ಹುಬ್ಬಳ್ಳಿ: ಮುಸ್ಲಿಮರು ಕೂಡ ಭಾರತದ ಪ್ರಜೆಗಳು ಅವರ ಬಗ್ಗೆ ಬಿಜೆಪಿಗೆ ಗೌರವವಿದೆ. ಆದರೆ ಕಾಂಗ್ರೆಸ್ ತುಷ್ಟಿಕರಣ ಮಾಡುತ್ತಿದೆ. ವೋಟ್ ಬ್ಯಾಂಕಿಗಾಗಿ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರು ಕಾಂಗ್ರೆಸ್ಸಿಗರು. ರಾಮ ಮಂದಿರದಲ್ಲಿ ಯಾವುದೇ ರಾಜಕಾರಣದ ವಿಷಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಶ್ರೀರಾಮನ ಬಗ್ಗೆ ಹಾಗೂ ಶ್ರೀರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸುವ ಕ್ಷುಲ್ಲಕ ಕಾರ್ಯವನ್ನು ಮಾಡುವ ಮೂಲಕ ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಜೋಶಿ ಕಿಡಿ ಕಾರಿದ್ದು, ನಾನು ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಇರಲಿಲ್ಲ. ಆದರೆ ಯಾರು ಸಹ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕೂಡಲೆ ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಆಗ್ತಿರೋ ಡ್ಯಾಮೇಜ್ ಕುರಿತು ಪ್ರತಿಕ್ರಿಸಲು ಜೋಶಿ ನಿರಾಕರಣೆ ಮಾಡಿದರು.
ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಶಾಸಕರಿಗೆ ವಿಶೇಷ ಸ್ಥಾನಮಾನ ವಿಚಾರವಾಗಿ ಮಾತನಾಡಿದ ಅವರು, ಸಿಎಂ ವಿರುದ್ಧ ಮಾತನಾಡಿದರೆ ವಿಶೇಷ ಸ್ಥಾನಮಾನ ಸಿಗುತ್ತೆ ಅಂತ ಖಾತ್ರಿ ಆಯ್ತು. ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ ಮತ್ತು ಆರ್ ವಿ ದೇಶಪಾಂಡೆಗೆ ನೀಡಿದ ವಿಶೇಷ ಸ್ಥಾನಮಾನದ ಕುರಿತು ಜೋಶಿ ವ್ಯಂಗ್ಯವಾಡಿದರು. ಸಿಎಂ ಗೆ ಬೈದರೆ ಒಂದು ಸ್ಥಾನಮಾನ ಸಿಗುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ. ಮುಂದೆ ಯಾರ್ಯಾರಿಗೆ ಏನೇನು ಸ್ಥಾನಮಾನ ಕೊಡ್ತಾರೋ ನೋಡಬೇಕು ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿದರು.
ಕುತೂಹಲ ಕೆರಳಿಸಿದ ಭೇಟಿ
ಹುಬ್ಬಳ್ಳಿಯ ಮಯೂರ ಎಸ್ಟೇಟ್ ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆಯಿತು. ಪ್ರಲ್ಹಾದ್ ಜೋಶಿಯವರ ಪಾದ ನಮಸ್ಕರಿಸಲು ಮುಂದಾದ ಈಶ್ವರಪ್ಪ ಈಶ್ವರಪ್ಪ ಬಾಗುತ್ತಿದ್ದಂತೆ ಹಿಂದೆ ಸರಿದ ಪ್ರಲ್ಹಾದ್ ಜೋಶಿ ಅವರುಈಶ್ವರಪ್ಪರನ್ನು ನೋಡುತ್ತಿದ್ದಂತೆಮಾಧ್ಯಮದವರನ್ನು ಕರೆದುಕೊಂಡೇ ಬಂದಿದ್ದೀರಾ ಎಂದು ಚಟಾಕಿ ಹಾರಿಸಿದರು.
ನೀವು ಹೇಳಿದ್ರೆ ದಿನವಿಡಿ ಸುದ್ದಿಯಾಗುತ್ತೆ ನಾವು ಇಬ್ಬರೂ ಒಂದೇ ಪಕ್ಷದವರು, ವಿಡಿಯೋ ಸಾಕು ಎಂದು ಮಾದ್ಯಮದವರಿಗೆ ಹಾಸ್ಯ ಬೇರೆ ಪಕ್ಷದವರು ಬಂದ್ರೆ ಸುದ್ದಿ ಎಂದ ಜೋಶಿ ಅವರು ನಂತರ ಗೌಪ್ಯವಾಗಿ ಈಶ್ವರಪ್ಪ ಪ್ರಚಲಿತ ರಾಜಕೀಯ ವಿದ್ಯಮಾನಗಳು ಸೇರಿದಂತ ಕೇಲ ಸಮಯ ಈಶ್ವರಪ್ಪ ಪುತ್ರ ಕಾಂತೇಶಗೆ ಹಾವೇರಿ ಲೋಕಸಭಾ ಚುನಾವಣೆ ಟಿಕೆಟ್ ಕುರಿತು ಸಹ ಚರ್ಚೆ ನಡೆಸಲಾಯಿತು.