ಬಾಗಲಕೋಟೆ:- ಈಚೆಗೆ ಹುಬ್ಬಳ್ಳಿಯ ಅಸ್ಪೈರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯಿಂದ ಜರುಗಿದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ 8 ರಾಜ್ಯಗಳ ಸಾವಿರಕ್ಕೂ ಅಧಿಕ ಕುಸ್ತಿಪಟಗಳು ಭಾಗವಹಿಸಿದ್ದರು.
ಜ.3 ರಂದು ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜನೆ!
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ
ತಾಲೂಕಿನ ಬನಹಟ್ಟಿಯ ವಿದ್ಯಾರ್ಥಿ ಲೋಹಿತ ಶಿಂದೆ ಕಟಾ ವಿಭಾಗದಿಂದ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ.
ಅದರಂತೆ ಶ್ರೇಯಸ್ ಪಾಗಡೆ ದ್ವಿತೀಯ(ಬೆಳ್ಳಿ ಪದಕ), ಅಭಿಲಾಷ ಕೊಣ್ಣೂರ ತೃತಿಯ(ಕಂಚು) ಹೀಗೆ ಮೂವರೂ ರಬಕವಿ-ಬನಹಟ್ಟಿಯವರೇ ಆಗಿದ್ದು ವಿಶೇಷ.
ರಬಕವಿ-ಬನಹಟ್ಟಿ ತಾಲೂಕಿನಿಂದ ತೆರಳಿದ ಕುಸ್ತಿಪಟುಗಳು ಒಟ್ಟಾರೆ ಒಂದು ಚಿನ್ನ, ಮೂರು ಬೆಳ್ಳಿ ಹಾಗು ನಾಲ್ಕು ಕಂಚಿನ ಪದಕ ಪಡೆಯುವದರ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ