ರಾಮನಗರ/ಕೇರಳ: ಮಲ್ಲಿಕ್ ಪುರಂ ಮೇಲ್ಸೇತುವೆ ಮೇಲಿಂದ ಜಿಗಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಬಳಿ ನಡೆದಿದೆ. ಕುಮಾರಸ್ವಾಮಿ (40) ಮೃತ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಕನಕಪುರ ನಿವಾಸಿಯಾಗಿದ್ದಾನೆ. ಕುಮಾರಸ್ವಾಮಿ ಅವರು ಮೂರು ದಿನದ ಹಿಂದೆ ಶಬರಿಮಲೆಗೆ ತೆರಳಿದ್ದರು.
ಈ ವೇಳೆ ದೇವಸ್ಥಾನದ ಸನ್ನಿಧಾನದಿಂದ ಮಲ್ಲಿಕ್ ಪುರಂಗೆ ಸಂಪರ್ಕಿಸುವ ಮೇಲ್ಸೇತುವೆ ಮೇಲಿಂದ ಕೆಳಗೆ ಜಿಗಿದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ಅವರ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ಅವರನ್ನು ಮೊದಲು ಸನ್ನಿಧಾನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
Drumstick Tea Health Benefits: ನುಗ್ಗೆಸೊಪ್ಪಿನ ಚಹಾ ಕುಡಿಯೋದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ನಂತರ ಪಂಪಾ ಸರ್ಕಾರಿಯಲ್ಲಿ ದಾಖಲಿಸಲಾಯಿತು. ಸಿಟಿ ಸ್ಕ್ಯಾನ್ ಸೇರಿದಂತೆ ಹೆಚ್ಚಿನ ಪರೀಕ್ಷೆಗಳಿಗಾಗಿ ಅವರನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಿತು. ಆದರೆ, ದುರಾದೃಷ್ಟವಶಾತ್ ಕುಮಾರಸ್ವಾಮಿ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ವರದಿಯಾಗಿದೆ. ಇನ್ನು, ವಿಚಾರ ತಿಳಿಯುತ್ತಿದ್ದಂತೆ ಕೇರಳ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.