ದಾವಣಗೆರೆ:- ಪೋಕ್ಸೊ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಮುರುಘಾ ಶರಣರಿಗೆ ಇದೀಗ ಜಾಮೀನು ಮಂಜೂರಾಗಿದೆ.
ಮುರುಘಾ ಶರಣರ ಬಿಡುಗಡೆ ಹಿನ್ನೆಲೆ, ದಾವಣಗೆರೆಯಲ್ಲಿ ಮುರುಘಾ ಮಠದ ಭಕ್ತರಿಂದ ಸಂಭ್ರಮಾಚರಣೆ ಮನೆ ಮಾಡಿದೆ. ಬಸವಣ್ಣನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದ್ದಾರೆ. ದಾವಣಗೆರೆ ಜಯದೇವ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.
ದಾವಣಗೆರೆಗೆ ಆರೋಪಿ ಮುರುಘಾ ಶರಣರನ್ನ ಬರ ಮಾಡಿಕೊಳ್ಳುಲು ಭಕ್ತರು ಸಿದ್ದತೆ ಮಾಡಿದ್ದಾರೆ. ಎರಡು ಪೊಕ್ಸೊ ಪ್ರಕರಣದಲ್ಲಿ ಆರೋಪಿಯಾಗಿದ್ದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಮೊನ್ನೆ ಮೊದಲನೆ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ನಾಳೆ ಬೆಳಿಗ್ಗೆ ಮುರುಘಾ ಶರಣರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಚಿತ್ರದುರ್ಗ ಜಿಲ್ಲೆಗೆ ತೆರಳದಂತೆ ಷರತ್ತು ಹಾಕಿರುವ ಹಿನ್ನಲೆ, ಆರೋಪಿ ಮುರುಘಾ ಶರಣರು ದಾವಣಗೆರೆಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ ಎನ್ನಲಾಗಿದೆ.