ಬಾಗಲಕೋಟೆ:- ಯಾರೋ ಕಿಡಿಗೇಡಿಗಳು ಗುಳೇದಗುಡ್ಡ ಹಾಗೂ ಬಾದಾಮಿ ಠಾಣೆಗಳ ಹಳ್ಳಿಗಳಲ್ಲಿ ಪೆಟ್ರೋಲಿಂಗ್ ನಲ್ಲಿ ಇದ್ದಾಗ ಹಾನಾಪೂರ ಮತ್ತು ನಂದಿಕೇಶ್ವರ ಗ್ರಾಮದ ಮಧ್ಯದಲ್ಲಿನ ಗುಡ್ಡದಲ್ಲಿ ಬೆಂಕಿ ಹಚ್ಚಿ ಹೋದ ಘಟನೆ ಶುಕ್ರವಾರ ನಡೆದಿದೆ.
Prabhas: ಪ್ರಭಾಸ್ ತಬ್ಬಿಕೊಂಡು ಮುತ್ತು ಕೊಡುತ್ತಿರುವ ಯುವತಿ ಯಾರು ಗೊತ್ತಾ..? ಆಕೆ ಬಹಳ ಫೇಮಸ್
ಅದೇ ಮಾರ್ಗ ದಲ್ಲಿ ಹೋಳಿ ಹುಣ್ಣಿಮೆಯ ನಿಮಿತ್ತವಾಗಿ ತೆರಳುವಾಗ ಬಾದಾಮಿ ಸಿ.ಪಿ.ಐ ಕರಿಯಪ್ಪ ಬನ್ನೆ ರವರು ಗುಡ್ಡಕ್ಕೆ ಬೆಂಕಿ ಹತ್ತಿದ್ದನ್ನು ಗಮನಿಸಿದ್ದಾರೆ. ಕೂಡಲೇ ಸಿ.ಪಿ.ಐ ಕರೆಯಪ್ಪ ಹಾಗೂ ಅವರ ಚಾಲಕ ಮತ್ತು ಸಿಬ್ಬಂದಿ ಜನರು ಕೂಡಿಕೊಂಡು ಬೆಂಕಿ ನಂದಿಸಿ ಅದೃಷ್ಟವಶಾತ್ ಯಾವುದೇ ಹಾನಿ ಯಾಗಿಲ್ಲ. ಪೊಲೀಸರ ಪರಿಸರ ಪ್ರೇಮಕ್ಕೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.