ಬೆಂಗಳೂರು:- ಮಾವು ರಫ್ತಿನಲ್ಲಿ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ಹೊಸ ದಾಖಲೆ ಬರೆದಿದೆ.
2024ನೇ ಸಾಲಿನಲ್ಲಿ 822 ಮೆಟ್ರಿಕ್ ಟನ್ ಮಾವಿನ ಹಣ್ಣಿನ ಸಾಗಾಟಣೆ ಮಾಡುವ ಮೂಲಕ ಈ ಬಾರಿ ದಾಖಲೆ ಬರೆದಿದೆ. ಕಳೆ ವರ್ಷ 685 ಮೆಟ್ರಿಕ್ ಟನ್ ಮಾವಿನ ಹಣ್ಣನ್ನು ರಫ್ತು ಮಾಡಿದ್ದು ಈ ಬಾರಿ ಒಟ್ಟು 27 ಲಕ್ಷ ಮಾವಿನ ಹಣ್ಣನ್ನು ರಫ್ತು ಮಾಡುವ ಮೂಲಕ ಹಿಂದಿನ ಋತುವಿಗೆ ಹೋಲಿಸಿದರೆ ಶೇ.59ರಷ್ಟು ಹೆಚ್ಚಳ ಕಂಡಿದೆ.
SC, ST ಒಳ ಮೀಸಲಾತಿ ಕಾನೂನುಬದ್ಧ: ಸುಪ್ರೀಂ ತೀರ್ಪಿಗೆ ಹುಬ್ಬಳ್ಳಿಯಲ್ಲಿ ವಿಜಯೋತ್ಸವ!
ಈ ಋತುವಿನಲ್ಲಿ ಯುಎಸ್ಗೆ ಹೆಚ್ಚು ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗಿದ್ದು ಪ್ರಮುಖವಾಗಿ ವಾಷಿಂಗ್ಟನ್ ಡಲ್ಲಾಸ್ (ಐಎಡಿ), ಡಲ್ಲಾಸ್-ಫೋರ್ಟ್ ವರ್ತ್ (ಡಿಎಫ್ಡಬ್ಲ್ಯೂ) ಮತ್ತು ಸ್ಯಾನ್ ಫ್ರಾನ್ಸಿಸ್ಕೋ (ಎಸ್ಎಫ್ಒ) ನಂತಹ ವಿಮಾನ ನಿಲ್ದಾಣಗಳು ಭಾರತೀಯ ಮಾವು ಸಾಗಣೆಗೆ ಪ್ರಮುಖ ತಾಣಗಳಾಗಿ ಹೊರಹೊಮ್ಮಿವೆ. ಇದರ ಜೊತೆಗೆ, ಚಿಕಾಗೋ (ಒಆರ್ಡಿ), ಸಿಯಾಟಲ್ (ಸಿಇಎ), ದುಬೈ (ಡಿಎಕ್ಸ್ಬಿ), ಲಂಡನ್ (ಎಲ್ಎಚ್ಆರ್) ಮತ್ತು ಹೂಸ್ಟನ್ (ಐಎಎಚ್) ನಂತಹ ಪ್ರಮುಖ ವಿಮಾನ ನಿಲ್ದಾಣಗಳು ಸೇರಿದಂತೆ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರಿನಿಂದ ಮಾವಿನ ಹಣ್ಣು ರಫ್ತಾಗಿದೆ. ಆ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತೀಯರ ಬೆಳೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳಿಗೆ ತಲುಪಿಸಲು ಸಮರ್ಥವಾಗಿದೆ.