ಬೆಂಗಳೂರು:- ಬೇಕರಿ ತಿಂಡಿ ಪ್ರಿಯರು ಮಿಸ್ ಮಾಡ್ದೆ ಈ ಸುದ್ದಿ ನೋಡಿ. ಖಾರಾ ಮಿಕ್ಚರ್, ಚಿಪ್ಸ್ ಸೇರಿ ಇನ್ನೂ ಇತ್ಯಾದಿ ತಿನ್ನುತ್ತಿದ್ದರೆ ಇಂದೇ ಬಿಟ್ಟುಬಿಡಿ. ಇಲ್ಲಾಂದ್ರೆ ನಿಮ್ಮ ಪ್ರಾಣಕ್ಕೆ ಕಂಟಕ ಆಗಬಹುದು.
ಕೇರಳದಿಂದ ಆಮದು ಆಗುವ ಖಾರಾ ಮಿಕ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫ್ರೂಟ್ಸ್ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು: ಕರ್ನಾಟಕ ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರವಾಸ ಭಾಗ್ಯ..!
ಕಳೆದ ಮೂರು ತಿಂಗಳುಗಳಲ್ಲಿ ಕೇರಳದಿಂದ ರಾಜ್ಯದ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಖಾರಾ ಮಿಕ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫೂಟ್ಸ್ಗಳು, ಸಿಹಿತಿಂಡಿಗಳು ಸೇರಿದಂತೆ ಹಲವು ವಿಧದ ಆಹಾರ ಪದಾರ್ಥಗಳ 90 ಮಾದರಿಗಳನ್ನು ಸಂಗ್ರಹಿಸಿ ಇಲಾಖೆ ಪರಿಶೀಲನೆ ನಡೆಸಿದೆ.
ಅವುಗಳಲ್ಲಿ 31 ಮಾದರಿಗಳಿಗೆ Alura Red, Carmoisine, Tartrazine, Sunset Yellow ಸೇರಿದಂತೆ ಕೃತಕ ಬಣ್ಣಗಳನ್ನು ಬಳಸಿರುವುದು ವಿಶ್ಲೇಷಣಾ ಫಲಿತಾಂಶದಲ್ಲಿ ಖಚಿವಾಗಿದೆ. ಅಲ್ಲದೇ, ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೆ ಇರುವುದು, ತಯಾರಿಕಾ ದಿನಾಂಕವನ್ನು ನಮೂದು ನೊಂದಣಿ/ಪರವಾನಿಗೆ ಸಂಖ್ಯೆ ಮುದ್ರಿತವಾಗಿಲ್ಲ.
ಈ ಎಲ್ಲ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ, ಈ ಪದಾರ್ಥಗಳನ್ನು ತಯಾರಿಸುವ ತಯಾರಿಕ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗಣಮಟ್ಟ ಇಲಾಖೆ ಆಯುಕ್ತರಿಗೆ ಮತ್ತು ಕೇರಳ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಅಲ್ಲದೇ, ಚೀನಾದಿಂದ ಆಮದು ಆಗುತ್ತಿದೆ ಎಂದು ಹೇಳಲಾದ ಬೆಳ್ಳುಳ್ಳಿಗಳನ್ನೂ ಇಲಾಖೆ ಪರಿಶೀಲನೆ ನಡೆಸಿ ವರದಿ ನೀಡಿದೆ. ಹಾಗೇ, ದೀಪಾವಳಿ ಸಂದರ್ಭದಲ್ಲಿ ಮಾರಾಟವಾದ ಸಿಹಿ ತಿಂಡಿಗಳನ್ನೂ ಕೂಡ ಇಲಾಖೆ ಪರೀಕ್ಷಿಸಿ ವರದಿ ನೀಡಿದೆ.
ಚೀನಾ ದೇಶದಿಂದ ಸರಬರಾಜಾಗುತ್ತಿರುವುದಾಗಿ ಹೇಳಲಾದ ಕೃತಕ ಅಥವಾ ನಿಷೇಧಿತ ಬೆಳ್ಳುಳ್ಳಿಯು ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಬಗ್ಗೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ವಿಶೇಷ ಆಂದೋಲನ ಕೈಗೊಂಡು, ರಾಜ್ಯಾದ್ಯಂತ 154 ಬೆಳ್ಳುಳ್ಳಿ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿತು.
147 ಮಾದರಿಗಳಲ್ಲಿ ಸುರಕ್ಷಿತ ಮತ್ತು 07 ಮಾದರಿಗಳಲ್ಲಿ ಫಂಗಸ್ ಬೆಳವಣಿಗೆಯಾಗಿದ್ದು, ಕೊಳೆತಿದ್ದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿ ನೀಡಿದೆ.