ಕೊಪ್ಪಳ: ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡಿ, ಮಾಲಾಧಾರಿಗಳಿಗೆ ಪ್ರಸಾದ ಹಂಚಿ ಭಾವೈಕ್ಯತೆ ಸಾರಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಯನಗರ ನಿವಾಸಿ, ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಶಿಂ ಅಲಿ ಮುದ್ದಾಬಳ್ಳಿ ಅವರು ತಮ್ಮ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳಿಂದ ಭಜನೆ ಮಾಡಿಸಿ, ಪ್ರಸಾದ ಹಂಚಿದ್ದಾರೆ.
ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಶಿಂಅಲಿ ಮುದ್ದಾ ಬಳ್ಳಿ ತಮ್ಮ ಸ್ವಗೃಹದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೂಜೆ ನಡೆಸಲು ಎಲ್ಲ ರೀತಿಯ ಪೂಜಾ ಸಾಮಗ್ರಿಗಳ ನ್ನು ತರಿಸಿ ವ್ಯವಸ್ಥೆ ಕಲ್ಪಿಸಿ, ಸುತ್ತಮುತ್ತಲಿನ ಜನರಿಗೆ ಪೂಜೆ ಆಗಮಿಸುವಂತೆ ಮಾಹಿತಿ ನೀಡಿದ್ದರು.
ಇದರನ್ವಯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಬೆಳಗ್ಗೆ ತಂಡದೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಅಯ್ಯಪ್ಪ ಸ್ವಾಮಿ ನಾಮಸ್ಮರಣೆ ಮಾಡಿದರು. ನಂತರ ಎಲ್ಲ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪ್ರಸಾದ ಸೇವಿಸಿದರು.
ಕಾಶಿಂಅಲಿ ಮುದ್ದಾಬಳ್ಳಿ ಅವರು ಎಲ್ಲ ಅಯ್ಯಪ್ಪಸ್ವಾಮಿ ಮಾಲಾಧಾರಿಗಳನ್ನ ಸನ್ಮಾನಿಸಿ, ಬೀಳ್ಕೊಟ್ಟರು. ಈ ವೇಳೆ ಮಲಾಧಾರಿಗಳು, ಭಕ್ತರು, ಮುಸ್ಲಿಂ ಬಾಂಧವರು ಇದ್ದರು.