ಬೆಂಗಳೂರು:- ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಕೇಸ್ ಗೆ ಸಂಬಧಪಟ್ಟಂತೆ ಸಾಯೋ ಮುನ್ನ ರಾಷ್ಟ್ರಪತಿ, ಸುಪ್ರೀಂ ಜಡ್ಜ್ಗೆ ಅತುಲ್ ಸುಭಾಷ್ ಮೇಲ್ ಮಾಡಿರುವುದು ತಿಳಿದು ಬಂದಿದೆ.
ಡಿಸೆಂಬರ್ 9ರಂದು ರಾತ್ರಿ 1 ಗಂಟೆ 31 ನಿಮಿಷಕ್ಕೆ ಟೆಕ್ಕಿ ಅತುಲ್ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್ ಜಡ್ಜ್ಗೆ ಇ-ಮೇಲ್ ಒಂದನ್ನು ಕಳುಹಿಸಿದ್ದು, ನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ. ಮನಸ್ಸು ಮಾಡಿದರೆ ದೇಶದಲ್ಲಿ ಬದಲಾವಣೆ ತರಬಹುದು.
ಅಸಮರ್ಥ ಮತ್ತು ಪಕ್ಷಪಾತಿ ನ್ಯಾಯಾಧೀಶರನ್ನು ವಜಾಗೊಳಿಸಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆ ತರಬೇಕು ಎಂಬ ಈ ರೀತಿಯಲ್ಲಿ ಹಲವು ವಿಚಾರಗಳನ್ನ ಉಲ್ಲೇಖಿಸಿದ್ದು, ತನ್ನ ಮೇಲೆ ಸುಳ್ಳು ಕೇಸ್, ಸೆಕ್ಷನ್ಗಳು ಹಾಕಿದ್ದಾರೆಂದು ಕೂಡ ಮೇಲ್ನಲ್ಲಿ ಉಲ್ಲೇಖಿಸಿದ್ದಾರೆ.
ಎರಡು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕ್ಕಿ ಅತುಲ್ ಸುಭಾಷ್ 40 ಪುಟಗಳ ಡೆತ್ ನೋಟ್ ಬರೆದಿದ್ದು, ಆತನ ಸಾವಿಗೆ ಆಕೆಯ ಪತ್ನಿ ಮನೆಯವರ ಮಾನಸಿಕ ಹಿಂಸೆಯೇ ಕಾರಣ ಅನ್ನೋದು ಬಟಬಯಲಾಗಿತ್ತು. ಹೀಗಾಗಿಯೇ ಅತುಲ್ ಸಹೋದರ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅತುಲ್ ಸಾವಿಗೆ ಕಾರಣರಾದವರ ವಿರುದ್ದ ದೂರು ನೀಡಿದ್ದು, ಆತ್ಮಹತ್ಯೆ ಕಾರಣ ಏನು ಅನ್ನೋದನ್ನ ಬಿಚ್ಚಿಟ್ಟಿದ್ದರು.