ಭಾರತದಲ್ಲಿ ಸಿಎನ್ಜಿ ವಾಹನಗಳು ಭಾರೀ ಇದೆ. ಪೆಟ್ರೋಲ್, ಡೀಸೆಲ್ಗೆ ಹೋಲಿಸಿಕೊಂಡಿರೆ ಸಿಎನ್ಜಿ ಅಗ್ಗವಾಗಿ ಲಭ್ಯವಾಗುತ್ತಿದ್ದು ಇದರಿಂದ ಬಡವರು ಅರಾಮಾಗಿ ಪ್ರಯಾಣಿಸಬಹುದಾಗಿದೆ. ಕಾರು, ಆಟೋ, ಬೃಹತ್ ವಾಹನಗಳು ಸಿಎನ್ಜಿ ಆಯ್ಕೆಯೊಂದಿಗೆ ಬರುತ್ತವೆಯಾದ್ರೂ ಈವೆರೆಗೆ ದ್ವಿಚಕ್ರ ವಾಹನಗಳಿಗೆ ಈ ಆಯ್ಕೆ ನೀಡಿರಲಿಲ್ಲ.
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಬಜಾಜ್ ವಿಶ್ವದ ಮೊದಲ ಸಿಎನ್ಜಿ ದ್ವಿಚಕ್ರ ವಾಹನವನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ಈ ಹೊಸ ಸಿಎನ್ಜಿ ಬೈಕ್ 2024ರ ದೀಪಾವಳಿ ವೇಳೆಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.
ಈ ಬೈಕ್ ಅನ್ನು ಬಿಡುಗಡೆ ಮಾಡುವ ಬಗ್ಗೆ ರಾಜೀವ್ ಬಜಾಜ್ ಧೃಡಪಡಿಸಿದ್ದಾರೆ. ಈಗಾಗಲೇ ಈ ಬೈಕ್ ಅನ್ನು ರಸ್ತೆಗಳಲ್ಲಿ ಪರೀಕ್ಷಿಸುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಈ ಹೊಸ ಬೈಕ್ಗೆ ಬಜಾಜ್ ಬ್ರೂಜರ್ ಎಂದು ನಾಮಕರಣ ಮಾಡಿದ್ದು, ಇದು 125 ಸಿಸಿ ಸಿಎನ್ಜಿ ಬೈಕ್ ಅನ್ನು ಮುಖ್ಯವಾಗಿ ಅರೆ-ನಗರ ಮತ್ತು ಗ್ರಾಮೀಣ ಭಾಗಗಳಲ್ಲಿನ ಗ್ರಾಹಕರಿಗಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಈ ಸಿಎನ್ಜಿ ಬೈಕ್ ಅನ್ನು ಅಗ್ಗದ ಬೆಲೆಗೆ ಬಿಡುಗಡೆ ಮಾಡುವ ನಿರೀಕ್ಷೆಗಳಿವೆ. ಸುಮಾರು 80 ಅಥವಾ 85 ಸಾವಿರ ರೂ. ನಡುವೆ ಇದರ ಬೆಲೆ ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಈಗಿರುವ ಪೆಟ್ರೋಲ್ ಚಾಲಿತ ಬೈಕ್ಗಳಿಗಿಂತ ದುಪ್ಪಟ್ಟು ಮೈಲೇಜ್ ನೀಡಲಿದೆಯಂತೆ.
ಸಿಎನ್ಜಿ ವಾಹನಗಳು ತಮ್ಮ ಪೆಟ್ರೋಲ್ ಆವೃತ್ತಿಗಳಿಗಿಂತ ಸ್ವಲ್ಪ ಕಡಿಮೆ ಪವರ್ ಉತ್ಪಾದಿಸುತ್ತವೆ. ಆದರೆ, ಮೈಲೇಜ್ ವಿಷಯದಲ್ಲಿ ಮತ್ತೊಂದು ಮಟ್ಟದಲ್ಲಿರುತ್ತದೆ. ಆದ್ದರಿಂದ, ಮುಂಬರುವ ಬಜಾಜ್ ಬ್ರೂಜರ್ 125 ಪರ್ಫಾಮೆನ್ಸ್ ವಿಷಯದಲ್ಲಿ ಅತ್ಯಾಕರ್ಷಕ ಮೋಟಾರ್ ಸೈಕಲ್ ಆಗಿರದೇ ಇರಬಹುದು, ಆದರೆ ಮೈಲೇಜ್ ವಿಷಯದಲ್ಲಿ ಇದು ಹೊಸ ಕ್ರಾಂತಿ ಸೃಷ್ಟಿಸಬಹುದು ಎನ್ನಲಾಗುತ್ತಿದೆ.
ಸಿಎನ್ಜಿ ಮೋಟಾರ್ ಸೈಕಲ್ ನಿರ್ಮಾಣಕ್ಕಿರುವ ದೊಡ್ಡ ಸವಾಲೆಂದರೆ ಸಿಲಿಂಡರ್ ಟ್ಯಾಂಕ್ ಅನ್ನು ಪ್ಯಾಕೇಜಿಂಗ್ ಮಾಡುವುದು. ಬಜಾಜ್ ಈ ಸಮಸ್ಯೆಯನ್ನು ಪರಿಹರಿಸಲು ಮೋಟಾರ್ ಸೈಕಲ್ ಉದ್ದಕ್ಕೂ, ಡಬಲ್ ಕ್ರೇಡಲ್ ಫ್ರೇಮ್ನ ಮಿತಿಯೊಳಗೆ ಇರಿಸುವ ಮೂಲಕ ಪರಿಹರಿಸಿದೆ ಎಂದು ತೋರುತ್ತಿದೆ. ಹಾಗಾಗಿಯೇ ಈ ಹಿಂದೆ ಪರೀಕ್ಷೆ ವೇಳೆ ಕಾಣಿಸಿಕೊಂಡಿದ್ದ ಸಿಎನ್ಜಿ ಬೈಕ್ ಯಾವುದೇ ಪೆಟ್ರೋಲ್ ಟ್ಯಾಂಕ್ ಒಳಗೊಂಡಿರಲಿಲ್ಲ.
ಆದ್ದರಿಂದ ಕಾರುಗಳಿಗಿಂತ ಭಿನ್ನವಾಗಿ ಬೈಕಿನಲ್ಲಿ ಯಾವುದೇ ಡ್ಯುಯಲ್ ಫ್ಯೂಯಲ್ ಪರಿಹಾರ ಲಭ್ಯವಿರುವುದಿಲ್ಲ. ಪೆಟ್ರೋಲ್ ಟ್ಯಾಂಕ್ ಇರಿಸಲಾದ ಪ್ರದೇಶವನ್ನು ಏರ್ ಫಿಲ್ಟರ್ ಗಳು, ಬ್ಯಾಟರಿಗಳನ್ನು ಬಳಸಲಾಗುತ್ತಿದೆ.