ಬೆಂಗಳೂರು:- ಬಕ್ರೀದ್ ಹಬ್ಬದ ಹಿನ್ನೆಲೆ ಪ್ರತಿ ವರ್ಷವೂ ಭರ್ಜರಿ ಕುರಿ ವ್ಯಾಪಾರ ನಡೆಯಲಿದೆ. ಎಂದಿನಂತೆ ಈ ಬಾರಿಯೂ ಬಗೆ ಬಗೆಯ ತಳಿಗಳ ಕುರಿಗಳು ಬಜಾರಿಗೆ ಬಂದಿದೆ. ನಗರದ ಅತಿ ದೊಡ್ಡ ಕುರಿ ಮಾರುಕಟ್ಟೆಯಾಗಿರುವ ಈದ್ಗಾ ಮೈದಾನದಲ್ಲಿ ಈಗಲೇ ಭರ್ಜರಿ ವ್ಯಾಪಾರ ಶುರುವಾಗಿದೆ.
Bengaluru: ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ..
ಜೂನ್ 17ಕ್ಕೆ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನಡೆಯಲಿದೆ. ಈ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕುರಿ, ಮೇಕೆ ವ್ಯಾಪಾರ ಜೋರಾಗಿದೆ.
ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ಬಕ್ರೀದ್ ಸಮೀಪಿಸಿದೆ. ಜೂನ್ 17ಕ್ಕೆ ಸಾರ್ವತ್ರಿಕವಾಗಿ ನಾಡಿನೆಲ್ಲೆಡೆ ಬಕ್ರೀದ್ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರಿಗೆ ಭಾರೀ ಪ್ರಮಾಣದಲ್ಲಿ ಕುರಿ, ಮೇಕೆಗಳು ಬಂದಿಳಿದಿದೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ನಗರದ ಕುರಿ ಮಾರುಕಟ್ಟೆಗೆ ಇಷ್ಟೊಂದು ಮೇಕೆ ಕುರಿಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು, ಭರ್ಜರಿ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ ರೈತರು. ಆದರೆ ಗ್ರಾಹಕರು ಈ ಬಾರಿ ಕುರಿಗಳ ರೇಟ್ ಹೆಚ್ಚಳವಾಗಿದೆ ಎನ್ನುತ್ತಿದ್ದಾರೆ.
ನಗರದ ಚಾಮರಾಜಪೇಟೆ, ಟ್ಯಾನರಿ ರೋಡ್, ಆರ್ ಟಿನಗರ ಸೇರಿದಂತೆ ನಗರದ ಕೆಲವು ಭಾಗದಲ್ಲಿ ಭರ್ಜರಿಯಾಗಿ ಕುರಿ ವ್ಯಾಪಾರ ನಡೆಯುತ್ತಿದೆ. ಎಂದಿನಂತೆ ಈ ಬಾರಿಯೂ ನಾಟಿ ಕುರಿ, ಬನ್ನೂರು, ಮೋಟಾ ಬನ್ನೂರು, ಕಿರಗಲ್ ಕುರಿ ಹಾಗೂ ಟಗರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. 15 ಸಾವಿರದಿಂದ 1 ಲಕ್ಷದ ವರೆಗೆ ವಿವಿಧ ತಳಿಯ ಕುರಿಗಳು ಬಜಾರ್ ನಲ್ಲಿ ಮಾರಾಟವಾಗುತ್ತಿದೆ
ಈ ಬಾರಿ ಬೆಂಗಳೂರಿಗೆ ಪಕ್ಕದ ರಾಮನಗರ, ತುಮಕೂರು, ಶಿರಾ, ಚಿತ್ರದುರ್ಗ, ಕೋಲಾರ, ಮೈಸೂರು ಭಾಗಗಳಿಂದ ಅತಿ ಹೆಚ್ಚು ಕುರಿಗಳನ್ನು ರೈತರು ಮಾರಾಟಕ್ಕಿಟ್ಟಿದ್ದಾರೆ. ಕೊರೋನಾ ಬಳಿಕ ಕುಗ್ಗಿರುವ ಹೈನುಗಾರಿಕೆ ಚಟುವಟಿಕೆ ಈ ಬಾರಿಯ ಬಕ್ರೀದ್ ನಲ್ಲಿ ಚೇತರಿಕೆ ಕಾಣುವ ವಿಶ್ವಾಸದಲ್ಲಿದ್ದಾರೆ ರೈತರು.
![](https://ainlivenews.com/wp-content/uploads/2024/01/Ad-Banner-copy-scaled.jpg)