ಲಕ್ನೋ: ಇಂದು ಮಾಘ ಪೂರ್ಣಿಮೆಯ (Magh Purnima) ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಸಾವಿರಾರು ಮಂದಿ ಭಕ್ತರು ಪಣ್ಯಸ್ನಾನಕ್ಕಾಗಿ ಆಗಮಿಸಿದ್ದಾರೆ.
ಗೋಬಿ ಪ್ರಿಯರಿಗೆ ಶಾಕ್: ಗೋವಾ ಬೆನ್ನಲ್ಲೇ ಕರ್ನಾಟಕದಲ್ಲೂ ಗೋಬಿ ಬ್ಯಾನ್?
ಪವಿತ್ರ ಸ್ನಾನ ಮಾಡಲು ಅಯೋಧ್ಯೆಯ ಸರಯೂ ನದಿಗೆ (Saryu River) ಆಗಮಿಸಿದ ಭಕ್ತರೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನನಗೆ ಇಂದು ತುಂಬಾ ಸಂತೋಷವಾಗುತ್ತಿದೆ. ನಾವು ಕಾಶಿಯಿಂದ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಮಾಡಿರುವ ವ್ಯವಸ್ಥೆ ಕೂಡ ಚೆನ್ನಾಗಿದೆ ಎಂದಿದ್ದಾರೆ.
ಮಾಘ ಪೂರ್ಣಿಮೆಯನ್ನು ಹುಣ್ಣಿಮೆಯ ದಿನ ಎಂದೂ ಕರೆಯುತ್ತಾರೆ. ಈ ದಿನ ಭಕ್ತರು ಪ್ರಾರ್ಥನೆಯ ಮೂಲಕ ಚಂದ್ರ ದೇವರಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ ಎಂಬ ನಂಬಿಕೆ. ಹೀಗಾಗಿ ಇಂದು ಭಕ್ತರು, ಗಂಗಾ ನದಿಯಂತಹ (Ganga River) ಪವಿತ್ರ ನದಿಗಳ ಪವಿತ್ರ ನೀರಿನಲ್ಲಿ ಮುಳುಗುವುದು. ಈ ಆಚರಣೆಯು ವ್ಯಕ್ತಿಯನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧೀಕರಿಸುತ್ತದೆ. ಈ ಮೂಲಕ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಗೊಳಿಸುತ್ತದೆ ಎಂದು ನಂಬಲಾಗಿದೆ.