ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ವಾದ, ಪ್ರತಿವಾದದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಯ್ತು. ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು ದರ್ಶನ್ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲವ ಎಂದು ವಾದ ಮಂಡಿಸಿದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಇದೇ ವೇಳೆ ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್ಪಿಪಿ ಆಕ್ಷೇಪಣೆ ಸಲ್ಲಿಸಿದರು. 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ, ಆದರೆ ಸರ್ಜರಿಯ ದಿನಾಂಕ ತಿಳಿಸಿಲ್ಲವೆಂದು ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್ಗೆ ಸಲ್ಲಿಕೆ ಮಾಡಿದರು. https://ainlivenews.com/do-you-know-how-many-health-benefits-of-eucalyptus-leaves-2/ ಅದೇ…
Author: AIN Admin
ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳೂರಿನ ಶರಾವತಿ ಬಾರ್ ಸಮೀಪ ನಡೆದಿದೆ. ಮದುರೈ ಮೂಲದ ಅಲಗರಾಜ್(31) ಕೊಲೆಯಾದ ವ್ಯಕ್ತಿಯಾಗಿದ್ದು, ಅರೆನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನ್ನು ಘಟನಾ ಸ್ಥಳದಲ್ಲಿ TVS ಎಕ್ಸೆಲ್ ಬೈಕ್, ಹಾಗೂ ತುಪ್ಪದ ಟಿನ್ ಪತ್ತೆಯಾಗಿದ್ದು, https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಶವ ಬಿದ್ದಿರುವುದನ್ನು ಬಾಟಲ್, ಚಿಂದಿ ಆಯುವವರು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು, ಶ್ವಾನದಳ, ಎಫ್ಎಸ್ಎಲ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಳೇ ವೈಷಮ್ಯದ ಹಿನ್ನೆಲೆ ತಲೆಗೆ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದೊಡ್ಡಬಳ್ಳಾಪುರ: ವರದಕ್ಷಿಣೆ ಕಿರುಕುಳಕ್ಕೆ 6 ತಿಂಗಳ ತುಂಬು ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ನಡೆದಿದೆ. ರೂಪ (29) ಮೃತ ದುರ್ದೈವಿಯಾಗಿದ್ದು, ಎರಡು ವರ್ಷಗಳ ಹಿಂದೆ ಪ್ರೀತಿಸಿ ಸುರೇಶ್ ನೊಂದಿಗೆ ಮದುವೆಯಾಗಿದ್ದಳು. ಸುರೇಶ್ ಸಾಸಲು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದನು. ಸುರೇಶ್ ಕುಟುಂಬಸ್ಥರು ಮದುವೆಗೆ ಲಕ್ಷಾಂತರ ಹಣ ಖರ್ಚು ಮಾಡಿದ್ದೇವೆ ಆ ಹಣವನ್ನು ತೆಗೆದುಕೊಂಡು ಬಾ ಎಂದು ಕಿರುಕುಳ ಕಿರಿಕುಳ ನೀಡುತ್ತಿದ್ದರು. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಕಿರುಕುಳಕ್ಕೆ ಬೇಸತ್ತ ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಲ್ಲದೇ ಸಾವಿಗೂ ಮುನ್ನ ರೂಪಾ ಡೆತ್ ನೋಟ್ ಬರೆದಿಟ್ಟು, ಅದರಲ್ಲಿ ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ ಅತ್ತೆ ದೇವಮ್ಮ ಕಾರಣ ಎಂದು ಬರೆದಿದ್ದಾರೆ. ಸದ್ಯ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿ ಸುರೇಶ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ತಲೆಮರಿಸಿಕೊಂಡಿರುವ ಸುರೇಶ್ ತಂದೆ ತಾಯಿಗಾಗಿ ಶೋಧ ನಡೆಸುತ್ತಿದ್ದಾರೆ.
ತಮಿಳುನಾಡು: ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ತರಗತಿಗೆ ನುಗ್ಗಿ ಮಕ್ಕಳ ಎದುರೇ ಶಿಕ್ಷಕಿಯ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ರಮಣಿ (26) ಕೊಲೆಯಾದ ಶಿಕ್ಷಕಿಯಾಗಿದ್ದು, ಹತ್ಯೆಗೈದ ಆರೋಪಿಯನ್ನು ಮದನ್ (30) ಎಂದು ಗುರುತಿಸಲಾಗಿದೆ. ಆತ ರಮಣಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ರಮಣಿಯವರು ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಮಣಿ ಹಾಗೂ ಮದನ್ ಕುಟುಂಬ ಭೇಟಿಯಾಗಿ ಮದುವೆಯ ವಿಚಾರ ಚರ್ಚಿಸಿದ್ದರು. ಈ ವೇಳೆ ಮದುವೆ ಪ್ರಸ್ತಾಪವನ್ನು ರಮಣಿಯವರು ತಿರಸ್ಕರಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮಿಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಶಾಲೆಯ ಭೇಟಿಗೆ ತೆರಳಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಆಕ್ರಮಣಕಾರಿ ಟೆನಿಸ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಸ್ಪೇನ್ ಚಾಂಪಿಯನ್ ಆಟಗಾರ ಹಾಗೂ ಕಿಂಗ್ ಆಫ್ ಕ್ಲೇ ಖ್ಯಾತಿಯ ರಾಫೆಲ್ ನಡಾಲ್ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಕಿಂಗ್ ಆಫ್ ಕ್ಲೇ ಎಂದೇ ಪ್ರಸಿದ್ಧಿಯಾಗಿರುವ ರಫೆಲ್ ನಡಾಲ್ ನ.19 ರಂದು ನಡೆದ ನೆದರ್ಲ್ಯಾಂಡ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದರು. ನಿವೃತ್ತಿ ಘೋಷಿಸಿದ ಬಳಿಕ ಸ್ಪ್ಯಾನಿಷ್ ರಾಷ್ಟ್ರಗೀತೆಯ ಸಂದರ್ಭದಲ್ಲಿ ರಫೆಲ್ ಭಾವುಕರಾದರು. ಇನ್ನೂ 10,000ಕ್ಕೂ ಹೆಚ್ಚು ಅಭಿಮಾನಿಗಳು “ರಾಫಾ, ರಾಫಾ” ಎಂದು ಕೂಗಿ ಹುರಿದುಂಬಿಸಿದರು. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಈ ಕುರಿತು ರಫೆಲ್ ಮಾತನಾಡಿ, ಇಂದು ನನ್ನ ಭಾವನಾತ್ಮಕ ದಿನ, ವೃತ್ತಿಪರನಾಗಿ ಇಂದು ನನ್ನ ಕೊನೆಯ ಪಂದ್ಯ. ಕೊನೆಯ ಬಾರಿ ಈ ರೀತಿಯಾಗಿ ರಾಷ್ಟ್ರಗೀತೆಯನ್ನು ಕೇಳುವುದು ಒಂದು ವಿಶೇಷ ಭಾವನೆ ಎಂದು ತಿಳಿಸಿದರು. 2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 29 ಪಂದ್ಯಗಳನ್ನು…
vvvvvvccc
ಬೆಂಗಳೂರು: ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸದಾಗಿ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಸಚಿವರು ಹೇಳುತ್ತಾರೆ. ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅರ್ಜಿ ಕೊಟ್ಟಿದ್ದೀರಾ? ನೋಟಿಸ್ ಕೊಟ್ಟಿದ್ದೀರಾ? ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಅಶೋಕ್ ಕಿಡಿಕಾರಿದರು. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಅಲ್ಲದೆ, ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಂದ ಲಂಚ ಪಡೆಯಲು ಇದು ಪಿತೂರಿ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಮಾಡಲಾಗಿದೆ ಎಂದು ಸಿಎಂ ಹೇಳುತ್ತಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 250 ಸರ್ಕಾರಿ ನೌಕರರ ಬಳಿ ಕಾರ್ಡ್ ಇತ್ತು ಎಂದರೂ ಅದ್ಹೇಗೆ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಎಂದು ಅಶೋಕ್ ಪ್ರಶ್ನಿಸಿದರು.
ffffff
ಬೆಂಗಳೂರು: ಅನ್ನಭಾಗ್ಯದ ಬದಲು ಹಸೀನಾ ಭಾಗ್ಯವನ್ನು ಜಾರಿಗೊಳಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಅನ್ನ ಕಸಿದುಕೊಂಡು ರಾಜ್ಯವನ್ನು ನರಕ ಮಾಡಹೊರಟಿದೆ. ತಿಂಗಳಿಗೆ ಎರಡು ಮೂರು ಸಾವಿರ ರೂಪಾಯಿ ಕೂಡ ಸಂಪಾದಿಸಿದ ರಾಜ್ಯದ ಕಟ್ಟಕಡೆಯ ಬಡವರ ರೇಷನ್ ಕಾರ್ಡನ್ನು ಸರ್ಕಾರ ಕಿತ್ತುಕೊಂಡಿದೆ, ಪಡಿತರ ಚೀಟಿಗಾಗಿ ಕೆಲವರು ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಸಿಕ್ಕಿಲ್ಲ, https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಈಗ ಕಾರ್ಡ್ ರದ್ದಾದವರು ಸಹ ಹೊಸ ಕಾರ್ಡ್ ಪಡೆಯಲು 3 ವರ್ಷಗಳ ಅಲೆದಾಡಬೇಕು, ಅನ್ನಭಾಗ್ಯದ ಬದಲು ಹಸೀನಾ ಭಾಗ್ಯವನ್ನು ಜಾರಿಗೊಳಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇನ್ನೂ ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಅನ್ನ ಕೊಡುತ್ತಿದೆ. ಬೇರೆ ರಾಜ್ಯದಲ್ಲಿ ಎಲ್ಲಿ ರೇಷನ್ ಕಾರ್ಡ್ ರದ್ದಾಗಿದೆ? ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ರದ್ದಾಗಿದೆ?…
ಬಳ್ಲಾರಿ: ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಶಾಲಾ, ಕಾಲೇಜು ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಬಂದ ಘಟನೆ ಗುರುವಾರ ನಡೆದಿದೆ. ಹಲವು ದಿನಗಳಿಂದ ಬೆಣಕಲ್ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಸ್ ಇರದ ಕಾರಣ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಲು ಸಮಸ್ಯೆ ಆಗಿದೆ. ಇದರಿಂದ ಶೈಕ್ಷಣಿಕವಾಗಿ ಪೆಟ್ಟು ಬೀಳುತ್ತಿದೆ. https://ainlivenews.com/do-you-have-a-500-rupee-note-you-are-an-agbodu-millionaire-in-no-time/ ಸಾಕಷ್ಟು ವಿದ್ಯಾರ್ಥಿಗಳು ಬಸ್ ಸಮಸ್ಯೆಯಿಂದ ಕಾಲೇಜು ತೊರೆಯುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾರಿಗೆ ಘಟಕದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿ ಸಾಕಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸದ ಕಾರಣ ಬೇಸತ್ತು ಶಾಲಾ ಕಾಲೇಜು ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇವೆ ಎಂದು ಅಲವತ್ತುಕೊಂಡರು. ಮನವಿ ಆಲಿಸಿದ ಎಡಿಸಿ ಮಹ್ಮದ್ ಜುಬೇರ್ ಸಾರಿಗೆ ಇಲಾಖೆಯ ಜಿಲ್ಲಾಧಿಕಾರಿಗೆ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ವಿದ್ಯಾರ್ಥಿಗಳಾದ ಅಶ್ವಿನಿ, ತ್ರೀವೇಣಿ, ರವಿ ತೇಜ, ತಿರುಮಲ, ಶಿವಕುಮಾರ್, ಸರ್ಪಲಿಂಗ್,…