ಬಾಗಲಕೋಟೆ:-ನೇಕಾರ ನಗರಿಯಲ್ಲಿ ನೇಕಾರ ದಿನಾಚರಣೆ ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗಿದೆ.
ಮಾನವ ಕುಲದ ಮಾನ ಮುಚ್ಚುವ ನೇಕಾರನಿಗೆ ಗಣ್ಯಮಾನ್ಯರು ಹೃದಯಪೂರ್ವಕ ನಮನ ಸಲ್ಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಕೆಎಚ್ ಡಿಸಿ ಕಾಲೋನಿ ಬಾಂಗಿ ಸರ್ಕಲ್ ಹತ್ತಿರ ಹತ್ತನೇ ರಾಷ್ಟ್ರೀಯ ನೇಕಾರ ದಿನಾಚರಣೆಯನ್ನು ಬಹಳ ಸರಳವಾಗಿ ಆಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯ ಅಧ್ಯಕ್ಷರಾದಂತಹ
ಶಿವಲಿಂಗ ಟಿರಕಿ. ಸದಾಶಿವ ಗೊಂದಕರ, ಅಶೋಕ ಮಾಚಕನೊರ,ಬಿ ಎಮ್ ಪಾಟೀಲ್, ಮಹಾದೇವ ಹೊನ್ನುರ, ಹಲವು ಗಣ್ಯರ ಭಾಗಿಯಾಗಿದ್ದರು,
ಪ್ರಕಾಶ ಕುಂಬಾರ
ಬಾಗಲಕೋಟೆ