Author: AIN Admin

ಬೆಂಗಳೂರು: ನಾನ್-ವೆಜ್ ಪ್ರೇಮಿಗಳಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಸ್ಟಾರ್ಟರ್ ಗಳು ಮತ್ತು ಅಪೆಟಿಸರ್ ಗಳಿಂದ ಹಿಡಿದು ಮುಖ್ಯ ಕೋರ್ಸ್ ವರೆಗೆ  ಚಿಕನ್ ನೊಂದಿಗೆ ಪ್ರಯತ್ನಿಸಬಹುದಾದ ಪಾಕವಿಧಾನಗಳು ಬಹಳಷ್ಟಿವೆ.  ಚಿಕನ್ ಸಾಮಾನ್ಯವಾಗಿ ಆರೋಗ್ಯಕರ ಆಹಾರವಾಗಿದ್ದು ಇದು ಪ್ರೋಟೀನ್ ಶಕ್ತಿಯಿಂದ ತುಂಬಿದೆ. ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಈ ಭಾಗ ಮಾತ್ರ ಮುಟ್ಟಲೇ ಬಾರದು. ಚಿಕನ್ ಸ್ಕಿನ್‌ ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ಅದರಲ್ಲಿ ಹೆಚ್ಚು ಕೊಬ್ಬು ಇರುತ್ತದೆ ಹಾಗೂ ಫ್ರೆಶ್ ಆಗಿರಲು ಕೆಮಿಕಲ್ ಇಂಜೆಕ್ಷನ್‌ ನೀಡುತ್ತಾರೆ. ಕೋಳಿ ಚರ್ಮದಿಂದ ದೂರ ಇರಬೇಕು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಬಾಯಿಲರ್‌ ಕೋಳಿಯ ತೊಡೆ ಭಾಗಕ್ಕೆ ಇಂಜೆಕ್ಷನ್ ನೀಡಲಾಗುತ್ತದೆ. ತೂಕ ಹೆಚ್ಚಾಗಬೇಕು ಜನರು ಬೇಗ ಖರೀದಿ ಮಾಡುತ್ತಾರೆ ಎಂದು. ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಜನರು ಹೆಚ್ಚಾಗಿ ಕೇಳುವುದೇ ಥೈ ಪೀಸ್ ಅಥವಾ ಲೆಗ್‌ ಪೀಸ್‌. ಇನ್ನು ನೀವು ಧೈರ್ಯವಾಗಿ ನಾಟಿ ಕೋಳಿ ತಿನ್ನಬಹುದು ಏಕೆಂದರೆ ಯಾವುದೇ ಕೆಮಿಕಲ್ಸ್‌ ಅಥವಾ ಇಂಜೆಕ್ಷನ್ ಬಳಸುವುದಿಲ್ಲ. ಅಲ್ಲದೆ ನಾಟಿ ಕೋಳಿ…

Read More

ಉಕ್ರೇನ್‌-ರಷ್ಯಾ ಯುದ್ಧದ ನಂತರ ರಾಜ್ಯದಲ್ಲಿ ಸೂರ್ಯಕಾಂತಿ ಬೆಳೆಗೆ ಬೇಡಿಕೆ ಹೆಚ್ಚಾಗಿದೆ. ಖಾದ್ಯ ತೈಲ ಆಮದು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರಕಾರವೂ ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ರೈತರು ಸಹ ಸೂರ್ಯಕಾಂತಿ ಬೆಳೆಯಲು ಉತ್ಸಾಹ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ದಶಕದ ಹಿಂದೆ ಸುಮಾರು 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಿತ್ತು. ತದನಂತರ ಅದಕ್ಕೆ ಬೆಂಬಲ ಬೆಲೆ ಸಿಗದಿರುವುದು ಮತ್ತಿತರ ಕಾರಣಗಳಿಂದ ರೈತರು ಸೂರ್ಯಕಾಂತಿ ಬೆಳೆಯಿಂದ ವಿಮುಖರಾಗುತ್ತಾ ಹೋದರು. ಹೀಗಾಗಿ, ಸೂರ್ಯಕಾಂತಿ ಬೆಳೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. 2020ರಲ್ಲಿ 0.90 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಿತ್ತು. ಭಾರತಕ್ಕೆ ಬೇಕಾದ ಬಹುಪಾಲು ಸೂರ್ಯಕಾಂತಿ ಎಣ್ಣೆಯನ್ನು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಯಾವಾಗ ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯಿತೋ ಆಗ ಭಾರತಕ್ಕೆ ಬರುತ್ತಿದ್ದ ತೈಲ ಆಮದು ಸಂಪೂರ್ಣ ನಿಂತು ಹೋಯಿತು. ತಕ್ಷಣ ಅಡುಗೆ ಎಣ್ಣೆ ದರ ಗಗನಕ್ಕೇರಿತು. “ಭವಿಷ್ಯದಲ್ಲಿ ಇಂತಹ ಸಂದರ್ಭ ಬಾರದಿರಲಿ ಎಂಬ ಕಾರಣದಿಂದ ಕೇಂದ್ರ ಸರಕಾರ ಸೂರ್ಯಕಾಂತಿ ಬೆಳೆಗಾರರಿಗೆ ಹಾಗೂ ಸೂರ್ಯಕಾಂತಿ ಬೀಜೋತ್ಪಾದನೆಗೆ ಹೆಚ್ಚಿನ…

Read More

ಬೆಂಗಳೂರು: ನಿತ್ಯದ ಬದುಕಿನಲ್ಲಿ ಧುತ್ತೆಂದು ಬರುವ ಆರ್ಥಿಕ ಸಮಸ್ಯೆಗಳಿಗೆ ಹಣ ಬೇಕಾಗಬಹುದು ಎನ್ನುವ ಕಾರಣಕ್ಕೆ ಅನೇಕರು ಉಳಿತಾಯದ ಮೊತ್ತವನ್ನ ಫಿಕ್ಸೆಡ್ ಡಿಪಾಸಿಟ್ ನಲ್ಲಿ(ನಿಶ್ಚಿತ ಠೇವಣಿ) ಇಡುವುದಿಲ್ಲ. ತುರ್ತು ಅಗತ್ಯಗಳಿಗೆ ಬೇಕಿರುವ ಬಹುಪಾಲು ಹಣವನ್ನ ಸೇವಿಂಗ್ಸ್ ಬ್ಯಾಂಕ್ (ಉಳಿತಾಯ ಖಾತೆಯಲ್ಲಿ) ಅಕೌಂಟ್ ನಲ್ಲೇ ಇಟ್ಟು ಕೊಂಡಿರುತ್ತಾರೆ. ದೀರ್ಘಕಾಲದ ಉಳಿತಾಯಕ್ಕೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (ಐಪಿಪಿಬಿ) ಉಳಿತಾಯ ಯೋಜನೆಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ಸಾಮಾನ್ಯ ಉಳಿತಾಯ ಖಾತೆಯ ಗ್ರಾಹಕರಿಗಿಂತ ಪ್ರೀಮಿಯಂ ಉಳಿತಾಯ ಖಾತೆ ಗ್ರಾಹಕರಿಗೆ ಹೆಚ್ಚುವರಿ ಸೇವೆಗಳನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಅಥವಾ ಆರೋಗ್ಯ ಸಮಸ್ಯೆ ಹೊಂದಿರೋರಿಗೆ ಅಂಚೆ ಕಚೇರಿಗೆ ತೆರಳುವುದು ಕಷ್ಟವಾಗುತ್ತದೆ. ಇಂಥವರು ಪ್ರೀಮಿಯಂ ಉಳಿತಾಯ ಖಾತೆ ತೆರೆದರೆ ಅವರ ಮನೆಗೆ ಬಾಗಿಲಿಗೆ ಅಂಚೆ ಇಲಾಖೆ ಸೇವೆಗಳನ್ನು ತಲುಪಿಸುತ್ತದೆ. ಹಾಗಾದ್ರೆ ಅಂಚೆ ಕಚೇರಿ ಪ್ರೀಮಿಯಂ ಉಳಿತಾಯ ಖಾತೆ ತೆರೆದರೆ ಯಾವೆಲ್ಲ ಪ್ರಯೋಜನಗಳಿವೆ? ಇಲ್ಲಿದೆ ಮಾಹಿತಿ. ಪ್ರೀಮಿಯಂ  ಖಾತೆ ಪ್ರಯೋಜನಗಳು *ಮನೆ ಬಾಗಿಲಿನ ತನಕ ಉಚಿತ ಬ್ಯಾಂಕಿಂಗ್ ಸೌಲಭ್ಯ *ನಗದು ಠೇವಣಿ ಹಾಗೂ…

Read More

ಸ್ನೇಹಿತರನ್ನು ಗುಂಪು ಹಾಕಿಕೊಂಡು ಹೋಗುವ ಪ್ರವಾಸ ಒಂದು ರೀತಿಯ ಅನುಭವವಾದರೆ ಏಕಾಂಗಿಯಾಗಿ ಪ್ರವಾಸ ಮಾಡುವುದು ಇನ್ನೊಂದು ರೀತಿಯ ಅನುಭವ ಕೊಡುತ್ತದೆ. ಒಂಟಿಯಾಗಿ ಪ್ರವಾಸ ಮಾಡುವುದು ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವರು ಮಾತ್ರ ಒಬ್ಬಂಟಿಯಾಗಿ ಟೂರ್ ಮಾಡಿಕೊಂಡು ಬರಬೇಕೆಂದು ಆಸೆ ಪಡುತ್ತಾರೆ. ಆದರೆ ಸೋಲೊ ಪ್ರಯಾಣವು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. https://ainlivenews.com/you-can-make-healthy-puris-without-using-oil-do-you-know-how-here-are-the-tips/ ಒಂಟಿ ಪ್ರಯಾಣದ ಪ್ರಯೋಜನಗಳು: ಏಕಾಂಗಿಯಾಗಿ ಪ್ರಯಾಣಿಸುವುದು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ. ನಾವು ಯಾವುದೇ ಸಮಯದಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದರ ಅರಿವು ನಮಗಾಗುತ್ತದೆ. ನಿಮ್ಮ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳುವಿರಿ. ಏನು ಮಾಡಬೇಕು, ಎಲ್ಲಿಯವರೆಗೆ ಎಲ್ಲಿ ಉಳಿಯಬೇಕು ಮತ್ತು ಹತ್ತಿರದ ಪ್ರದೇಶಗಳಲ್ಲಿ ಎಷ್ಟು ಸಮಯ ಕಳೆಯಬೇಕು ಎಲ್ಲವೂ ನಿಮ್ಮ ಕೈಯಲ್ಲಿರುತ್ತದೆ ಆದ್ದರಿಂದ ನೀವು ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತೀರಿ. ಏಕಾಂಗಿಯಾಗಿ ಪ್ರಯಾಣಿಸುವುದು ಅಗ್ಗವಾಗಿದೆ. ಇದರಿಂದ ಹಣ ಉಳಿತಾಯವಾಗುತ್ತದೆ. ಏಕಾಂಗಿಯಾಗಿ ಪ್ರಯಾಣಿಸುವಾಗ ಮುಂದಿನದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು. ಸಾಮಾನ್ಯವಾಗಿ ನಾವು ಏಕಾಂಗಿ ಪ್ರಯಾಣವನ್ನು ಮಾಡಲು…

Read More

ಸೂರ್ಯೋದಯ: 06:33, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ತ್ರಯೋದಶಿ ನಕ್ಷತ್ರ: ಸ್ವಾತಿ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ರಾ .2:56 ನಿಂದ ಬೆ.4:41 ತನಕ ಅಭಿಜಿತ್ ಮುಹುರ್ತ: ಬೆ.11:42 ನಿಂದ ಮ.12:26 ತನಕ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಕಂಪನಿ ವತಿಯಿಂದ ವಿದೇಶ ಪ್ರವಾಸ, ಸಹ ಉದ್ಯೋಗಿಗಳಿಂದ ವೈಮನಸ್ಸು, ಭೂಮಿ ಮನೆ ಅಥವಾ ಕಾಂಪ್ಲೆಕ್ಸ್ ಖರೀದಿ ಯೋಗ ಇದೆ,ಸಂತಾನದ ಶುಭ ಸಮಾಚಾರ, ಅಧಿಕಾರಿಗಳಿಗೆ ಅಪವಾದಗಳು ಬೆನ್ನು ಹತ್ತಿವೆ, ಎಲೆಕ್ಟ್ರಾನಿಕ್…

Read More

ಬೆಂಗಳೂರು: ಹೊಸಕೋಟೆ ಈ ರಾಜಕೀಯಕ್ಕೆ ಎಷ್ಟು ಹೆಸರುವಾಸಿಯೋ ಅಷ್ಟೇ ಹೊಡಿಬಡಿ ಅನ್ನೋದಕ್ಕೆ ಪ್ರಸಿದ್ಧಿ ಆಗಿ ಹೋಗಿದೆ. ಸಣ್ಣ ಪುಟ್ಟ ವಿಷಯಗಳು ಲಾಂಗು ಮಚ್ಚು ಹಿಡಿದು ಹೊಡೆದಾಟ ನಡೆಸುವ ಹಂತಕ್ಕೆ ಹೋಗುತ್ತಾರೆ. ಇಂತಹ ಒಂದು ಘಟನೆ ಇತ್ತೀಚೆಗೆ ಹೊಸಕೋಟೆ ನಗರದಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಏಕಾಏಕಿ ಗುಂಪೊಂದು ಡೆಡ್ಲಿ ಅಟ್ಯಾಕ್ ಮಾಡಲಾಗಿದೆ ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್.. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಕಳೆದ ಒಂದು ವಾರದ ಹಿಂದೆ ಸೈಯದ್ ಜಿಶಾನ್ ಎಂಬ ವಿದ್ಯಾರ್ಥಿ ಮೇಲೆ ಒಂಭತ್ತು ಜನ ಗುಂಪೊಂದು ಅಟ್ಯಾಕ್ ಮಾಡಿ ಲಾಂಗು ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸೈಯದ್ ಜಿಶಾನ್ ಮತ್ತು ಅವನ ಸ್ನೇಹಿತರು ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಲಾಂಗು, ಮಚ್ಚು, https://ainlivenews.com/your-pan-card-will-now-come-with-a-qr-code-what-is-the-pan-2-0-scheme-here-is-the-information/ ವಿಕೇಟ್ ಮತ್ತು ಬ್ಯಾಟ್ ಗಳನ್ನು ಹಿಡಿದ ದುಷ್ಕರ್ಮಿಗಳ ತಂಡ ಏಕಾಏಕಿ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ…

Read More

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು. ದರ್ಶನ್​ಗೆ ಈಗಾಗಲೇ ಮಧ್ಯಂತರ ಜಾಮೀನನ್ನು ಹೈಕೋರ್ಟ್ ನೀಡಿದೆ. ಈಗ ಜನರಲ್ ಬೇಲ್ ಗೆ ಅರ್ಜಿ ಸಲ್ಲಿಸಲಾಗಿತ್ತು. ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಾಡಿದ್ದಾರೆ. ಎಸ್​ಪಿಪಿ ವಾದ ಬಾಕಿ ಇರುವ ಇನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ. https://ainlivenews.com/your-pan-card-will-now-come-with-a-qr-code-what-is-the-pan-2-0-scheme-here-is-the-information/ ದರ್ಶನ್​​ ಮ್ಯಾನೇಜರ್ ನಾಗರಾಜ್ ಪರ ವಕೀಲ ಸಂದೇಶ್ ಚೌಟ ಅವರು ವಾದ ಮಂಡಿಸಿದ್ದಾರೆ. ಆರೋಪಿಗಳಿಗೆ ಗ್ರೌಂಡ್ಸ್ ಆಫ್‌ ಅರೆಸ್ಟ್​ ನೀಡಿಲ್ಲ. ಬಂಧನಕ್ಕೆ ಕಾರಣಗಳನ್ನು ನೀಡದಿರುವುದು ಗಂಭೀರ ಪ್ರಮಾದ. ಈ ಕಾರಣಕ್ಕೆ ಜಾಮೀನು ನೀಡಬೇಕೆಂದು ಸಂದೇಶ್ ಚೌಟ ವಾದ ಮಾಡಿದ್ದಾರೆ. ದರ್ಶನ್​ ಸೇರಿ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಆಗಿದೆ.

Read More

ಪಿ.ಆರ್.ಕೆ ಪ್ರೊಡಕ್ಷನ್ಸ್‌, ಜಯಣ್ಣ ಫಿಲಂಸ್, ಕೆ.ಆರ್.ಜಿ.ಸ್ಟುಡಿಯೋಸ್‌ ಸಹಯೋಗದಲ್ಲಿ ಮೂಡಿಬರುತ್ತಿರುವ  ಯುವ ರಾಜ್‌ ಕುಮಾರ್‌ ಅವರ ಬಹು ನಿರೀಕ್ಷಿತ ಚಿತ್ರ “ಎಕ್ಕ” ಇಂದು ತನ್ನ ನಾಂದಿ ಪೂಜೆ/ಮುಹೂರ್ತವನ್ನು ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿಸಿ, ಚಿತ್ರೀಕರಣವನ್ನು ಆರಂಭಿಸಿದೆ. ವಿಜಯ್‌ ಕಿರಗಂದೂರ್‌ ಅವರ ಪತ್ನಿ ಶ್ರೀಮತಿ  ಶೈಲಜಾ ವಿಜಯ್‌ ಕ್ಲಾಪ್‌ ಮಾಡುವ ಮೂಲಕ “ಎಕ್ಕ” ಚಿತ್ರಕ್ಕೆ ನಾಂದಿ ಹಾಡಲಾಯಿತು, ಮೊದಲ ಶಾಟ್‌ ಅನ್ನು ನಟರಾಕ್ಷಸ ಡಾಲಿ ಧನಂಜಯ್‌ ನಿರ್ದೇಶಿಸಿದ್ದು, ನಿರ್ಮಾಪಕ ಕಾರ್ತಿಕ ಗೌಡ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮೆರಾ ಬಟನ್‌ ಆನ್‌ ಮಾಡುವ ಮೂಲಕ ಚಾಲನೆ ನೀಡಿದರು. ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವಾರು ಸ್ಥಳಗಳಲ್ಲಿ “ಎಕ್ಕ” ಚಿತ್ರದ ಚಿತ್ರೀಕರಣ ನಡೆಯುವುದಾಗಿ ತಂಡ ಇಂದು ತಿಳಿಸಿದೆ.ಚಿತ್ರದ ನಿರ್ದೇಶಕ ರೋಹಿತ್‌ ಪದಕಿ ಮಾತನಾಡಿ, “ಎಕ್ಕ ಒಂದು ಮೆಗಾ ಚಿತ್ರವಾಗಿದ್ದು, ಇದರ ಜವಾಬ್ದಾರಿ ಹೊತ್ತಿರುವ ಹೆಮ್ಮೆ ನನಗಿದೆ. ಚಿತ್ರದ ಎಲ್ಲ ನಿರ್ಮಾಪಕರು, ಕನ್ನಡ ಜನರು, ಯುವ ರಾಜ್‌ ಕುಮಾರ್‌ ಮತ್ತು…

Read More

ಬೆಂಗಳೂರು: ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಮಾಡುವ ವಾಗ್ದಾಳಿ ನಿಲ್ಲಲಾರದು. ಅದರಂತೆ ಸಾಮಾಜಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಯತ್ನಾಳ್, ಕೆಲವರ ಒತ್ತಾಯದ ಮೇರೆಗೆ ಕೆಲವರು ಪತ್ರ ಬರೆಯುತ್ತಿದ್ದಾರೆ. ಅಂಥವರು ಕಾರ್ಯಕರ್ತರಲ್ಲ, ಚೇಲಾಗಳು. ರಕ್ತ ಹೆಚ್ಚಾಗಿದ್ದರೆ ಬಡ ರೋಗಿಗಳಿಗೆ ದಾನ ಮಾಡ್ರಿ. ನಮ್ಮದು ರೈತ ಪರ ಹೋರಾಟ ಎಂದು ಫೋಸ್ಟ್‌ ಮಾಡಿದ್ದಾರೆ. https://ainlivenews.com/clove-oil-is-very-beneficial-for-these-6-problems-of-yours/ ಬಿವೈ ವಿಜಯೇಂದ್ರ ಮತ್ತು ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ನಡುವಿನ ಕಚ್ಚಾಟ ಬೀದಿಗೆ ಬಿದ್ದ ಬೆನ್ನಲ್ಲೇ ಇದೀಗ ಯತ್ನಾಳ್‌ಗೆ ದೆಹಲಿಯಿಂದ ಬುಲಾವ್ ಬಂದಿದೆ. ನಿನ್ನೆ ದೆಹಲಿ ಹೈಕಮಾಂಡ್‌ನಿಂದ ಬಿಜೆಪಿ ಹಿರಿಯ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್‌ಗೆ ಕರೆ ಬಂದಿದ್ದು, ಇದರ ಬೆನ್ನಲ್ಲೇ ಆಕ್ರೋಶ ಹೊರಹಾಕಿದ್ದಾರೆ.

Read More

ಬೆಂಗಳೂರು: ತಿಮ್ಮಾಪುರ್ ಏನು ತಪ್ಪು ಮಾಡಿಲ್ಲ, ಏನೇ ಆದ್ರೂ ಎದುರಿಸುತ್ತೇನೆ ಎಂದು ಸಚಿವ ತಿಮ್ಮಾಪುರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಅಬಕಾರಿ ಇಲಾಖೆ ಆಡಿಯೋ ವಿಚಾರದಲ್ಲಿ ಜೆಸಿಯಿಂದ ವರದಿ ಪಡೆದಿದ್ದೇನೆ. ಆ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಇಲಾಖೆ ಮೇಲೆ ಲಂಚದ ಆರೋಪ ಬಂದಿರೋ ವಿಚಾರವಾಗಿ ವರದಿ ತರಿಸಿಕೊಳ್ಳೋಣ ಎಂದು ತಿಳಿಸಿದರು. https://ainlivenews.com/clove-oil-is-very-beneficial-for-these-6-problems-of-yours/ ಅಬಕಾರಿ ಇಲಾಖೆ ಮೇಲೆ ಆಗಾಗ ಇಂತಹ ಆರೋಪ ಕೇಳಿ ಬರುತ್ತದೆ. ಇಲಾಖೆಯಲ್ಲಿ ಕೆಲವು ವಿಚಾರಗಳನ್ನು ಸರಿ ಮಾಡಬೇಕು. ಅದನ್ನು ಮಾಡುತ್ತೇನೆ. ನನ್ನ ತಲೆದಂಡದ ಪ್ರಶ್ನೆ ಬರಲ್ಲ. ತಿಮ್ಮಾಪುರ್ ಏನು ತಪ್ಪು ಮಾಡಿಲ್ಲ. ಏನಾದರೂ ಇದ್ದರೆ ನಾನು ಅದನ್ನು ಎದುರಿಸುತ್ತೇನೆ. ಹಿಂದೆಯೂ ಅಬಕಾರಿ ಮಂತ್ರಿ ಆಗಿದ್ದವರ ಮೇಲೆ ಇಂತಹ ಆರೋಪಗಳು ಬಂದಿದೆ. ಎಲ್ಲಾ ಮಂತ್ರಿಗಳ ಮೇಲೂ ಆರೋಪ ಬಂದಿದೆ ಎಂದು ಹೇಳಿದರು.

Read More