ಚಾಮರಾಜನಗರ: ಹುಲಿಗಳ ಕಾದಾಟದಲ್ಲಿ ತೀವ್ರ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಹುಲಿಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ವ್ಯಾಪ್ತಿಯಲ್ಲಿ ನಡೆದಿದೆ.
ಬಂಡೀಪುರ ಹುಲಿ ಯೋಜನೆಯ ಮದ್ದೂರು ಅರಣ್ಯ ವಲಯದ ಮದ್ದೂರು ಕಾಲೋನಿಯ ಡಿಲೈನ್ ವ್ಯಾಪ್ತಿಯ ದೊಡ್ಡಕರಿಯಯ್ಯ ಎಂಬುವವರ ಜಮೀನಿನಲ್ಲಿ ನಿತ್ರಾಣಗೊಂಡಿದ್ದ ಹುಲಿ ಸಾವನ್ನಪ್ಪಿದೆ.
ಕಾದಾಟದಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಹುಲಿಯು ಪತ್ತೆಯಾಗಿತ್ತು ಎನ್ನಲಾಗಿದೆ.
ಎರಡು ಹುಲಿಗಳ ಕಾದಾಟದಲ್ಲಿ ಮೃತ ಪಟ್ಟ 3 ವರ್ಷ ಪ್ರಾಯದ ಗಂಡು ಹುಲಿಯ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು ಎನ್ನಲಾಗಿದೆ.
ಮೃತ ಪಟ್ಟ ಹುಲಿ ಕಳೆಬರಹದ ಅಂತ್ಯಸಂಸ್ಕಾರವು ಅರಣ್ಯದೊಳಗೆ ನಡೆಯಿತು.
ಈ ವೇಳೆಯಲ್ಲಿ ಘಟನಾ ಸ್ಥಳದಲ್ಲಿ ಬಂಡೀಪುರ ಸಿ.ಎಫ.ರಮೇಶಕುಮಾರ್, ಎಸಿಎಫ ರವೀಂದ್ರ, ಪಶುವೈದ್ಯ ಡಾ.ಮಿರ್ಜಾ ವಾಸೀಂ , ರಘುರಾಂ,ಸೇರಿದಂತೆ ಸಿಬ್ಬಂಧಿಗಳು ಇದ್ದರು