ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಗರಸಭೆಯ ಸಭಾಭನದಲ್ಲಿ ಸರ್ಕಾರದ ನಿರ್ದೇಶನದಂತೆ ಶ್ರೀರೇಣುಕಾಚಾರ್ಯರ ಭಾವ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಿದರು. ಬನಹಟ್ಟಿಯ ಶ್ರೀ ಮಠದ ಶರಣಬಸವ ಶ್ರೀಗಳು ಹಾಗು ಚಿಮ್ಮಡದ ವಿರಕ್ತಮಠದ ಪ್ರಭು ಶ್ರೀಗಳು ನಗರಸಭೆಗೆ ಆಗಮಿಸಿ ಶ್ರೀ,ರೇಣುಕಾಚಾರ್ಯರ ಆಧ್ಯಾತ್ಮಿಕ ಚಿಂತಣೆಯನ್ನು ಹೇಳಿ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.
ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!
ಇದೇ ಸಂದರ್ಭದಲ್ಲಿ ಪೌರಾಯುಕ್ತ ಜಗದೀಶ್ ಈಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಅರುಣ ಬುದ್ನಿ, ವ್ಯವಸ್ಥಾಪಕ ಮುಕೇಶ ಬನಹಟ್ಟಿ. ದುಂಡಯ್ಯ ಲಿಂಗದ್, ಶಿವರುಧ್ರಯ್ಯ ಕಾಡದೇವರ, ಶಂಭುಲಿಂಗಯ್ಯ ಹಿರೇಮಠ, ಗಂಗಯ್ಯ ಬಂಗಿ, ದಯಾನಂದ ಬಾಗಲಕೋಟಮಠ, ಬಾಳಯ್ಯ ಪೂಜಾರಿ, ಬಸವರಾಜ ಅಮ್ಮಣಗಿಮಠ, ಗಂಗಯ್ಯ ಹಿರೇಮಠ. ಸೇರಿದಂತೆ ಅನೇಕರು ಇದ್ದರು.