ತುಮಕೂರು:-ಅಕ್ರಮ ಗೋವುಗಳ ಸಾಗಣೆ ಮಾಡುತ್ತಿದ್ದ ವಾಹನವನ್ನು ಬಜರಂಗದಳ ಪತ್ತೆಹಚ್ಚಿದೆ. ತುಮಕೂರಿನ ಟೋಲ್ ಬಳಿ 20 ಗೋವುಗಳ ಸಾಗಾಟ ಬೆಳಕಿಗೆ ಬಂದಿದೆ.
ಈ ಬಂಡೆಯ ತುಂಡಿನ ಜೊತೆ ಮಲಗಿದ್ರೆ, ಮಕ್ಕಳಿಲ್ಲದ ಮಹಿಳೆ ಗರ್ಭ ಧರಿಸುವುದು ಖಚಿತ!
ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಅಕ್ರಮ ಸಾಗಾಣೆ ಆರೋಪ ಕೇಳಿ ಬಂದಿದೆ. ಕಂಟೇನರ್ ನಲ್ಲಿ 20 ಗೋವುಗಳನ್ನು ಹಿಂಸಾತ್ಮಕ ರೀತಿ ಅಕ್ರಮ ಕಸಾಯಿ ಖಾನೆಗೆ ಸಾಗಿಸುವ ವೇಳೆ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕಂಟೇನರ್ ತಪಾಸಣೆ ವೇಳೆ ಬಜರಂಗದಳ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ ಮಾಡಲಾಗಿದೆ.
ಗೋ ಹತ್ಯೆ ನಿಷೇಧ ಕಾನೂನು ಕಾಯ್ದೆ 2020ರ ಅನ್ವಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.