ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದರ ೧೫೯ನೇ ಮತ್ತು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ೮೧ನೇ ಜಯಂತಿ ಮಹೋತ್ಸವ, ಮೂರನೇ ಪೀಠಾಧ್ಯಕ್ಷರಾದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ, ಗುರುದೇವ ಮಂದಿರದ ಕಳಸಾರೋಹಣ, ಗುರುಭವನ ಮತ್ತು ಗ್ರಂಥಗಳ ಲೋಕಾರ್ಪಣೆ ಹಾಗೂ ಮಕರ ಸಂಕ್ರಮಣ ಮಹೋತ್ಸವ ಕಾರ್ಯಕ್ರಮಗಳು ಡಿ.೨೯ರಿಂದ ಜ.೧೪ರ ವರೆಗೆ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಜರುಗಲಿವೆ.
ಬೆಂಗಳೂರಿಗರೆ ಎಚ್ಚರ.. ಎಚ್ಚರ: ಈ ರಸ್ತೆಯಲ್ಲಿ ರಾತ್ರಿ ಸಂಚರಿಸೋ ಮುನ್ನ ಹುಷಾರ್!
ಡಿ.೨೯ರಂದು ಮುಂಜ.೯ಕ್ಕೆ ಪ್ರಣವ ಧ್ವಜಾರೋಹಣ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಚಿಮ್ಮಡದ ರಘುನಾಥಪ್ರೀಯ ಶ್ರೀಜನಾರ್ಧನ ಮಹಾರಾಜರ ಸಮ್ಮುಖದಲ್ಲಿ ನಡೆಯಿತು.
ರವಿವಾರ ಸಂಜೆ ೪ಕ್ಕೆ ಗುರುದೇವರ ಉತ್ಸವಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು,
ಶ್ರೀಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಬೆಳ್ಳಿ ಮೂರ್ತಿ, ಗುರುದೇವ ಮಂದಿರದ ೩೪ ಕಳಶಗಳು, ದ್ವಾದಶ ಪೀಠಾರೋಹಣ ನಿಮಿತ್ಯ ಶ್ರೀಗುರುಸಿದ್ದೇಶ್ವ ಮಹಾಸ್ವಾಮಿಗಳ ಕಿರೀಟಗಳ ಭವ್ಯ ಮೆರವಣಿಗೆ ರಾಮಪೂರದ ಶ್ರೀನೀಲಕಂಠೇಶ್ವರ ಮಠದಿಂದ ರಬಕವಿಯ ಬ್ರಹ್ಮಾನಂದ ಆಶ್ರಮದವರೆಗೆ ಪೂರ್ಣ ಕುಂಭ, ಕಳಶ, ಆರತಿ, ನಂದಿಕೋಲು, ಕಹಳೆ, ಡೊಳ್ಳು ಮೇಳ, ಬ್ಯಾಂಡ್ಮೇಳ, ದಾನೇಶ್ವರಿ ಮಹಿಳಾ ಮಂಡಳದ ವಾರ್ಕರಿ ನೃತ್ಯ, ಭಜನೆ, ಸಮ್ಮಾಳ, ಕರಡಿ ಮಜಲು, ಸಕಲ ವಾದ್ಯಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಶ್ರಮಕ್ಕೆ ಆಗಮಿಸಿತು ನೋಡಲು ಎರಡು ಕಣ್ಣು ಸಾಲದು.
ಪ್ರಕಾಶ ಕುಂಬಾರ
ಬಾಗಲಕೋಟೆ