ಬೆಂಗಳೂರು: ಪುನೀತ್ ರಾಜ್ ಕುಮಾರ್ 50 ನೇ ಹುಟ್ಟುಹಬ್ಬ ಪ್ರಯುಕ್ತ ಹಾಗೂ ಇಂಡಿಯಾ ICC ಚಾಂಪಿಯನ್ಸ್ ಟ್ರೋಫಿ ಗೆದ್ದ ಹಿನ್ನೆಲೆ ಪುನೀತ್ ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಮಾಡುತ್ತಿದ್ದಾರೆ. ಅನಿಲ್ ಚಾಟ್ಸ್ ಸೆಂಟರ್ ನಿಂದ ಹುಟ್ಟುಹಬ್ಬ ಹಾಗೂ ಟ್ರೋಫಿ ಗೆದ್ದ ಕಾರಣ ಉಚಿತ ಚಾಟ್ಸ್ ವಿತರಣೆಗೆ ಮುಂದಾಗಿದ್ದಾರೆ.
ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!
ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನಲ್ಲಿ ಅಭಿಮಾನಿ ಫ್ರೀ.. ಫ್ರೀ… ಫ್ರೀ…ಅಂತ ಬ್ಯಾನರ್ ಹಾಕಿದ್ದಾರೆ. ಮಾರ್ಚ್ 17 ಕ್ಕೆ ಪುನೀತ್ ರಾಜಕುಮಾರ್ 50ನೇ ಹುಟ್ಟುಹಬ್ಬ ಹಿನ್ನೆಲೆ ಮಾರ್ಚ್ 17 ರಂದು ಸಂಜೆ 5 ರಿಂದ ಚಾಟ್ಸ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.