ಈ ಬಾರಿಯ IPL ನಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡ ತನ್ನ ಪ್ಲೇಆಫ್ ಆಸೆಯನ್ನು ಬಹುತೇಕ ಕಳೆದುಕೊಂಡಿದೆ.
ಕೆಲಸದ ಒತ್ತಡ.. ಹೆಚ್ಚಾಯ್ತು ಮೆಂಟಲ್ ಹೆಲ್ತ್ ಸಮಸ್ಯೆ.. ಸಾವಿನ ಸಂಖ್ಯೆಯಲ್ಲೂ ಏರಿಕೆ..!
ಕಳೆದೆ ಎರಡು ಸೀಸನ್ಗಳಲ್ಲಿ ಸತತವಾಗಿ ಪ್ಲೇಆಫ್ ಆಡಿದ ಲಕ್ನೋ ತಂಡಕ್ಕೆ ಇದು 13 ಪಂದ್ಯಗಳಲ್ಲಿ ಏಳನೇ ಸೋಲು. ಸ್ವತಃ ನಾಯಕ ಕೆಎಲ್ ರಾಹುಲ್ ಸೇರಿದಂತೆ ತಂಡದ ಹೆಚ್ಚಿನ ಆಟಗಾರರು ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದಾರೆ ಮತ್ತು ಮೂರು ಬ್ಯಾಕ್-ಟು-ಬ್ಯಾಕ್ ಪಂದ್ಯವನ್ನು ಕಳೆದುಕೊಂಡರು. ಇದರ ನಡುವೆ ಎಲ್ಎಸ್ಜಿ ತಂಡದಲ್ಲಿ ವಿವಾದ ಕೂಡ ಹುಟ್ಟುಕೊಂಡಿದೆ. ಹಿಂದಿನ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಮತ್ತು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ವಿಡಿಯೋ ಭರ್ಜರಿ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಇವರಿಬ್ಬರ ವಿಡಿಯೋ ಹರಿದಾಡುತ್ತಿದೆ.
ಲಕ್ನೋ ತಂಡವು ಉತ್ತಮ ಆರಂಭವನ್ನು ಪಡೆಯುವಲ್ಲಿ ಕೆಎಲ್ ರಾಹುಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದಾಗ್ಯೂ, ರಾಹುಲ್ ಡೆಲ್ಲಿ ವಿರುದ್ಧ ಕೂಡ ದೊಡ್ಡ ರನ್ ಗಳಿಸಲು ವಿಫಲರಾದರು. ನಿರ್ಣಾಯಕ ಪಂದ್ಯದಲ್ಲಿ ಕೇವಲ ಐದು ರನ್ಗಳಿಗೆ ಔಟಾದರು. ರಾಹುಲ್ ಔಟಾದ ಸಂದರ್ಭ ಸಂಜೀವ್ ಗೋಯೆಂಕಾ ಕೊಟ್ಟ ರಿಯಾಕ್ಷನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಗೊಯೆಂಕಾ ಅವರು ಕೆಎಲ್ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಗೊಯೆಂಕಾ ವಿರುದ್ಧ ಟೀಕೆಗೆ ಗುರಿಯಾಗಿದ್ದರು. ಇದೀಗ ರಾಹುಲ್ ಔಟಾದಾಗ ನಗುತ್ತಿರುವುದು ಕಂಡುಬಂದಿದೆ.
ಆದರೆ, ಸೋಲಿನ ನಂತರ ಸಂಜೀವ್ ಗೋಯೆಂಕಾ ಮತ್ತೊಮ್ಮೆ ಮೈದಾನಕ್ಕೆ ಬಂದರು. ಅಲ್ಲದೆ ನಾಯಕ ಕೆಎಲ್ ರಾಹುಲ್ ಜೊತೆ ಮಾತನಾಡಿದ್ದು, ಈ ವೇಳೆ ಅವರು ಶಾಂತ ರೂಪದಲ್ಲಿದ್ದರು. ಇದನ್ನು ಕಂಡ ನೆಟ್ಟಿಗರು ಬಹುಶಃ ಸಂಜೀವ್ ಗೋಯೆಂಕಾ ಅವನು ತನ್ನ ಕೋಪವನ್ನು ಹಿಡಿದಿಟ್ಟುಕೊಂಡಿದ್ದರು ಎಂದು ಹೇಳುತ್ತಿದ್ದಾರೆ.