ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, 73.40 % ಫಲಿತಾಂಶ ಬಂದಿದೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಇವರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಉಪಸ್ಥಿತರಿದ್ದರು.
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ಜಿಲ್ಲೆಯ ಮುಧೋಳದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ವಿವರ
1)ಅಂಕಿತಾ ಬಸಪ್ಪ ಕೊನ್ನೂರು ( ಬಾಗಲಕೋಟೆ) _625/625 (ರಾಜ್ಯಕ್ಕೆ ಫ್ರಥಮ)
2)ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625 ದ್ವೀತಿಯ ಸ್ಥಾನ
ಹರ್ಷಿತಾ ಡಿಎಂ (ಮಧುಗಿರಿ)
ಚಿನ್ಮಯ್ (ದಕ್ಷಿಣ ಕನ್ನಡ)
ಸಿದ್ದಾಂತ್ (ಚಿಕ್ಕೊಡಿ )
ದರ್ಶನ್ (ಶಿರಸಿ)
ಚಿನ್ಮಯ್ (ಶಿರಸಿ)
ಶ್ರೀರಾಮ್ (ಶಿರಸಿ)
7 ಜನರಿಗೆ ದ್ವೀತಿಯ ಸ್ಥಾನ
ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ
2022-23ರಲ್ಲಿ 83.89% ಮಂದಿ ಪಾಸ್
ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49% ರಷ್ಟು ಫಲಿತಾಂಶ ಕುಸಿತ
ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲುಗೈ
ನಗರ ಪ್ರದೇಶ 3.59 ಲಕ್ಷ ಮಂದಿ 72.83%
ಗ್ರಾಮೀಣ 2.71 ಲಕ್ಷ ಮಂದಿ, 74.17%