ಹುಬ್ಬಳ್ಳಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಪೂರ್ಣವಾಗಿ ಕೇಸರಿಮಯಗೊಂಡಿದೆ.
ಹೌದು, ನಗರದ ಪ್ರತಿ ನಗರ, ಬಡಾವಣೆಗಳಲ್ಲಿ ಕೇಸರಿ ಧ್ವಜಗಳು, ಭಗವಾ ಧ್ವಜಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲದೇ ಬೈಕ್, ಆಟೋ, ಶಾಲುಗಳು, ಹೀಗೆ ಪ್ರತಿಯೊಂದು ಕಡೆಗೆ ಜೈಶ್ರೀಮ ಬಾವುಟ ರಾರಾಜಿಸುತ್ತಿವೆ. ನಗರದ ಶಿವಾಜಿನಗರದಲ್ಲೂ ಛತ್ರಪತಿ ಶಿವಾಜಿ ಮಹಾರಾಜ ಸೇವಾ ಸಂಸ್ಥೆ ವತಿಯಿಂದ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ನೇರ ಪ್ರಸಾರಕ್ಕೆ ಬೃಹತ್ ವೇದಿಕೆ ನಿರ್ಮಿಸಿ ಎಲ್.ಇ.ಡಿ ಸ್ಕ್ರೀನ್ ಮೂಲಕ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೇ ರೀತಿಯಲ್ಲಿ ವಿವಿಧೆಡೆ ನೇರ ಪ್ರಸಾರ ನಡೆಯಲಿದೆ.
ಇನ್ನು ಯುವಕರು ಬೈಕ್ ರ್ಯಾಲಿ ನಡೆಸುತ್ತಿದ್ದಾರೆ. ಎಲ್ಲೆಡೆ ಜೈಶ್ರೀರಾಮ ಘೋಷಣೆ ಮುಗಿಲು ಮುಟ್ಟಿದೆ. ಪೊಲೀಸರು ಕೂಡಾ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ರೀತಿಯಲ್ಲಿ ಭದ್ರತೆ ಕೈಗೊಂಡಿದ್ದು, ಡಿಸಿಪಿ ಪಿ.ರಾಜೀವ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಿಟಿ ರೌಂಡ್ ನಡೆಸುತ್ತಿದ್ದಾರೆ.