ಇಸ್ಲಾಮಾಬಾದ್: ವಿಶ್ವಕಪ್ 2023 ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದೆ. ಭಾರತದಿಂದ ವಾಪಸಾದ ನಂತರ ಪಾಕಿಸ್ತಾನದ (Pakistan) ನಾಯಕ ಬಾಬರ್ ಅಜಂ (Babar Azam) ವೈಟ್ ಬಾಲ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ.
ವಿಶ್ವಕಪ್ 2023ರ (World Cup 2023) ಟೂರ್ನಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಆಡಿದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಎದುರಿಸಲು ಸಾಧ್ಯವಾಗದ ಸವಾಲನ್ನೇ ಮುಂದಿಟ್ಟಿದೆ. ಒಂದು ವೇಳೆ ಕಿವೀಸ್ ಹಿಂದಿಕ್ಕೆ ಪಾಕ್ ಸೆಮಿಸ್ ಪ್ರವೇಶಿಸಲೇಬೇಕಾದರೆ ಪಾಕ್ ತಂಡ ಊಹಿಸಲು ಸಾಧ್ಯವಾಗಷ್ಟು ರನ್ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ.
ತಮ್ಮ ನಾಯಕತ್ವದ ಪಾಕಿಸ್ತಾನ ತಂಡ ವಿಶ್ವಕಪ್ ಸೆಮಿಸ್ನಿಂದ ಹೊರಬೀಳುವ ಭೀತಿಯಲ್ಲಿರುವ ಬಾಬರ್ ತನ್ನ ಭವಿಷ್ಯದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮಿಜ್ ರಾಜಾ ಹಾಗೂ ಅವರಿಗೆ ಹತ್ತಿರವಿರುವವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ನಾಯಕತ್ವದಲ್ಲಿ ಮುಂದುವರಿಯುವ ನಿರ್ಧಾರವು ಬಾಬರ್ಗೆ ಬಂದ ಸಲಹೆಯನ್ನು ಅವಲಂಬಿಸಿರುತ್ತದೆ. ಅವರ ಕೆಲವು ಆಪ್ತರು ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವದಿಂದ ಕೆಳಗಿಳಿಯುವಂತೆ ಬಾಬರ್ಗೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ