ಬೆಂಗಳೂರು :- ರಾಮೇಶ್ವರ ಕೆಫೆ’ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತನ ಎನ್ಐಎ ಕಸ್ಟಡಿ ಅಂತ್ಯಗೊಂಡಿದೆ.
ಮಾರ್ಚ್ 28ರಂದು ಶಂಕಿತನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.
ಕೇಂದ್ರದ ಬೆಲೆ ಏರಿಕೆಯಿಂದ ಬಡವ ಮನೆ ಕಟ್ಟಲು ಆಗುತ್ತಿಲ್ಲ – ಕೃಷ್ಣ ಬೈರೇಗೌಡ
ತಲೆಮರೆಸಿಕೊಂಡಿರುವ ಶಂಕಿತರಾದ ಮುಸಾವೀರ್ ಹುಸೇನ್ ಶಬೀಬ್ ಹಾಗೂ ಅಬ್ದುಲ್ ಮತೀನ್ ತಾಹಾನ ಸೂಚನೆ ಮೇರೆಗೆ ಬಾಂಬ್ ತಯಾರಿಸಲು ಷರೀಫ್ ಕಚ್ಚಾ ಸಾಮಗ್ರಿ ಪೂರೈಸುತ್ತಿದ್ದ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.
ವಿಚಾರಣೆಯಲ್ಲಿ ಅಬ್ದುಲ್ ಮತೀನ್ ತಾಹಾ ಸೂಚನೆ ಮೇರೆಗೆ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಸ್ಫೋಟಕ್ಕೆ ಷರೀಫ್ ಸಂಚು ರೂಪಿಸಿದ್ದ ಎಂಬುದು ಗೊತ್ತಾಗಿದೆ. ಈ ಹಿಂದೆ ನಡೆದ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಪೋಟದ ಪ್ರಯೋಗ ಹಾಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲೂ ಈತ ಸಹಕಾರ ನೀಡಿದ್ದ. ಈ ಸಹಾಯಕ್ಕಾಗಿ ತಲೆಮರೆಸಿಕೊಂಡಿರುವ ಶಂಕಿತರಿಂದ ಹಣ ಪಡೆದುಕೊಂಡಿದ್ದ. ಅದಕ್ಕೆ ಪೂರಕ ಸಾಕ್ಷ್ಯಾಧಾರಗಳು ದೊರೆತಿವೆ