ಭಾರತೀಯ ಕಿರುತೆರೆಯಲ್ಲಿ ಸದ್ಯ ಬಿಗ್ ಬಾಸ್ (Bigg Boss) ನದ್ದೇ ಸದ್ದು. ಕನ್ನಡ, ತೆಲುಗು, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಶೋ ಟೆಕಾಸ್ಟ್ ಆಗುತ್ತಿದೆ. ಒಂದೊಂದು ಭಾಷೆಯಲ್ಲೂ ಒಂದೊಂದು ರೀತಿಯ ಕಂಟೆಸ್ಟೆಂಟ್ ಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಹಿಂದಿ ಬಿಗ್ ಬಾಸ್ ನಲ್ಲಿ ಅನಾಹುತ ಕಂಟೆಸ್ಟೆಂಟ್ ಗಳೇ ಇರುವುದು ವಿಶೇಷ.
ಹಿಂದಿ ಬಿಗ್ ಬಾಸ್ ಶೋನಲ್ಲಿ ವಿಕ್ಕಿ ಜೈನ್, ಖಾನ್ಜಾದಿ, ನೀಲ್ ಭಟ್, ಅಭಿಷೇಕ್ ಕುಮಾರ್, ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಜಿಗ್ನಾ ವೋರಾ ಹೀಗೆ ಮುಂತಾದ ಕಂಟೆಸ್ಟೆಂಟ್ ಇದ್ದಾರೆ. ಅದರಲ್ಲೂ ಗಂಡ ಹೆಂಡತಿ ಜೋಡಿಯೂ ಮನೆಯೊಳಗೆ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಮಿಡಿಯನ್ ಮುನಾವರ್ ಫರುಕಿ (Munawar Faruqui)ಕೂಡ ಇದ್ದಾರೆ. ಅವರ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡ ಹುಡುಗಿಯೊಬ್ಬಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ದೊಡ್ಮನೆ ಪ್ರವೇಶ ಮಾಡುತ್ತಿದ್ದಾರೆ.
ಹೆಸರಾಂತ ಸ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಮುನಾವರ್ ಫಾರುಕಿ ವಿರುದ್ಧ ಈಗಾಗಲೇ ಸಾಕಷ್ಟು ಆರೋಪ ಮಾಡಿರುವ ಆಯಶಾ ಖಾನ್ (Ayesha Khan), ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೆ ವಾಹಿನಿಯು ಪ್ರೊಮೊವನ್ನು ಹಂಚಿಕೊಂಡಿದ್ದು, ಅಲ್ಲಿಯೂ ಆಯಶಾ ರಿವೇಂಜ್ ತೀರಿಸಿಕೊಳ್ಳುವಂತಹ ಮಾತುಗಳನ್ನು ಆಡಿದ್ದಾರೆ.
ತಾನು ಫಾರುಕಿ ಅವರ ಮಾಜಿ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡಿರುವ ಆಯಶಾ ಖಾನ್, ಮುನಾವರ್ ಅವರ ಮುಖವಾಡ ಕಳಚುತ್ತೇನೆ ಎಂದು ಗದರಿದ್ದಾರೆ. ಆತ ನನ್ನೊಂದಿಗೆ ಮಾಡಿರೋ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಆ ಕಾರಣಕ್ಕಾಗಿ ತಾವು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಾಗಿ ಆಯಶಾ ಪ್ರೊಮೋದಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಆಯಶಾಗೆ ಫಾರುಕ್ ಐ ಲವ್ ಯೂ ಎಂದು ಹೇಳಿದ್ದರಂತೆ. ನಿಮ್ಮಂತಹ ಹುಡುಗಿ ಜೊತೆನೇ ಮದುವೆ ಆಗಬೇಕು ಎಂದು ಮಾತನಾಡಿದ್ದರಂತೆ. ಅದೆಲ್ಲವನ್ನೂ ಅವರ ಬಾಯಿಂದಾನೇ ಹೇಳಿಸ್ತೇನೆ ಅಂದಿದ್ದಾರೆ ಆಯೆಶಾ.