ಬೆಂಗಳೂರು: ಎನ್ಡಿಎ 400 ಸ್ಥಾನ ದಾಟುತ್ತಾ? ಇಂಡಿಯಾ ಮೈತ್ರಿಕೂಟ 295 ಸ್ಥಾನ ಗೆಲ್ಲುತ್ತಾ? ಎಲ್ಲಾ ಪ್ರಶ್ನೆಗಳಿಗೂ ಇವತ್ತು ಉತ್ತರ ಸಿಗಲಿದೆ. ಇಂಡಿಯಾ ಮೈತ್ರಿಕೂಟ ತಾನಂದುಕೊಂತೆ 295 ಸೀಟುಗಳನ್ನ ಗೆದ್ದು ಅಚ್ಚರಿ ಸೃಷ್ಟಿಸುತ್ತಾ? ಇಂತಹ ಹತ್ತಾರು ಪ್ರಶ್ನೆಗಳು ರಾಜಕೀಯ ನಾಯಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕಾಡುತ್ತಿವೆ. ಇಂದು ಹೊರಬೀಳಲಿರುವ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಕೇಂದ್ರದಲ್ಲಿ ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಅನ್ನೋದು ಕುತೂಹಲ ಇಮ್ಮಡಿಗೊಳಿಸಿದೆ.
FRUITS ID: ರೈತರೇ ಗಮನಿಸಿ.. ಬರ ಪರಿಹಾರ ಪಡೆಯಲು ʼʼಫ್ರೂಟ್ಸ್ ಐಡಿʼʼ ಕಡ್ಡಾಯ..!
ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಸಮಸ್ಯೆ, ಗೊಂದಲಗಳ ಕಾರಣದಿಂದಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರ ಲಗ್ಗೆ ಇಟ್ಟಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವಾತಂತ್ರ್ಯ ಹೋರಾಟಗಾರರ ಮನೆತನ, ಪ್ರತಿಷ್ಠಿತ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ ರಾಜೀವ್ ಗೌಡ ಅವರು ಸ್ಪರ್ಧಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ- ಮುನ್ನಡೆಯಲ್ಲಿ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಹಿನ್ನಡೆಯಲ್ಲಿದ್ದಾರೆ.