ಬೆಂಗಳೂರು: ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತಾರೆ. ಕೋಶ ಓದಲು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಆದರೆ ದೇಶ ಸುತ್ತಬೇಕು ಎಂದರೆ ನಿಮ್ಮ ಜೇಬು ಕೂಡ ಅಷ್ಟೇ ಗಟ್ಟಿ ಇರಬೇಕು. ಹಾಗಂತ ಎಲ್ಲಾ ಪ್ರವಾಸಗಳು ದುಬಾರಿಯೇ ಇರುತ್ತದೆ ಎಂದು ಹೇಳಲಾಗದು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುವ ಮುನ್ನ ನಮ್ಮ ಬಳಿ ವೀಸಾ ಇರಲೇಬೇಕು. ಆದರೆ ಲೇಖನದಲ್ಲಿ ಹೇಳಲಾಗುವ ಈ ದೇಶಗಳಿಗೆ ನೀವು ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದು. ವೀಸಾ ಅವಶ್ಯಕತೆ ಇಲ್ಲದೆ ಭಾರತೀಯರು ಪ್ರವಾಸ ಕೈಗೊಳ್ಳಬಹುದಾದ ಕೆಲವು ರಾಷ್ಟ್ರಗಳು: ಮಾರಿಷನ್: ನೀವು ವೀಸಾ ಅಗತ್ಯವಿಲ್ಲದೆ ಗರಿಷ್ಟ 90 ದಿನಗಳವರೆಗೆ ಮಾರಿಷನ್ ನಲ್ಲಿ ಉಳಿಯಬಹುದು. ಇದು ಭಾರತೀಯರಿಗೆ ಅತ್ಯಂತ ಸ್ನೇಹಪರ ರಾಷ್ಟ್ರಗಳಲ್ಲಿ ಒಂದಾಗಿದೆ. ಇದೊಂದು ದ್ವೀಪರಾಷ್ಟ್ರವಾಗಿದ್ದು, ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನು ಸವಿಯಲು, ಸಾಹಸಿಮಯ ಜಲಕ್ರೀಡೆಗಳನ್ನು ಆಡಲು ನೀವು ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು. ನೇಪಾಳ: ನೇಪಾಳವು ಭಾರತೀಯರಿಗೆ ವಿಸಾ ಮುಕ್ತ ಪ್ರಯಾಣವನ್ನು ಅನುಮತಿಸುವ ಮತ್ತೊಂದು ರಾಷ್ಟçವಾಗಿದೆ. ನೇಪಾಳವು ಭವ್ಯವಾದ ಹಿಮಾಲಯ…
Author: AIN Admin
ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ರೈತರಿಗೆ ಉಚಿತ ಬೋರ್‌ವೆಲ್ ಕೊರೆಸಲು ಸಹಾಯಧನ ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅರ್ಜಿಯನ್ನು ಕರೆದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡುತ್ತಲಿದೆ. ಒಟ್ಟು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಸಣ್ಣ – ಅತಿ ಸಣ್ಣ ರೈತರಿಗೆ ಅನುಕೂಲ ಗಂಗಾ ಕಲ್ಯಾಣ ಯೋಜನೆಯಡಿ ಈಗ ಅರ್ಹ ಸಣ್ಣ ಹಾಗೂ ಅತಿ ಸಣ್ಣ ರೈತರು (ಅಂದರೆ 1.20 ಎಕರೆಯಿಂದ 5 ಎಕರೆ ವರೆಗೆ ಜಮೀನು ಹೊಂದಿರುವವರು) ಬೋರ್‌ವೆಲ್ ಕೊರೆಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ನೀರಾವರಿ ಸಮಸ್ಯೆ ಅಷ್ಟಾಗಿ ಭಾದಿಸದು. ಇದರಿಂದ ಉತ್ತಮ ಬೆಳೆ ಪಡೆಯಬಹುದಾಗಿದ್ದು, ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಅಡಿಯ ವಿವಿಧ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು…
ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇನ್ನು ಹಾಲಿನ ಉಪ ಉತ್ಪನ್ನಗಳಾಗಿರುವಂತಹ ಮೊಸರು, ಮಜ್ಜಿಗೆ, ತುಪ್ಪ ಬೆಣ್ಣೆ ಇತ್ಯಾದಿಗಳು ಕೂಡ ಆರೋಗ್ಯಕಾರಿ. ಆದ್ರೆ ಮನೆಯಲ್ಲಿ ಚಳಿಗಾಲದ ಸಮಯದಲ್ಲಿ ಸರಿಯಾಗಿ ಮೊಸರು ಸಹ ಆಗುವುದಿಲ್ಲ ಎಂದು ಹೆಂಗಸರು ಕಂಪ್ಲೇಂಟ್ ಹೇಳುತ್ತಾರೆ. ಇದು ನಿಜ ಕೂಡ. ಏಕೆಂದರೆ ಹಾಲು ಹೆಪ್ಪಿನ ಪ್ರಭಾವದಿಂದ ಮೊಸರಾಗಿ ಬದಲಾಗಲು ಅದಕ್ಕೆ ಸಹಕಾರಿಯಾದ ತಾಪಮಾನ ಹೊರಗೆ ಇರುವುದಿಲ್ಲ. ಹೀಗಾಗಿ ನೀವು ಹೆಪ್ಪು ಹಾಕಿ ಹಾಲನ್ನು ಎಷ್ಟೇ ಹೊತ್ತು ಹಾಗೆ ಇಟ್ಟರೂ ಕೂಡ ಅದು ಹಾಗೆ ಇರುತ್ತದೆ. ಚಳಿಗಾಲದಲ್ಲಿ ಮೊಸರನ್ನು ಸುಲಭವಾಗಿ ತಯಾರು ಮಾಡುವ ಕೆಲವು ಟಿಪ್ಸ್ ಗಳನ್ನು ನೀವು ತಿಳಿದುಕೊಳ್ಳಬೇಕು. ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿಸಲಾಗಿದೆ. ಬಿಸಿ ಹಾಲನ್ನು ಬಳಸಿ ಹಾಲಿಗೆ ಹೆಪ್ಪು ಹಾಕುವ ಮೊದಲು ಹಾಲನ್ನು ಸ್ವಲ್ಪ ಬಿಸಿ ಮಾಡಿ. ಬೇಸಿಗೆಯಲ್ಲಿ ಉಗುರು ಬೆಚ್ಚಗಿನ ಹಾಲು ಸಾಕಾಗುತ್ತದೆ. ಆದರೆ, ಚಳಿಗಾಲದಲ್ಲಿ ಸ್ವಲ್ಪ ಹೆಚ್ಚೇ ಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಆದರೆ, ತೀರಾ ಕುದಿಯುವ ಮಟ್ಟದ…
ಬೆಂಗಳೂರು: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಎಲ್ಪಿಜಿ ದರಗಳು ಕೂಡ ಸಾವಿರ ರೂ.ಗಳ ಗಡಿ ದಾಟಿದ್ದು ಜನರು ಕಂಗಾಲಾಗಿದ್ದಾರೆ. ಗ್ಯಾಸ್ ಸಿಲಿಂಡರ್‌ಗಳನ್ನು ಮಿತವಾಗಿ ಬಳಸುವ ಸಲುವಾಗಿ ಕೆಲವರು ಇಂಡಕ್ಷನ್ ಸ್ಟವ್ ಬಳಸುತ್ತಾರೆ. ಆದರೆ, ಇದರಿಂದ ವಿದ್ಯುತ್ ಬಿಲ್ ದರ ಹೆಚ್ಚಾಗುತ್ತದೆ. ಆದ್ದರಿಂದಲೇ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಉಚಿತ ‘ಸೋಲಾರ್ ಸ್ಟವ್’ ನೀಡಲು ಕೇಂದ್ರ ಮುಂದಾಗಿದೆ. ಸರ್ಕಾರವು ಉಚಿತ ಸೌರ ಚುಲ್ಹಾ ಯೋಜನೆಯನ್ನು ಸಹ ಪ್ರಾರಂಭಿಸಿದ್ದು, ಮಹಿಳೆಯರಿಗೆ ಉಚಿತವಾಗಿ ಸೌರ ಒಲೆಗಳನ್ನು ನೀಡಲಾಗುವುದು. ರೀಚಾರ್ಜ್ ಮಾಡಬಹುದಾದ ಸೌರ ಒಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಯಾರಿಸುತ್ತದೆ . ಇಲ್ಲಿಯವರೆಗೆ, ಈ ಕಂಪನಿಯು ಸಿಂಗಲ್ ಬರ್ನರ್, ಡಬಲ್ ಬರ್ನರ್ ಕುಕ್ ಟಾಪ್ ಮತ್ತು ಡಬಲ್ ಬರ್ನರ್ ಹೈಬ್ರಿಡ್ ಕುಕ್ ಟಾಪ್ ಸೇರಿದಂತೆ ಮೂರು ರೀತಿಯ ಸೌರ ಒಲೆಗಳನ್ನು ತಯಾರಿಸಿದೆ. ಮಹಿಳೆಯರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಈ ಉಚಿತ ಸೌರ ಒಲೆ ಯೋಜನೆಯನ್ನು ಪ್ರಾರಂಭಿಸಿದೆ. ಅದಾಖಲೆ ಸಲ್ಲಿಸಲು…
ಸೂರ್ಯೋದಯ: 06:34, ಸೂರ್ಯಾಸ್ತ : 05:36 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ಅಮಾವಾಸ್ಯೆ ನಕ್ಷತ್ರ:ಅನುರಾಧ ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಬೆ.11:43 ನಿಂದ ಮ.12:27 ತನಕ ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು. ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ,ವಾಸ್ತು ಶಾಸ್ತ್ರ,ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M. 9353488403 ಮೇಷ ರಾಶಿ: ಸಂಬಂಧದಲ್ಲಿ ವಿವಾಹ ಕೂಡಿ ಬರಲಿದೆ, ಭೂ ವಿವಾಹದ ಸಮಸ್ಯೆಯಿಂದ ಬೇಸತ್ತು, ಮಾರಾಟದ ಚಿಂತನೆ, ತೋಟಗಾರಿಕೆ- ಕಲೆ- ಪೈಂಟಿಂಗ್- ಸಂಗೀತ ವಾದ್ಯಗಳು ನುಡಿಸುವವರಿಗೆ -ಕಲಾವಿದರಿಗೆ ಒಳ್ಳೆ ಹೆಸರು ಸಂಭಾವನೆ…
ಬೆಂಗಳೂರು: ಅವರಿಬರು ಅಣ್ಣ ತಮ್ಮ ಇಬ್ರು..ಅಕ್ಕ ತಂಗಿಯರನ್ನೇ ಮಧುವೆ ಹಾಗಿದ್ರು ..ಅಕ್ಕ ತಂಗಿ ಒಂದೇ ಮನೆಯಲ್ಲಿದ್ರೆ ಯಾವುದೇ ಜಗಳ,ಗಲಾಟೆ ಆಗಲ್ಲ ಅಂತಾನೆ ಅಂದುಕೊಂಡಿದ್ರು..ಆದ್ರೆ ಮನೆಗೆ ಬರ್ತಿದ್ದ ಗಂಡನ ಸ್ನೇಹಿತನ ಜೊತೆಗೆ ಪತ್ನಿ ಹಾಗೂ ನಾದಿನಿಗೆ ಸಲುಗೆ ಹೆಚ್ಚಾಗಿಬಿಟ್ಟಿತ್ತು..ಅದೇ ಸಲುಗೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ..ಇದರ ಕಂಪ್ಲೀಟ್ ಡೀಟೇಲ್ಸ್ ತೋರಿಸ್ತೀವಿ ನೋಡಿ.. ಅಭಿಷೇಕ್ ,ಅವಿನಾಶ್ ಕುಟುಂಬದ ಮಧ್ಯೆ ಕಾರ್ತಿಕ್ ಎಂಬಾತ ಎಂಟ್ರಿ ಕೊಟ್ಟಿದ್ದ. ಅಕ್ಕ ತಂಗಿಯಾದ ನಿಖಿತಾ ಮತ್ತು ನಿಶ್ಚಿತ ಜೊತೆಗೆ ಸ್ನೇಹ ಬೆಳೆಸಿ ಸಂಬಂಧ ಮಾಡಿದ್ನಂತೆ.ಇದೇ ವಿಚಾರಕ್ಕೆ ಅಭಿಷೇಕ್ ಹಾಗೂ ನಿಖಿತಾ ನಡುವೆ ಗಲಾಟೆ ನಡೆದು ದೂರವಾಗಿದ್ರು.ಇತ್ತ ಅವಿನಾಶ್ ಕೂಡ ತನ್ನ ಪತ್ನಿ ಜೊತೆಗೆ ಕಾರ್ತಿಕ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಇಷ್ಟೆ ಅಲ್ಲದೆ ಕಾರ್ತಿಕ್ ಮತ್ತು ಅವಿನಾಶ್ ನಡುವೆ ಹಣಕಾಸಿನ ವ್ಯವಹಾರ ಕೂಡ ನಡೆದಿತ್ತಂತೆ. ಕಾರ್ತಿಕ್ ಅವಿನಾಶ್ ಗೆ 50 ಸಾವಿರ ಹಣ ನೀಡಿದ್ದ.. https://ainlivenews.com/new-rules-to-be-implemented-from-december-1st-cutting-into-the-pockets-of-the-common-man/ ಈ ಮಧ್ಯೆ ನವಂಬರ್ 27 ರಂದು ಅಭಿಶೇಕ್ ಹಣ ಕೊಡ್ತೀನಿ ಅಂತಾ ಕಾರ್ತಿಕ್ ನನ್ನ ಬ್ಯಾಡರಹಳ್ಳಿ…
ಬೆಂಗಳೂರು: ಬಸವಣ್ಣನವರ ಹೆಸರನ್ನು ಯತ್ನಾಳ್ ದ್ವೇಷ ಭಾಷಣಕ್ಕೆ ಬಳಸಿದ್ದು ಘೋರ ಅಪರಾಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಯತ್ನಾಳ್ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರು, ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಯವರ ನಾಲಿಗೆಗಳು ಈಗ ಸಮಾಜ ಸುಧಾರಣೆಗೆ ಜೀವ ಸವೆಸಿದ ಮಹನೀಯರ ಬುಡಕ್ಕೂ ಚಾಚುವಷ್ಟು ಉದ್ದವಾಗಿವೆ. ಬಸವಣ್ಣನವರ ಹಾಗೆ ಹೊಳೆ ಹಾರಬೇಕು ಎನ್ನುವ ಮೂಲಕ ಬಸವಣ್ಣನವರನ್ನು ಪಲಾಯನವಾದಿ ಎಂಬರ್ಥದಲ್ಲಿ ಮಾತನಾಡಿದ ಯತ್ನಾಳ್ ಅವರನ್ನು ಈ ನಾಡಿನ ಪ್ರಜ್ಞಾವಂತ ಬಸವಾನುಯಾಯಿಗಳು ಗಟ್ಟಿ ಧ್ವನಿಯಲ್ಲಿ ಖಂಡಿಸಬೇಕಿದೆ. ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ ಎಂದಿದ್ದ ಬಸವಣ್ಣನವರ ಹೆಸರನ್ನು ಯತ್ನಾಳ್ ಅವರು ತಮ್ಮ ದ್ವೇಷ ಭಾಷಣಕ್ಕೆ ಬಳಸಿದ್ದು ಮತ್ತೊಂದು ಘೋರ ಅಪರಾಧ ಎಂದು ಖರ್ಗೆ ಹೇಳಿದ್ದಾರೆ. https://ainlivenews.com/does-bathing-in-hot-water-in-winter-reduce-sperm-count/ ಬಸವಣ್ಣನವರು ಹೊಳೆ ಹಾರಿಲ್ಲ, ಈ ಸಮಾಜಕ್ಕೆ ಜ್ಞಾನದ ಹೊಳೆ ಹರಿಸಿದ್ದಾರೆ, ಯತ್ನಾಳ್ ಅವರೇ, ನಿಮ್ಮ ಪ್ರಕಾರ ಬಸವಣ್ಣನವರು ಹೊಳೆ ಹಾರಿದ್ದಾರೆ ಎನ್ನುವುದಾದರೆ ಅವರನ್ನು ಹೊಳೆಗೆ ಹಾರುವಂತೆ ಮಾಡಿದವರು ಯಾರು? ಇಂದು ಯತ್ನಾಳ್…
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗೋದಕ್ಕೆ ಆಸೆ ಇದೆ ಅಂತ ಕೆಲವರು ಹೇಳಿದ್ದಾರೆ. ಆಗಬೇಕು ಕೊಡಿ ಅಂತ ಕೇಳಿಲ್ಲ. ಅಧ್ಯಕ್ಷ ಸ್ಥಾನ ವಿಚಾರ ಕೂಡ ಹೈಕಮಾಂಡ್ ಡಿಸೈಡ್ ಮಾಡುತ್ತದೆ. https://ainlivenews.com/does-bathing-in-hot-water-in-winter-reduce-sperm-count/ ಅದರ ಬಗ್ಗೆ ನಾವು ಚರ್ಚೆ ಮಾಡೋದು ಸರಿಯಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರಾಗೋದು ಹಲವು ಸಮಸ್ಯೆಗಳು ಬರುತ್ತೆ. ನಾಯಕರು ಇರುತ್ತಾರೆ ಕಾರ್ಯಕರ್ತರು ಇರ್ತಾರೆ . ಎಲ್ಲರನ್ನೂ ಜೊತೆಗೂಡಿಸಿ ಕರೆದುಕೊಂಡು ಹೋಗಬೇಕು, ಕೆಲಸ ಮಾಡಬೇಕು. ಮಂತ್ರಿ ಆದ್ರೆ ಅಧಿಕಾರ ಇರುತ್ತೆ ಅಧ್ಯಕ್ಷ ಆದಾಗ ಬೇರೆ ವಿಶೇಷವಾದ ಅಧಿಕಾರ ಇಲ್ಲ. ಅಧ್ಯಕ್ಷ ಅಂತ ಅಂದ್ರೆ ಕೆಲಸ ಜಾಸ್ತಿ ಇರುತ್ತೆ ಅಧಿಕಾರ ಇರಲ್ಲ ಎಂದರು.
ಬೆಂಗಳೂರು: ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಗುರಪ್ಪನಾಯ್ಡು ಲೈಂಗಿಕ ಕಿರುಕುಳ ಕರ್ಮಕಾಂಡವನ್ನು ಮಾಧ್ಯಮಗಳು ಬಯಲು ಮಾಡಿತ್ತು,ವರದಿಯ ಬೆನ್ನಲ್ಲೇ ಗುರಪ್ಪ ನಾಯ್ಡುನನ್ನು ಕಾಂಗ್ರೆಸ್ನಿಂದ ಉಚ್ಛಾಟನೆ ಮಾಡಲಾಗಿದೆ. https://ainlivenews.com/does-bathing-in-hot-water-in-winter-reduce-sperm-count/ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ಶಿಸ್ತು ಕ್ರಮ ಸಮಿತಿ ಅಧ್ಯಕ್ಷ ಕೆ ರೆಹಮಾನ್ ಖಾನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ನಾಯ್ಡು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಗುರಪ್ಪನಾಯ್ಡು ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿರುವುದೇ ಈ ಕ್ರಮಕ್ಕೆ ಕಾರಣ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಎಂಬುದು ವಿಶೇಷ. ಅಂದರೆ ಈ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಡಲಾಗುತ್ತದೆ. ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ಎದುರಾಗಿದೆ. ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ನೋವಿನ ಸಮಸ್ಯೆಯ ಕಾರಣ ಅಡಿಲೇಡ್ ಟೆಸ್ಟ್ನಂದ ಹೊರಗುಳಿದಿದ್ದಾರೆ. ಹೀಗಾಗಿ ಪಿಂಕ್ ಬಾಲ್ ಟೆಸ್ಟ್ನಲ್ಲಿ ಹ್ಯಾಝಲ್ವುಡ್ ಕಾಣಿಸಿಕೊಳ್ಳುವುದಿಲ್ಲ. https://ainlivenews.com/if-you-do-these-things-on-saturday-you-are-guaranteed-to-get-shani-dosha/ ಜೋಶ್ ಹ್ಯಾಝಲ್ವುಡ್ ಅವರ ಪೆಕ್ಕೆಲುಬಿನ ಭಾಗದಲ್ಲಿ ನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ವೈದ್ಯರು ಅವರಿಗೆ ವಿಶ್ರಾಂತಿ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಪಿಂಕ್ ಬಾಲ್ ಟೆಸ್ಟ್ನಿಂದ ಹೊರಗುಳಿಯಲು ಹ್ಯಾಝಲ್ವುಡ್ ನಿರ್ಧರಿಸಿದ್ದಾರೆ. ಇನ್ನು ಜೋಶ್ ಹ್ಯಾಝಲ್ವುಡ್ ಹೊರಗುಳಿದಿರುವ ಕಾರಣ ಬದಲಿಯಾಗಿ ಶಾನ್ ಅಬಾಟ್ ಹಾಗೂ ಬ್ರೆಂಡನ್ ಡಾಗೆಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದಾಗ್ಯೂ ಇವರಿಬ್ಬರಿಗೂ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್…