ಕೋಲಾರ:- ಈದ್ ಮಿಲಾದ್ ಪ್ರಯುಕ್ತ ಕೋಲಾರದಲ್ಲಿ ಮುಸ್ಲಿಂ ಬಂಧುಗಳು ಬೃಹತ್ ಮೆರವಣಿಗೆ ರ್ಯಾಲಿಯನ್ನ ಹಮ್ಮಿಕೊಂಡಿದ್ದಾರೆ. ಕೋಲಾರದ ಎಂಜಿ ರಸ್ತೆಯಿಂದ ಆರಂಭವಾದ ಮೆರವಣಿಗೆ ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿತು. ಬೃಹತ್ ಬಾವುಟಗಳನ್ನು ಹಿಡಿದು ರಸ್ತೆಯಲ್ಲಿ ಸಂಚಾರ ಮಾಡಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ರು.
ಜ್ಯೋತಿನಗರ ಗೋಮಾಳ ಜಮೀನಿಗೆ ಹೈಕೋರ್ಟ್ ತಡೆಯಾಜ್ಞೆ, ಗ್ರಾಮಸ್ಥರ ಸಂತಸ!
ಈ ವೇಳೆ ಕೋಲಾರದಲ್ಲೂ ಫ್ರೀ ಪ್ಯಾಲೇಸ್ತೇನ್ ಭಾವುಟವನ್ನ ಹಾರಾಟ ಮಾಡಲಾಯಿತು, ಚಿಕ್ಕಮಗಳೂರು ಬಳಿಕ ಕೋಲಾರದಲ್ಲೂ ಫ್ರೀ ಪ್ಯಾಲೇಸ್ತೇನ್ ಎಂಬ ಹೇಳಿಕೆ ಹೊಂದಿರುವ ಕಪ್ಪು ಬಾವುಟ ಹಾರಾಟವಾಯಿತು. ಕೋಲಾರ ನಗರದ ಅಂಜುಮಾನ್ ಸಂಸ್ಥೆ ಎದುರು ಹಾರಾಟ ಮಾಡಲಾದ ಪ್ಯಾಲೇಸ್ತೇನ್ ಭಾವುಟವನ್ನ ಗಮನಿಸಿದ ಕೋಲಾರ ನಗರ ಪೊಲೀಸರ ಸಮಯ ಪ್ರಜ್ಞೆಯಿಂದ ತೆರವುಗೊಳಿಸಲಾಯಿತು.
ಕೋಲಾರ ನಗರ ಠಾಣೆ ಪೋಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಾವುಟ ಹಾರಾಟ ಮಾಡದಂತೆ ತಿಳಿ ಹೇಳಿದರು. ಬಳಿಕ ಫ್ರೀ ಪ್ಯಾಲೇಸ್ತೇನ್ ತೆಗೆದು ಕಪ್ಪು ಬಾವುಟ ಹಾರಾಟ ಮಾಡಿಸಿದ ಯುವಕರ ಗುಂಪಿಗೆ ಪೊಲೀಸರು ದೇಶ ಪ್ರೇಮದ ಪಾಠ ಮಾಡಿದ್ರು. ಫ್ರೀ ಪ್ಯಾಲೇಸ್ತೇನ್, ಇಸ್ಲಾಂ ಜಿಂದಾಬಾದ್ ಎಂದು ಹಾಕಿದ್ದ ಕಪ್ಪು ಬಾವುಟ ಇದಾಗಿದೆ.
ಸಧ್ಯ ಕೋಲಾರ ನಗರದಲ್ಲಿ ಈದ್ ಮಿಲಾದ್ ಪ್ರಯುಕ್ತ ಮೆರವಣಿಗೆ ನಡೆಯುತ್ತಿದ್ದು, ಅಂಜುಮಾನ್ ಸಂಸ್ಥೆಯಿಂದ ಕ್ಲಾಕ್ ಟವರ್ ಬಳಿಯ ಈದ್ಗಾ ಮೈದಾನ ವರೆಗೆ ಮೆರವಣಿಗೆ ನಡೆಯುತ್ತಿದ್ದು ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ.