ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಜಾತ್ರೆ ಹಿನ್ನೆಲೆ ಸಾಮೂಹಿಕ ವಿವಾಹಗಳು ಅದ್ದೂರಿಯಾಗಿ ಜರುಗಿದವು.
ತಾಯಿ, ಪತ್ನಿ, ಮಕ್ಕಳನ್ನು ಕೊಂದು ಬಳಿಕ ಗುಂಡು ಹಾರಿಸಿಕೊಂಡು ಸೂಸೈಡ್ ಮಾಡಿಕೊಂಡ ಉದ್ಯಮಿ!
ಸೂರಣಗಿ ಗ್ರಾಮದ ಶ್ರೀ ಗಜಾನನ ಯುವಕ ಮಂಡಳಿ ವತಿಯಿಂದ ಸಾಮೂಹಿಕ ವಿವಾಹಗಳನ್ನು ನಡೆಸಿ ಕೊಡಲಾಯಿತು. ಸೂರಣಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂತನ ವಧು ವರರು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಒಟ್ಟು 13 ನವ ಜೋಡಿಗಳ ವಿವಾಹ ಜರುಗಿದ್ವು.
ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಾಲಶಿವಯೋಗಿ ಶಿವಪ್ರಸಾದ ದೇವರು ಮತ್ತು ಷ.ಬ್ರ ಫ್ರಭು ಕುಮಾರ ಶಿವಾಚಾರ್ಯ ಸ್ವಾಮಿಗಳು ಚಾಲನೆಯನ್ನ ನೀಡಿದ್ರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾವಿರಾರು ಜನ್ರು ಭಾಗಿಯಾಗಿ ನೂತನ ವಧು ವರರಿಗೆ ಹಾರೈಸಿ ಆಶೀರ್ವದಿಸಿದ್ರು.