Author: AIN Admin

ಬೆಂಗಳೂರು: ಮೋದಿ ಸರಕಾರ ರೈತರಿಗಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಯೋಜನೆಯನ್ನು ತಂದಿದೆ. ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯು, ಭಾರತೀಯ ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಸಾಲವನ್ನು ನೀಡುತ್ತದೆ. ಈ ಯೋಜನೆಯು  ರೈತರ  ಕೃಷಿಗೆ ಅವಶ್ಯವಿರುವ  ಟ್ರ್ಯಾಕ್ಟರ್‌ಗಳನ್ನು ಬಳಸಲು ಧನ ಸಹಾಯ  ಮಾಡಿಕೊಡುತ್ತದೆ.  ಈ ಯೋಜನೆಯಿಂದ  ರೈತರ ಜೀವನವನ್ನು ಸುಧಾರಿಸುತ್ತದೆ. ಟ್ರಾಕ್ಟರ್ ಅನ್ನು ಸರಿಯಾಗಿ ಬಳಸುವುದರಿಂದ ಉತ್ಪನ್ನದ ಗುಣಮಟ್ಟ, ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಈ  ಯೋಜನೆಯು  ಸಹಾಯ ಮಾಡುತ್ತದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನಯಡಿ ಟ್ರಾಕ್ಟರ್ ಖರೀದಿಸಲು ಇಚ್ಚಿಸುವ ರೈತರು ಆನ್‌ಲೈನ್ ಅಥವಾ ಸಂಬಂಧ ಪಟ್ಟ ಸ್ಛಳೀಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ಪಾವತಿಸಲಿದೆ. https://ainlivenews.com/do-you-know-blood-sugar-will-become-normal-if-you-drink-the-water-soaked-in-this-seed/ ಶೇಕಡಾ 50 ರಷ್ಟು ಸಬ್ಸಡಿ ಇರುವುದರಿಂದ ರೈತರು ಅರ್ಧದಷ್ಟು ಹಣ ಪಾವತಿಸಿದರೆ ಟ್ರಾಕ್ಟರ್ ಲಭ್ಯವಾಗಲಿದೆ. ಈ ಅರ್ಧ ಹಣಪಾವತಿಗೂ ಸಾಲ ಸೌಲಭ್ಯವಿದೆ. ಕೆಲ ರಾಜ್ಯಗಳು ಕೇಂದ್ರ…

Read More

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧುಬಂಗಾರಪ್ಪ ಗುಡ್‌ ನ್ಯೂಸ್‌ ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಪ್ರತಿಯಾಗಿ ಸದ್ಯ ಮೊದಲ ಹಂತವಾಗಿ 10,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ರಾಜ್ಯದ ಸರ್ಕಾರ ಶಾಲೆಗಳಲ್ಲಿ ಸಾಕಷ್ಟು ಸಂಖ್ಯೆಯ ಶಿಕ್ಷಕರ ಅಭಾವವಿದ್ದು, ಈ ಸಂಬಂಧ 13,000 ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 10,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದೇವೆ’ ಎಂದು ತಿಳಿಸಿದರು. ಹಿಂದಿನ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 13,353 ಮಂದಿ ಅರ್ಹತೆ ಪಡೆದಿದ್ದರು. ಇದರಲ್ಲಿ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ಪ್ರಮಾಣಪತ್ರ ವಿತರಣೆ ಮಾಡಬೇಕಿದೆ. ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ಉಳಿದ ಅಭ್ಯರ್ಥಿಗಳಿಗೆ ಇನ್ನಷ್ಟೇ ಪ್ರಮಾಣಪತ್ರ ವಿತರಣೆ ಮಾಡಬೇಕಿದೆ. ಸುಪ್ರೀಂಕೋರ್ಟ್‌ ಮತ್ತು ಆರ್ಥಿಕ ಇಲಾಖೆ ಅನುಮತಿ ನೀಡಿದ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Read More

ಉಗುರುಗಳನ್ನು ಕತ್ತರಿಸುವುದು ಆರೋಗ್ಯಕರವಾದ ಅಭ್ಯಾಸ. ಬೆರಳು ಹಾಗೂ ಉಗುರಿನ ಸಂಧಿಯಲ್ಲಿ ಸಿಲುಕಿಕೊಳ್ಳುವ ಕೊಳಕು ಮತ್ತು ಸೂಕ್ಷ್ಮ ಜೀವಿಗಳು ಸಂಗ್ರಹವಾಗುವುದನ್ನು ಸುಲಭವಾಗಿ ತಡೆಗಟ್ಟಬಹುದು. ಹಿಂದೂ ನಂಬಿಕೆ ಹಾಗೂ ಕೆಲವು ಸಂಪ್ರದಾಯಗಳ ಪ್ರಕಾರ ಉಗುರು ಎಲ್ಲಾ ಸಮಯದಲ್ಲೂ ಮಾಡಬಾರದು. ಅದು ವ್ಯಕ್ತಿಗೆ ನಕಾರಾತ್ಮಕ ಫಲವನ್ನು ನೀಡುವುದು ಎಂದು ಹೇಳಲಾಗುವುದು. ಅದರಲ್ಲೂ ಶುಭಕರವಾದ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕೆಲವು ತಿಥಿಗಳಲ್ಲಿ, ವಿಶೇಷವಾದ ವಾರಗಳಲ್ಲಿ ದಿನದ ಎಲ್ಲಾ ಸಮಯದಲ್ಲಿ ಉಗುರು ಕತ್ತರಿಸುವುದು ಮಾಡಬಾರದು. ಮಂಗಳವಾರ ಮತ್ತು ಶನಿವಾರ ಮಂಗಳವಾರ, ಶನಿವಾರ ಮತ್ತು ಗುರುವಾರ ಉಗುರುಗಳನ್ನು ಕತ್ತರಿಸಬಾರದು. ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಿದರೆ, ಅದರ ಕೆಟ್ಟ ಪರಿಣಾಮಗಳನ್ನು ನೀವು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ಹಣ ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಮಂಗಳವಾರ ಕತ್ತರಿ, ನೇಲ್ ಕಟರ್‌ನಂಥ ಚೂಪು ವಸ್ತುಗಳ ಬಳಕೆಗೇ ಶಾಸ್ತ್ರದಲ್ಲಿ ನಿಷೇಧವಿದೆ. ಈ ದಿನ ಯುದ್ಧಕಾರಕ ಮಂಗಳನು ಇವುಗಳ ಬಳಕೆಗೆ ತೊಡಗಿದರೆ ಹೆಚ್ಚಿನ ದೈಹಿಕ ಹಾನಿಗೆ ಕಾರಣನಾಗುತ್ತಾನೆ. ಇದಲ್ಲದೇ ಅಮವಾಸ್ಯೆ ಮತ್ತು ಚತುರ್ದಶಿ ತಿಥಿಯಂದು…

Read More

ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ಸಪ್ತಮಿ ನಕ್ಷತ್ರ:ಆಶ್ಲೇಷ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಮ.3:27 ನಿಂದ ಸಂ.5:10 ತನಕ ಅಭಿಜಿತ್ ಮುಹುರ್ತ: ಬೆ.11:40 ನಿಂದ ಮ.12:24 ತನಕ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ನಿರ್ವಹಣಾ ಅಧಿಕಾರಿಗಳಿಗೆ ಧನ ಲಾಭ ಮತ್ತು ಜಾಗ್ರತೆ ಇರಲಿ, ಪುರೋಹಿತರಿಗೆ ಧನ ಲಾಭ, ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ, ವಕೀಲರಿಗೆ ಉನ್ನತ ಹುದ್ದೆ ದೊರೆಯಲಿದೆ, ಗ್ಲಾಸ್ ಪ್ರೇಮ ವರ್ಕರ್ ಉದ್ದಿಮೆದಾರರಿಗೆ ಆರ್ಥಿಕ ಚೇತರಿಕೆ,ಆಸ್ತಿ ದಾಖಲಾತಿಗಳ ಬಗ್ಗೆ ಗೊಂದಲ.ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರ ವಹಿವಾಟದಲ್ಲಿ ಕ್ರಿಯಾಶೀಲರಾಗಿರುವಿರಿ. ವ್ಯಾಪಾರಗಳಲ್ಲಿ ಹೆಚ್ಚು ಮುಂದಾಲೋಚನೆ ವಹಿಸಿ ಲಾಭದತ್ತ ಹೆಜ್ಜೆ ಹಾಕುವಿರಿ. ಸೃಜನಶೀಲ…

Read More

‘ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆದೇಶಿಸಿದ ಮಧು ಬಂಗಾರಪ್ಪ. ವಿಡಿಯೋ ಕಾನ್ಫರೆನ್ಸ್‌ ವೇಳೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳುವಂತೆ ಸಚಿವ ಮಧು ಬಂಗಾರಪ್ಪ ಆಗ್ರಹ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಶಿಕ್ಷಣ ಸಚಿವರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. https://www.youtube.com/watch?v=v9xt5YNVgbA&t=55s 

Read More

ಬೆಂಗಳೂರು: ಅವ್ರು ಒಂದು ರೇಂಜ್ ನ ರ್ಯಾಂಕಿಂಗ್ ಅಧಿಕಾರಿಗಳು.. ಇಲಾಖೆಗಳಲ್ಲಿ ಕೆಲಸ ಮಾಡಿ ಕೋಟಿ ಕುಳ ಅನ್ನಿಸಿಕೊಂಡಿದ್ದವರು.. ಆದಾಯಕ್ಕೂ ಮೀರಿ ಅಸಮತೋಲನ ಆಸ್ತಿ ಗಳಿಸಿರೋ ಆರೋ ಹೊತ್ತಿರೋರು.. ಆ ಭ್ರಷ್ಟ ಅಧಿಕಾರಿಗಳು ಕಣ್ಬಿಡ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ರು. ಹೌದು.. ಇವತ್ತು ಬೆಳ್ ಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ.. ನಾಲ್ವರು ಭ್ರಷ್ಟಾಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಬೆಳ್ಳಗ್ಗೆ ಏಳು ಗಂಟೆಗಳಿಂದ್ಲೂ ಪರಿಶೀಲನೆ ನಡೆಸ್ತಿದ್ದಾರೆ.. ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಮಂಗಳೂರಿನ‌ 25ಕಡೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟಿಯಾಡಿದ್ದಾರೆ.. ಅಂದ್ಹಾಗೆ ಕನಕಪುರ ರಸ್ತೆಯ ವಾಜರಹಳ್ಳಿ ಬಳಿ ಇರೋ ಅಬಕಾರಿ ಸೂಪರಿಂಟೆಂಡೆಂಟ್ ಮೋಹನ್ ವಿಲ್ಲಾ ಮೇಲೆ ಮತ್ತು ಗಿರಿನಗರ ಬಳಿಯ ಡೈರೆಕ್ಟರ್ ಆಫ್ ಟೌನ್ ಪ್ಲಾನಿಂಗ್ ಡೈರೋಕ್ಟರಿಯಲ್ ಕೆ ತಿಪ್ಪೇಸ್ವಾಮಿ ಬಂಗಲೆ ಮೇಲೆ ಲೋಕಾಯುಕ್ತ ಟೀಂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.. ಇಬ್ಬರ ವಿರುದ್ಧವೂ ಭ್ರಷ್ಟಚಾರ, ಅಸಮತೋಲನ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿತ್ತು.. ಆರೋಪ…

Read More

ಮಂಗಳೂರು: ಜನರಿಗೆ ಹೊರೆಯಾಗದಂತೆ ಸೇವಾ ಶುಲ್ಕ ಪರಿಷ್ಕರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಜನರಿಗೆ ಹೊರೆಯಾಗದಂತೆ ಸೇವಾ ಶುಲ್ಕ ಪರಿಷ್ಕರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 15% ರಿಂದ 20% ರಷ್ಟು ಶುಲ್ಕ ಹೆಚ್ಚಳದ ಬಗ್ಗೆ ಚರ್ಚೆಗಳಿವೆ. ಈ ಹಿಂದೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಆರೋಗ್ಯ ಇಲಾಖೆಯ ಆಯುಕ್ತರ ಅನುಮತಿ ಪಡೆದು ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ಉಳಿದ ಯಾವುದೇ ಆಸ್ಪತ್ರೆಗಳಲ್ಲಾಗಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಾಗಲಿ ಇಲ್ಲಿಯವರೆಗೂ ಸೇವಾ ಶುಲ್ಕದಲ್ಲಿ ಹೆಚ್ಚಳವಾಗಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರಿಗೆ ಹೊರೆಯಾಗದಂತೆ ಸೂಕ್ತ ರೀತಿಯಲ್ಲಿ ಶುಲ್ಕ ಪರಿಷ್ಕರಣೆ ಮಾಡುವುದಾಗಿ ಹೇಳಿದರು. https://ainlivenews.com/do-you-know-how-many-health-benefits-of-eucalyptus-leaves-2/ ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆ ಇನ್ನೂ ಪ್ರಾಥಮಿಕ ಹಂತದ ಚರ್ಚೆಯಲ್ಲಿದೆ. ಇಲ್ಲಿಯವರೆಗೂ ಸಾಮೂಹಿಕವಾಗಿ ಯಾವುದೇ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

Read More

ಬೆಂಗಳೂರು: ಅಧಿಕಾರಕ್ಕೆ ಬಂದ ಮೊದಲ ದಿನವೇ ಅನ್ನಭಾಗ್ಯ ಯೋಜನೆ‌ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೊದಲ ದಿನವೇ ಅನ್ನಭಾಗ್ಯ ಯೋಜನೆ‌ ಕೊಟ್ಟಿದ್ದು ಸಿದ್ದರಾಮಯ್ಯನವರು. ದೇಶದಲ್ಲಿ ಈ ಆಹಾರ ಭದ್ರತೆ ಕಾಯ್ದೆಯನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ ಎಂದು ಹೇಳಿದರು. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಇನ್ನೂ ಬಿಎಸ್ ವೈ ಅಧಿಕಾರಕ್ಕೆ ಬಂದ್ಮೇಲೆ ಏಳರಿಂದ ಐದು ಕೆಜಿಗೆ ಇಳಿಸಿದ್ರು.  ದೇಶದಲ್ಲಿ ಐದು ಕೋಟಿ ಎಂಟು ಲಕ್ಷ ಕಾರ್ಡ್ ಗಳನ್ನ ಕೇಂದ್ರ ಸರ್ಕಾರ ರದ್ದು ಮಾಡಿದೆ.  ಗೊಂದಲಕ್ಕೆ ಅವಕಾಶ ಕೊಡಬಾರದು ಅಂತಾ ಈ ನಿರ್ಣಯ ತೆಗೆದುಕೊಂಡಿದ್ದೀವಿ. ಎಪಿಎಲ್ ನವ್ರು ಯಥಾಸ್ಥಿತಿಯಲ್ಲಿ ಇರ್ತಾರೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಬಿಪಿಎಲ್ ಕಾರ್ಡ್​ದಾರರನ್ನು ಎಪಿಎಲ್​ಗೆ ಸೇರ್ಪಡೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ, ಎಲ್ಲ ಗೊಂದಲದ ಹೊಣೆ ನಾನೇ ಹೊರುವೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡುವೆ. ಯಾವುದೇ ಅರ್ಹ…

Read More

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು. ವಾದ, ಪ್ರತಿವಾದದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಯ್ತು. ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು ದರ್ಶನ್​ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲವ ಎಂದು ವಾದ ಮಂಡಿಸಿದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಇದೇ ವೇಳೆ ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್​ಪಿಪಿ ಆಕ್ಷೇಪಣೆ ಸಲ್ಲಿಸಿದರು. 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ, ಆದರೆ ಸರ್ಜರಿಯ ದಿನಾಂಕ ತಿಳಿಸಿಲ್ಲವೆಂದು ಎಸ್​ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಕೆ ಮಾಡಿದರು. https://ainlivenews.com/do-you-know-how-many-health-benefits-of-eucalyptus-leaves-2/ ಅದೇ…

Read More

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳೂರಿನ ಶರಾವತಿ ಬಾರ್ ಸಮೀಪ ನಡೆದಿದೆ. ಮದುರೈ ಮೂಲದ ಅಲಗರಾಜ್(31) ಕೊಲೆಯಾದ  ವ್ಯಕ್ತಿಯಾಗಿದ್ದು, ಅರೆನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನ್ನು ಘಟನಾ ಸ್ಥಳದಲ್ಲಿ TVS ಎಕ್ಸೆಲ್ ಬೈಕ್, ಹಾಗೂ ತುಪ್ಪದ ಟಿನ್ ಪತ್ತೆಯಾಗಿದ್ದು, https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಶವ ಬಿದ್ದಿರುವುದನ್ನು ಬಾಟಲ್, ಚಿಂದಿ ಆಯುವವರು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು, ಶ್ವಾನದಳ, ಎಫ್ಎಸ್ಎಲ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಳೇ ವೈಷಮ್ಯದ ಹಿನ್ನೆಲೆ ತಲೆಗೆ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.  

Read More