ಬೆಂಗಳೂರು: ಮೂರು ಮಹಾನಗರ ಪಾಲಿಕೆ ಮಾಡಿದ್ರೆ, ಅಭಿವೃದ್ಧಿ ಮಾಡಬಹುದು ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಆಳವಾದ ಅಧ್ಯಯನ ಮೂಲಕ ನಿಂತ ನೀರಾಗಿರುವ ದಲಿತ ಚಳುವಳಿಯನ್ನು ಹರಿಯುವ ನೀರಾಗಿಸಬೇಕಾದ ಅನಿವಾರ್ಯವಿದೆ – ಎನ್.ವೆಂಕಟೇಶ್
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬೆಂಗಳೂರು ಮೂರು ಮಹಾನಗರ ಪಾಲಿಕೆ ಆಗಬೇಕು, ಕೆಲವರು ಐದು ಆಗಬೇಕು ಅಂತಿದ್ದಾರೆ, ಆದರೆ ನನ್ನ ಪ್ರಕಾರ ಬೆಂಗಳೂರು ಸೆಂಟ್ರಲ್, ಬೆಂಗಳೂರು ನಾರ್ತ್, ಬೆಂಗಳೂರು ಸೌತ್ ಆದರೆ, ಆಗ ಬೆಂಗಳೂರು ಹೆಚ್ಚು ಅಭಿವೃದ್ಧಿ ಮಾಡಬಹುದು, ಬೆಂಗಳೂರು ಎಷ್ಟು ಬೆಳೆದಿದೆ ಎಂದು ನೀವು ನೋಡಿದ್ದೀರಾ, ಒಬ್ಬ ಕಮಿಷನರ್ ಇದ್ರೆ ಸಾಕಾವುದಿಲ್ಲ, ಬಹಳ ಎತ್ತರ ಬೆಳೆದಿದೆ, ಒಂದೇ ಮೇಯರ್, ಒಂದೇ ಕಮಿಷನರ್ ಇಟ್ಟುಕೊಂಡು ಅಭಿವೃದ್ಧಿಯಾವುದಿಲ್ಲ, ಹಾಗಾಗಿ ಮೂರು ಮಹಾನಗರಪಾಲಿಕೆ ಆದರೆ ಹೆಚ್ಚು ಅಭಿವೃದ್ಧಿ ಮಾಡಬಹುದು ಎಂದರು.