ವಿಜಯಪುರ: ಹಾಲಿನ ದರ ಹೆಚ್ಚಳ ಹಿನ್ನೆಲೆ ವಿಜಯಪುರ ತಾಲೂಕಿನ ತಾಳಿಕೋಟೆ ಪಟ್ಟಣದಲ್ಲಿ ತಾಳಿಕೋಟೆ ಪಟ್ಟಣದ ತಾಲೂಕಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ಹಾಲಿನ ಬೆಲೆ ಇಳಿಕೆ ಮಾಡಬೇಕು ಎಂದು ಪ್ರತಿಭಟನೆ ಮಾಡಿದರು.