ಬೆಂಗಳೂರು: ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಫೆಬ್ರವರಿ ತಿಂಗಳೂ ಸೇರಿದಂತೆ ಒಟ್ಟು 4 ತಿಂಗಳ ಹಣವನ್ನು ರಾಜ್ಯ ಸರಕಾರ ಪಾವತಿಸುವುದು ಬಾಕಿ ಉಳಿದಿತ್ತು. ಕಳೆದ ನವೆಂಬರ್ನಿಂದ ಪ್ರತಿ ತಿಂಗಳು ಖಾತೆಗೆ ಯೋಜನೆಯ ಹಣ ಪಾವತಿಯಾಗಿರಲಿಲ್ಲ. ಗೃಹಲಕ್ಷ್ಮಿ ಗ್ಯಾರಂಟಿ ಹಣವನ್ನು ಪಾವತಿ ಮಾಡದೇ ರಾಜ್ಯ ಸರಕಾರ ಬಾಕಿ ಉಳಿಸಿಕೊಂಡ ಬಗ್ಗೆ ಹಲವಾರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣ ನೀಡದಿರುವ ರಾಜ್ಯ ಸರ್ಕಾರದ ವಿರುದ್ಧ ಶಾಸಕರಾದ ಸುರೇಶ್ ಬಾಬು, ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ , ಬೂಜೆಗೌಡ ಅವರು ಸೇರಿದಂತೆ ವಿವಿಧ ಜೆಡಿಎಸ್ ಶಾಸಕರ ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ವಿಧಾನ ಸಭೆ ಹಾಗು ವಿಧಾನ ಪರಿಷತ್ತಿನ ಜೆಡಿಎಸ್ ಶಾಸಕರು, ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣ ನೀಡದೆ, ಕೇವಲ ಚುನಾವಣೆ ಸಮಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವ ಸಂದರ್ಭದಲ್ಲಿ ಮಾತ್ರ ಹಣ ನೀಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಹಾಗು ಸಚಿವ ವೆಂಕಟೇಶ್ ರವರು ಕಂಟ್ರಾಕ್ಟರ್ ಬಗ್ಗೆ ಜೆಡಿಎಸ್ ಕಾರ್ಯಕರ್ತ ಎಂದು ಅವಾಚ್ಯ ಶಬ್ದ ಉಪಯುಗಿಸಿ ಮಾತನದಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.