ಬಾಗಲಕೋಟ:– ಬಾಗಲಕೋಟೆ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.
ಬಾಗಲಕೋಟೆ ನಗರಸಭೆ ಪುನಃ ಬಿಜೆಪಿ ಮಡಿಲಿಗೆ ಸೇರಿದ್ದು, ಅಧ್ಯಕ್ಷೆಯಾಗಿ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆಯಾಗಿ ಶೋಭಾ ರಾವ್ ಅವಿರೋಧ ಆಯ್ಕೆ ಆಗಿದ್ದಾರೆ. ನಗರಸಭೆ ಎದುರು ಬಣ್ಣ ಎರಚಿ, ಮಾಲಾರ್ಪಣೆ ಮಾಡಿ,ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಪರ, ಭಾರತ ಮಾತಾಕಿ ಘೋಷಣೆ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು. 35 ಜನ ಸದಸ್ಯ ಬಲ ಹೊಂದಿದ ನಗರಸಭೆ ಇದಾಗಿದ್ದು, ಬಿಜೆಪಿ-29, ಕಾಂಗ್ರೆಸ್-5, ಓರ್ವ ಪಕ್ಷೇತರ ಸದಸ್ಯರ ಹೊಂದಿರುವ ನಗರಸಭೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿ ಆಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೂ ಬಿಜೆಪಿ ಮುಖಂಡರು ಮಹಿಳೆ ಆಯ್ಕೆ ಮಾಡಿದ್ದಾರೆ.
ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಅವರು ಪಕ್ಷದ ಮುಖಂಡರು, ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.