ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದ ಜಯಶ್ರೀ ಸಿದ್ರಾಮಯ್ಯ ಮಠಪತಿ ಎಂಬ ಯುವತಿಯು ಕೂಲಿ ಮಾಡುವ ಬಡಜಂಗಮ ತಂದೆ ತಾಯಿಗಳ ದುಡುಮೆಯಲ್ಲಿ ವ್ಯಾಸಾಂಗ ಮಾಡುತ್ತಲೆ ಕರ್ನಾಟಕ ಪ್ರಾಧಿಕಾರ ನಡೆಸಿದ, ೫೪೫ ಪಿಎಸ್ಐ ಹುದ್ದೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ,
ಸಧ್ಯ ಇಲಾಖೆಯಿಂದ ಹೊರಡಿಸಿದ ತಾತ್ಕಾಲಿಕ ಪಟ್ಟಿಯಲ್ಲಿ ಜಯಶ್ರೀ ಹೆಸರು ಇದ್ದು, ಅವಳಿ ನಗರ ಮತ್ತು ಹೊಸೂರ ಗ್ರಾಮದಲ್ಲಿ ಸಂತಸದ ಸಾಧನೆಯಾಗಿದೆ ಎಂದು ರಬಕವಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗು ವಕೀಲರಾದ ಗುರುಪಾದಯ್ಯಾ ಅಮ್ಮಣಗಿಮಠ ಹೇಳಿದರು.
ಮಹಿಳೆಯರೇ “ಸೆಕ್ಸ್” ವೇಳೆ ನಿಮಗೆ ಸಿಕ್ಕಾಪಟ್ಟೆ ನೋವಾಗುತ್ತಾ..? ಕಡಿಮೆ ಮಾಡೋ ಟಿಪ್ಸ್ ಇಲ್ಲಿದೆ ನೋಡಿ
ಹೊಸೂರ ಗ್ರಾಮದ ಜಯಶ್ರೀ ಮಠಪತಿ ಅವರ ಮನೆಗೆ ಬೇಟಿ ಕೊಟ್ಟು ಸನ್ಮಾನಿಸಿದರು. ಪ್ರತಿ ಬಡಕುಟುಂಬದಲ್ಲಿ ತಂದೆ ತಾಯಿಗಳ ಆಶೆಗಳನ್ನು ನಿರಾಶೆ ಮಾಡದೆ ಸಾಧಿಸುವ ಶಕ್ತಿಯಾಗಿ ವಿಧ್ಯಾರ್ಥಿಗಳು ಮುನ್ನುಗ್ಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿವಾನಂದ ಮಠದ. ವಿವೇಕಾನಂದ ಹಿರೇಮಠ. ಗಂಗಯ್ಯ ಹಿರೇಮಠ. ವಿಧ್ಯಾನಂದ ಬಾಗಲಕೊಟಮಠ. ಚಿದಾನಂದ ಅಮ್ಮಣಗಿಮಠ.ಶಿವಾನಂದ ಚಿಕ್ಕಮಠ. ಸೇರಿದಂತೆ ಅನೇಕರು ಇದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ