ಬೆಂಗಳೂರಿನ ಶ್ವಾನ ಪ್ರಿಯರಿಗೆ ಬ್ಯಾಡ್ ನ್ಯೂಸ್ ಶ್ವಾನ ಪ್ರೀತಿಗೂ ಇನ್ಮುಂದೆ ಬರಲಿದೆ ಹೊಸ ರೂಲ್ಸ್ ಬೆಂಗಳೂರಿಗರೇ ಇನ್ಮುಂದೆ ಬೇಕಾ ಬಿಟ್ಟಿ ಮನೆಯಲ್ಲಿ ಶ್ವಾನ ಸಾಕಾಂಗಿಲ್ಲ ಮುದ್ದಿನ ಶ್ವಾನದ ಮಲಮೂತ್ರ ವಿಸರ್ಜನೆಗೆ ನಿಮಗಿಷ್ಟ ಬಂದಾಗ ಹೊರಗಡೆ ಕರೆದೊಯ್ಯಂಗಿಲ್ಲ ನಾಯಿ ಸಾಕುವ ವಿಚಾರವಾಗಿ ಬರಲಿದೆ ಹೊಸ ರೂಲ್ಸ್ ಬಿಬಿಎಂಪಿ ಪಶು ಸಂಗೋಪನೆ ಇಲಾಖೆಯಿಂದ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆಗೆ ಪ್ಲಾನ್
ಹಾಗಿದ್ರೆ ಏನೇನ್ ಮಾರ್ಗಸೂಚಿ ಸಾಧ್ಯತೆ..?
1. ಒಂದು ಮನೆಯಲ್ಲಿ ಗರಿಷ್ಠ ಎಷ್ಟು ನಾಯಿಗಳನ್ನ ಸಾಕಬಹುದು..?
2.ಮಲ ಮೂತ್ರ ವಿಸರ್ಜನೆಗೆ ಎಷ್ಟು ಗಂಟೆಗೆ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಬೇಕು..?
3. ನೆರೆ ಹೊರೆಯವರಿಗೆ ತೊಂದ್ರೆಯಾಗದಂತೆ ಏನೇನ್ ಕ್ರಮ ತೆಗೆದುಕೊಳ್ಳಬೇಕು..?
4. ನಾಯಿ ಸಾಕಲು ಮತ್ತು ಮಾರಾಟ ಮಾಡಲು ಕಡ್ಡಾಯವಾಗಿ ಅನುಮತಿ
5. ನಾಯಿಗಳಿಗೆ ಕಡ್ಡಾಯವಾಗಿ ರೇಬಿಸ್ ಲಸಿಕೆ ಹಾಕಿಸಿರಬೇಕು
ಯಾಕೆ ಮಾರ್ಗಸೂಚಿ…?
ನಗರದಲ್ಲಿ ಶ್ವಾನ ಸಾಕಾಣಿಕೆ ಸಂಖ್ಯೆ ದಿನೇ ದಿನೇ ಹೆಚ್ಚಳ
ವಿವಿಧ ತಳಿಗಳ ನಾಯಿಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸಹ ಏರಿಕೆ
ಸಾಕು ನಾಯಿಗಳಿಂದ ಅಕ್ಕ ಅಕ್ಕದ ನಿವಾಸಿಗಳಿಗೂ ತೊಂದರೆ
ಈ ಬಗ್ಗೆ ಪಶುಸಂಗೋಪನಾ ಇಲಾಖೆ ದೂರು
ಇತ್ತೀಚಿಗಷ್ಟೇ ನಟ ದರ್ಶನ್ ಮನೆಯ ಸಾಕು ನಾಯಿ ಮಹಿಳೆಯ ಮೇಲೆ ಅಟ್ಯಾಕ್ ಮಾಡಿರುವ ಆರೋಪ
ಈ ವಿಚಾರ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, FIR ಕೂಡ ದಾಖಲು
ಹೀಗಾಗಿ ಇಂತಹ ಸಮಸ್ಯೆಗೆ ಬ್ರೇಕ್ ಹಾಕಲು ಬಿಬಿಎಂಪಿ ಪಶು ಸಂಗೋಪನೆ ಇಲಾಖೆ ಕ್ರಮ
ಶ್ವಾನ ಸಾಕಾಣಿಕೆಗೆ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆಗೆ ಪ್ಲಾನ್