ಬೆಂಗಳೂರು: 5 ಕೋಟಿ ಮೌಲ್ಯದ ಹಳೇ ನೋಟುಗಳನ್ನು ನಾಶಪಡಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ಪೊಲೀಸರು 5 ಕೋಟಿಗೂ ಹೆಚ್ಚು ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಆದರೆ ಈ ಹಳೇ ನೋಟುಗಳನ್ನು ಆರ್ಬಿಐಗೆ (Reserve Bank Of India) ನೀಡಿ ಬದಲಾವಣೆಗೆ ಮುಂದಾಗಿದ್ದು ಆರ್ಬಿಐ ಕೂಡ ಹಳೇ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಈ ಹಿನ್ನೆಲೆ ಇದೀಗ ಹಳೇ ನೋಟುಗಳಿಗೆ ಬೆಂಕಿ ಇಡಲು ಪೊಲೀಸರು ನಿರ್ಧರಿಸಿದ್ದಾರೆ.
ಬೆಂಗಳೂರಿನ ಪೊಲೀಸರ ಬಳಿ ಇದೆ ಐದು ಕೋಟಿಗೂ ಅಧಿಕ ಹಳೆಯ ನೋಟಿನ ಕಂತೆಗಳು ಇಡೀ ಬೆಂಗಳೂರು ಪೊಲೀಸರ ಬಳಿ ಇದೆ ಹಳೆಯ 1 ಸಾವಿರ ಹಾಗೂ 500 ಮುಖಬೆಲೆಯ ನೋಟುಗಳು ಹಳೆಯ 500 ಹಾಗೂ ಸಾವಿರ ಮುಖಬೆಲೆಯ ನೋಟುಗಳಿಗಿಲ್ಲ ನಯ ಪೈಸೆ ಬೆಲೆ ಆ ನೋಟುಗಳೀಗ ಕೇವಲ ಕಾಗದದ ಚೂರಷ್ಟೇ ಹೀಗಂತ ಹೇಳಿದ್ದು ಬೇರೆ ಯಾರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.
ಬೆಂಗಳೂರಿನ ಹಲವು ಪ್ರಕರಣದಲ್ಲಿ 5 ಕೋಟಿಗೂ ಅಧಿಕ ಹಳೆಯ ನೋಟುಗಳನ್ನ ಸೀಜ್ ಮಾಡಿರೋ ಪೊಲೀಸರು ಬೇರೆ ಬೇರೆ ಪ್ರಕರಣದಲ್ಲಿ ಸೀಜ್ ಮಾಡಿರೋ ಹಳೆಯ ನೋಟುಗಳು ಇದು ಹಳೆಯ ನೋಟುಗಳಾದ ಕಾರಣ ಪೊಲೀಸರು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡೋಕು ಆಗ್ತಿಲ್ ಅತ್ತ ಆರ್ ಬಿ ಕೂಡ ಈ ಹಣವನ್ನ ಸ್ವೀಕಾರ ಮಾಡ್ತಿಲ್ಲ ನೋಟು ಅಮಾನ್ಯೀಕರಣ (ಡಿಮಾನಿಟರೈಸೇಷನ್) ಬಳಿಕ ಇದರ ಬೆಲೆ ಕಳೆದುಕೊಂಡಿದೆ.
ಇದೀಗ ಕೊಟ್ಟ ಕಾಲಾವಕಾಶ ಕೂಡ ಮುಗಿದು ಹೋಗಿದೆ ಹೀಗಾಗಿ ಇದನ್ನ ಸ್ವೀಕರಿಸಲು ಸಾಧ್ಯವಿಲ್ಲ ಎಂದಿರುವ ಆರ್ ಬಿ ಐ. ಹೀಗಾಗಿಯೇ ಅಷ್ಟೂ ಹಣವನ್ನು ಸುಟ್ಟು ಹಾಕಲು ನಿರ್ಧರಿಸಿರುವ ಪೊಲೀಸರು ಕೋರ್ಟ್ ಅನುಮತಿ ಪಡೆದು ಬಳಿಕ ಸುಟ್ಟು ಹಾಕಲು ನಿರ್ಧಾರವಷ್ಟೇ ಒಂದು ವೇಳೆ ಕೋರ್ಟ್ ಅನುಮತಿ ಕೊಟ್ಟರೆ ಐದು ಕೋಟಿಗೂ ಅಧಿಕ ಹಣಕ್ಕೆ ಕೊಳ್ಳಿ ಇಡಲಿರುವ ಪೊಲೀಸರು.