ಬಾಗಲಕೋಟ :- ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಮುಚಖಂಡಿ ತಾಂಡಾದಲ್ಲಿ ಜರುಗಿದೆ.
ಪುಂಡಲೀಕ ಲಮಾಣಿ, ಕಮಲಾಬಾಯಿ ಚೌಹಾಣ್ ಕಳ್ಳಬಟ್ಟಿ ತಯಾರಿಸುತ್ತಿದ್ದ ವ್ಯಕ್ತಿಗಳು ಎನ್ನಲಾಗಿದೆ. ಕಳ್ಳಬಟ್ಟಿ ತಯಾರಿಕಾ ಸಾಮಗ್ರಿಯನ್ನು ಪೊಲೀಸರು ನಾಶಪಡಿಸಿದ್ದಾರೆ. ಇಬ್ಬರ ಬಳಿಯ ೫೦ ಲೀ ನ ೬ ಕ್ಯಾನ್ ನ ಬೆಲ್ಲ ಮತ್ತು ರಸಾಯನ ನಾಶ ಮಾಡಲಾಗಿದೆ.
ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರಿಂದ ನಾಶ ಮಾಡಲಾಗಿದ್ದು, ಘಟನೆಯ ಹಿನ್ನೆಲೆ,ಇಬ್ಬರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.