Author: AIN Admin

ತಮಿಳುನಾಡು: ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ತರಗತಿಗೆ ನುಗ್ಗಿ ಮಕ್ಕಳ ಎದುರೇ ಶಿಕ್ಷಕಿಯ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ರಮಣಿ (26) ಕೊಲೆಯಾದ ಶಿಕ್ಷಕಿಯಾಗಿದ್ದು, ಹತ್ಯೆಗೈದ ಆರೋಪಿಯನ್ನು ಮದನ್ (30) ಎಂದು ಗುರುತಿಸಲಾಗಿದೆ. ಆತ ರಮಣಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ರಮಣಿಯವರು ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಮಣಿ ಹಾಗೂ ಮದನ್‌ ಕುಟುಂಬ ಭೇಟಿಯಾಗಿ ಮದುವೆಯ ವಿಚಾರ ಚರ್ಚಿಸಿದ್ದರು. ಈ ವೇಳೆ ಮದುವೆ ಪ್ರಸ್ತಾಪವನ್ನು ರಮಣಿಯವರು ತಿರಸ್ಕರಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮಿಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಶಾಲೆಯ ಭೇಟಿಗೆ ತೆರಳಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

Read More

ಆಕ್ರಮಣಕಾರಿ ಟೆನಿಸ್‌ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಸ್ಪೇನ್‌ ಚಾಂಪಿಯನ್‌ ಆಟಗಾರ ಹಾಗೂ ಕಿಂಗ್‌ ಆಫ್‌ ಕ್ಲೇ ಖ್ಯಾತಿಯ ರಾಫೆಲ್‌ ನಡಾಲ್‌ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಕಿಂಗ್ ಆಫ್ ಕ್ಲೇ ಎಂದೇ ಪ್ರಸಿದ್ಧಿಯಾಗಿರುವ ರಫೆಲ್ ನಡಾಲ್ ನ.19 ರಂದು ನಡೆದ ನೆದರ್‌ಲ್ಯಾಂಡ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದರು. ನಿವೃತ್ತಿ ಘೋಷಿಸಿದ ಬಳಿಕ ಸ್ಪ್ಯಾನಿಷ್ ರಾಷ್ಟ್ರಗೀತೆಯ ಸಂದರ್ಭದಲ್ಲಿ ರಫೆಲ್ ಭಾವುಕರಾದರು. ಇನ್ನೂ 10,000ಕ್ಕೂ ಹೆಚ್ಚು ಅಭಿಮಾನಿಗಳು “ರಾಫಾ, ರಾಫಾ” ಎಂದು ಕೂಗಿ ಹುರಿದುಂಬಿಸಿದರು. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಈ ಕುರಿತು ರಫೆಲ್ ಮಾತನಾಡಿ, ಇಂದು ನನ್ನ ಭಾವನಾತ್ಮಕ ದಿನ, ವೃತ್ತಿಪರನಾಗಿ ಇಂದು ನನ್ನ ಕೊನೆಯ ಪಂದ್ಯ. ಕೊನೆಯ ಬಾರಿ ಈ ರೀತಿಯಾಗಿ ರಾಷ್ಟ್ರಗೀತೆಯನ್ನು ಕೇಳುವುದು ಒಂದು ವಿಶೇಷ ಭಾವನೆ ಎಂದು ತಿಳಿಸಿದರು. 2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 29 ಪಂದ್ಯಗಳನ್ನು…

Read More

ಬೆಂಗಳೂರು: ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಹೊಸದಾಗಿ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಸಚಿವರು ಹೇಳುತ್ತಾರೆ. ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅರ್ಜಿ ಕೊಟ್ಟಿದ್ದೀರಾ? ನೋಟಿಸ್ ಕೊಟ್ಟಿದ್ದೀರಾ? ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಅಶೋಕ್ ಕಿಡಿಕಾರಿದರು. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಅಲ್ಲದೆ, ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಂದ ಲಂಚ ಪಡೆಯಲು ಇದು ಪಿತೂರಿ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಮಾಡಲಾಗಿದೆ ಎಂದು ಸಿಎಂ ಹೇಳುತ್ತಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 250 ಸರ್ಕಾರಿ ನೌಕರರ ಬಳಿ ಕಾರ್ಡ್ ಇತ್ತು ಎಂದರೂ ಅದ್ಹೇಗೆ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಎಂದು ಅಶೋಕ್ ಪ್ರಶ್ನಿಸಿದರು.

Read More

ಬೆಂಗಳೂರು: ಅನ್ನಭಾಗ್ಯದ ಬದಲು ಹಸೀನಾ ಭಾಗ್ಯವನ್ನು ಜಾರಿಗೊಳಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಅನ್ನ ಕಸಿದುಕೊಂಡು ರಾಜ್ಯವನ್ನು ನರಕ ಮಾಡಹೊರಟಿದೆ. ತಿಂಗಳಿಗೆ ಎರಡು ಮೂರು ಸಾವಿರ ರೂಪಾಯಿ ಕೂಡ ಸಂಪಾದಿಸಿದ ರಾಜ್ಯದ ಕಟ್ಟಕಡೆಯ ಬಡವರ ರೇಷನ್ ಕಾರ್ಡನ್ನು ಸರ್ಕಾರ ಕಿತ್ತುಕೊಂಡಿದೆ, ಪಡಿತರ ಚೀಟಿಗಾಗಿ ಕೆಲವರು ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಸಿಕ್ಕಿಲ್ಲ, https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಈಗ ಕಾರ್ಡ್ ರದ್ದಾದವರು ಸಹ ಹೊಸ ಕಾರ್ಡ್ ಪಡೆಯಲು 3 ವರ್ಷಗಳ ಅಲೆದಾಡಬೇಕು, ಅನ್ನಭಾಗ್ಯದ ಬದಲು ಹಸೀನಾ ಭಾಗ್ಯವನ್ನು ಜಾರಿಗೊಳಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇನ್ನೂ ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಅನ್ನ ಕೊಡುತ್ತಿದೆ. ಬೇರೆ ರಾಜ್ಯದಲ್ಲಿ ಎಲ್ಲಿ ರೇಷನ್ ಕಾರ್ಡ್ ರದ್ದಾಗಿದೆ? ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ರದ್ದಾಗಿದೆ?…

Read More

ಬಳ್ಲಾರಿ: ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಶಾಲಾ, ಕಾಲೇಜು ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಬಂದ ಘಟನೆ ಗುರುವಾರ ನಡೆದಿದೆ. ಹಲವು ದಿ‌ನಗಳಿಂದ ಬೆಣಕಲ್ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಸ್ ಇರದ ಕಾರಣ  ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಲು ಸಮಸ್ಯೆ ಆಗಿದೆ. ಇದರಿಂದ ಶೈಕ್ಷಣಿಕವಾಗಿ ಪೆಟ್ಟು ಬೀಳುತ್ತಿದೆ. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಸಾಕಷ್ಟು ವಿದ್ಯಾರ್ಥಿಗಳು ‌ಬಸ್ ಸಮಸ್ಯೆಯಿಂದ ಕಾಲೇಜು ತೊರೆಯುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾರಿಗೆ ಘಟಕದ ಅಧಿಕಾರಿಗಳಿಗೆ ಹಲವು ಬಾರಿ‌ ಮನವಿ ನೀಡಿ ಸಾಕಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸದ ಕಾರಣ ಬೇಸತ್ತು ಶಾಲಾ ಕಾಲೇಜು ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇವೆ ಎಂದು ಅಲವತ್ತುಕೊಂಡರು. ಮನವಿ ಆಲಿಸಿದ ಎಡಿಸಿ ಮಹ್ಮದ್ ಜುಬೇರ್ ಸಾರಿಗೆ ಇಲಾಖೆಯ ಜಿಲ್ಲಾಧಿಕಾರಿಗೆ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ವಿದ್ಯಾರ್ಥಿಗಳಾದ ಅಶ್ವಿನಿ, ತ್ರೀವೇಣಿ, ರವಿ ತೇಜ, ತಿರುಮಲ, ಶಿವಕುಮಾರ್, ಸರ್ಪಲಿಂಗ್,…

Read More

ಬೆಂಗಳೂರು: ತೀವ್ರಗೊಂಡಿರುವ ಪಡಿತರ ಕಾರ್ಡ್‌ ರದ್ದತಿ ವಿವಾದ ತಗ್ಗಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರು, ಸರಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನೂ ರದ್ದು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಯಾವುದೇ ಬಿ ಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಿಲ್ಲ ಎಂದು ವಿಧಾನಸೌಧದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ  ಕೆ ಎಚ್ ಮುನಿಯಪ್ಪ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಹೌದು ಸಿಎಂ ಆದೇಶದಂತೆ ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಲಾಗಿದೆ ಅಷ್ಟೇ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನರ್ಹರ ಕಾರ್ಡ್ ಪತ್ತೆಗೆ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದರು. ಇನ್ನೂ ಬಿಪಿಎಲ್ ಗೆ ಅರ್ಹರಿದ್ದು ಅಂತಹವರನ್ನ ಎಪಿಎಲ್ ಗೆ ಸೇರಿಸಿದ ಕಾರ್ಡ್ ಗಳನ್ನ ಮರು ಸ್ಥಾಪನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಿಪಿಎಲ್ ಮಾನದಂಡ ಮೀರಿದ ಒಂದು ಲಕ್ಷದ ಐನೂರು ಕಾರ್ಡ್…

Read More

ಬೆಂಗಳೂರು: ಬೊಮ್ಮಾಯಿ ವಿರುದ್ಧ ಅಸಮಾಧಾನ ಇದೆ, ಶಿಗ್ಗಾವಿಯಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 3 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಹಿಂದೆ ಬೊಮ್ಮಾಯಿ 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈಗ 10 ಸಾವಿರಕ್ಕೆ ಬಂದಿದ್ದಾರೆ ಅಂತಿದೆ. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಇದೆ. ಹೀಗಾಗಿ ಶಿಗ್ಗಾವಿಯಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು. https://ainlivenews.com/50-subsidy-for-construction-of-shed-for-mushroom-farmers-apply-today/ ಇನ್ನು ಇದೇ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ಭಿನ್ನ ವರದಿಗಳನ್ನು ಕೊಟ್ಟಿವೆ. ಅದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಜನರು ಮಹಾರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ.ಯುವಕರಿಗೆ ಸಿಗುತ್ತಿರುವ ಉದ್ಯೋಗಗಳು ಗುಜರಾತ್ ಪಾಲಾಗುತ್ತಿವೆ. ಜನರಲ್ಲಿ ಇದರ ಬಗ್ಗೆ ಅಸಮಾಧಾನ ಇದೆ. ಇದನ್ನೆಲ್ಲಾ ಗಮನಿಸಿದರೆ ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದರು.

Read More

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್​ಗೆ ಇಂದು ಟೆನ್ಷನ್​ ಡೇ ಆಗಿದೆ. ನಟ ದರ್ಶನ್‌ಗೆ ಹೈಕೋರ್ಟ್‌ ಅಕ್ಟೋಬರ್‌ 30ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಬೆಂಗಳೂರಿ ಪೊಲೀಸರು ನಿರ್ಧರಿಸಿದ್ದಾರೆ. ಇನ್ನೂ ಇಂದು ಹೈಕೋರ್ಟ್​ನಲ್ಲಿ ದರ್ಶನ್​ ರೆಗ್ಯೂಲರ್‌ ಬೇಲ್​ ಅರ್ಜಿ ವಿಚಾರಣೆ ನಡೆಯಲಿದೆ. ರೆಗ್ಯೂಲರ್‌ ಬೇಲ್​ಗಾಗಿ ​ದರ್ಶನ್​ ಪರ ಲಾಯರ್​ ವಾದ ಮಂಡಿಸಲಿದ್ದಾರೆ. ಈ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಎಸ್​ಪಿಸಿ ತಯಾರಿ ಮಾಡಿಕೊಂಡಿದ್ದಾರೆ. ಮತ್ತೊಂದ್ಕಡೆ ಮಧ್ಯಂತರ ಬೇಲ್​ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಾಗಿದೆ.ನಟ ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿ 5 ತಿಂಗಳು ಕಳೆದಿದ್ರೂ ಜಾಮೀನು ಸಿಕ್ಕಿಲ್ಲ. https://ainlivenews.com/50-subsidy-for-construction-of-shed-for-mushroom-farmers-apply-today/ ಇಂದು ಪವಿತ್ರಾಗೌಡ ಸೇರಿ ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಬೇಲ್​ ಸಿಗುವ ನಿರೀಕ್ಷೆಯಲ್ಲಿ ಪವಿತ್ರಾ ಗೌಡ ಇದ್ದಾರೆ. ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿಯವರ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾ ಗೌಡ, ಆರ್. ನಾಗರಾಜು, ಅನುಕುಮಾರ್,…

Read More