ಬಳ್ಳಾರಿ: ಒಂದು ವರ್ಷವಾಗಿದೆ ಕೋರ್ಟ್ ಉದ್ಘಾನೆಗೊಂಡು, ಕೆಲವು ಕಾರಣಾಂತರದಿಂದ ಕಾರ್ಯಕಲಾಪ ಹಳೆ ಕೋರ್ಟ್ನಲ್ಲಿ ನಡೆಯುತ್ತಿವೆ. ಇನ್ನು ಕೇಲವೆ ದಿನಗಳಲ್ಲಿ ಸಂಪೂರ್ಣ ಕೋರ್ಟ್ ವ್ಯವಹಾರಗಳು ಇಲ್ಲಿಗೆ ಸಿಫ್ಟ್ ಆಗುತ್ತವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಮಾಡಿಕೊಳ್ಳಲು ಇಷ್ಟು ಸಮಯ ತೆಗೆದುಕೊಂಡಿದ್ದಾರೆ, ಇದರಿಂದ ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗುದಿಲ್ಲ ಎಂದರು.
ಇನ್ನೂ ರಾಜ್ಯದಲ್ಲಿ ಬರ ಅಧ್ಯಾಯನ ತಂಡ ಈಗಾಗಲೇ ವರದಿಯನ್ನು ನೀಡಿದೆ, ಪ್ರತಿ ಜಿಲ್ಲೆಯಲ್ಲಿ ಸಚಿವರು ಸಂಚಾರಿಸಿ ರೈತರ ಸ್ಥಿತಿಗತಿಯನ್ನು ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡುವುದು ಗ್ಯಾರಂಟಿ, ರೈತರ ಪರವಾಗಿರುವ ನಾವು, ರೈತರಿಗೆ ಅನುಕೂಲಕರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೆವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.