಪಡುವ ಶೇಖ್ ಮುಜೀಬ್ ಅವರ ಪ್ರತಿಮೆಗಳು ದಾಳಿಗೆ ಒಳಗಾಯಿತು. ಅವರ ಮಗಳು, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಆಗಮಿಸಿ ಆಶ್ರಯ ಪಡೆದಿದ್ದಾರೆ.
ಶೇಖ್ ಹಸೀನಾ ಅವರು ಇತ್ತೀಚಿನ ಹೇಳಿಕೆಗಳಲ್ಲಿ ಡಾ ಯೂನಸ್ ಅವರನ್ನು ನೇರವಾಗಿ ಗುರಿಯಾಗಿಸಿದ್ದಾರೆ, ಅವರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಆಕೆಯ ಹೇಳಿಕೆಗಳನ್ನು ದ್ವೇಷದ ಭಾಷಣ ಎಂದು ಬಣ್ಣಿಸಿದೆ ಮತ್ತು ದೇಶದ ನಾಯಕರು ಯೂನಸ್ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.