ತುಮಕೂರು ಡಿ 2: ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇವೆ. ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದರು. ಆದಷ್ಟು ಶೀರ್ಘದಲ್ಲಿ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಿ ಎಂದು ತಿಳಿಸಿದರು. ಮೈಸೂರಿನಲ್ಲೂ ಜಾಗ ಕೊಡ್ತೀವಿ ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದೆ. ಮೈಸೂರಿನಲ್ಲೂ ಜಾಗ ಕೊಡುತ್ತೇವೆ ಎಂದರು. ಗೃಹ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ಜಿಲ್ಲೆಯ ಶಾಸಕರು, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ರಘುರಾಮ್…
Author: AIN Admin
ಉಡುಪಿ: ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು ಎಂದು ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂಬ ಊಹೋಪೋಹಗಳಿಗೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಫುಲ್ ಸ್ಟಾಪ್ ಇಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಸಂತರು ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖ ಇಲ್ಲ. ಆಡದೇ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. https://ainlivenews.com/do-you-need-a-free-borewell-for-your-agricultural-land-if-so-apply-like-this/ ಸುಳ್ಳು ಆರೋಪ ಹೊರಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮನ್ನು ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ಆಗಿದೆ. ನಿರಾಧಾರ ಆರೋಪ ಯುಕ್ತವಲ್ಲ. ಆ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಬಹುದು. ಸಿಎಂ ಸಿದ್ದರಾಮಯ್ಯ ಈ ಕುರಿತು ಪರಿಶೀಲಿಸಿ ಮಾತನಾಡಬೇಕಿತ್ತು ಎಂದು ಅವರು ಹೇಳಿದರು.
ಸ್ಯಾಂಡಲ್‌ವುಡ್‌ನ ಎರಡು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿವೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಸಿನಿಮಾ ರಿಲೀಸ್ ಡೇಟ್ ಮಾಡಿದೆ. ಇದೀಗ ‘ಯುಐ’ ವಾರ್ನರ್ (ಟ್ರೈಲರ್) ರಿಲೀಸ್ ಆಗಿದೆ. ಉಪೇಂದ್ರ ಸಿನಿಮಾಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಉಪ್ಪಿ ಟ್ರೈಲರ್‌ನಲ್ಲಿ ಡಿಫರೆಂಟ್ ಗೆಟಪ್ ಮತ್ತು ಕಾನ್ಸೆಪ್ಟ್‌ನಲ್ಲಿ ಮಿಂಚಿದ್ದಾರೆ. https://ainlivenews.com/do-you-need-a-free-borewell-for-your-agricultural-land-if-so-apply-like-this/ AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ…
ಪುಷ್ಪ-2 ಇನ್ನೇನು ಮೂರು ದಿನದಲ್ಲಿ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಕೂಡ ಕುತೂಹಲದಿಂದ ಇದ್ದಾರೆ. ಸಿನಿಮಾ ರಿಲೀಸ್ಗೂ ಮೊದಲು ದೊಡ್ಡ ಮೊತ್ತದಲ್ಲಿ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಿಂದಿ ಸಿನಿಮಾ ಯಾಕೆ ಮಾಡಲಿಲ್ಲ ಎಂಬುದಕ್ಕೆ ಕಾರಣ ಬಿಚಿಟ್ಟಿದ್ದಾರೆ. ಹಿಂದಿ ಸಿನಿಮಾ ಮಾಡುವುದು ಒಂದು ದೊಡ್ಡ ವಿಚಾರ. ನಾವು ನಮ್ಮ ಇಡೀ ಬದುಕಿನಲ್ಲಿ ಅಬ್ಬಬ್ಬಾ ಎಂದರೆ ಒಂದು ಅಥವಾ ಎರಡು ಹಿಂದಿ ಸಿನಿಮಾಗಳನ್ನು ಮಾಡಬಹುದು. https://ainlivenews.com/do-you-need-a-free-borewell-for-your-agricultural-land-if-so-apply-like-this/ ನನಗೆ ಹಿಂದಿ ಸಿನಿಮಾ ಮಾಡುವುದು ಎಂದರೆ ತುಂಬಾನೇ ದೂರದ ವಿಷಯ ಎನಿಸುತ್ತದೆ. ಆ ಒಂದು ಮನಸ್ಥಿತಿಯಲ್ಲಿ ನಾನು ಇಲ್ಲ. ಸದ್ಯ ನಾನು ‘ಪುಷ್ಪ’ ನಟನೆಗೆ ನ್ಯಾಷನಲ್ ಅವಾರ್ಡ್ ಅನ್ನು ಗೆದ್ದಿದ್ದೇನೆ. ಅದೇ ಸಿನಿಮಾಗೆ ಸೂಪರ್ ಹಿಟ್ ಆಲ್ಬಂ ಅನ್ನು ಕೂಡ ಕೊಟ್ಟಿದ್ದೇವೆ. ಇಂತಹ ವಿಷಯಗಳು ನಮಗೆ ವಿಶೇಷ ಎನಿಸುತ್ತವೆ. ಹಿಂದಿ ಸಿನಿಮಾದಲ್ಲಿ ನಟನೆ ಮಾಡಲು ನನಗೆ ಅಷ್ಟು ಆಸಕ್ತಿ ಇಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಇನ್ನು ಪುಷ್ಪ-2 ಬಿಡುಗಡೆಯಾದ ಮೇಲೆ…
ಕರ್ನಾಟಕದಲ್ಲಿ ಹೂಡಿಕೆಗೆ ವಿಫುಲವಾದ ಅವಕಾಶಗಳಿದ್ದು, ಹೂಡಿಕೆ ಮಾಡಲು ಮುಂದೆ ಬರುವ ಕಂಪನಿಗಳಿಗೆ ಎಲ್ಲಾ ನೆರವನ್ನು ನಮ್ಮ ಕರ್ನಾಟಕ ಸರ್ಕಾರದಿಂದ ನೀಡಲಾಗುವುದು ಎಂದು ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು. ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ನಡೆದ ಇಂಡೋ -ಯುರೋಪಿಯನ್ ಹೂಡಿಕೆ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಸಂತೋಷ್ ಲಾಡ್ ಅವರು ಮಾತನಾಡಿದರು. ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮತ್ತು ಉದ್ಯಮ ವಿಸ್ತರಣೆ ಮಾಡಲು ಸಾಕಷ್ಟು ವಿಫುಲ ಅವಕಾಶಗಳಿವೆ. ಎಲ್ಲಾ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಹೂಡಿಕೆದಾರರಿಗೆ ನೆರವು ಒದಗಿಸಲಿದೆ. ಕೃಷಿ, ಉದ್ದಿಮೆ ಹೀಗೆ ಹಲವು ರಂಗದಲ್ಲಿ ಹೂಡಿಕೆ ಮಾಡಬಹುದು. ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಕರ್ನಾಟಕದ ಜಿಡಿಪಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. https://ainlivenews.com/do-you-need-a-free-borewell-for-your-agricultural-land-if-so-apply-like-this/ ನಮ್ಮ ಕರ್ನಾಟಕವು ಕೇವಲ ಐಟಿ ಮಾತ್ರವಲ್ಲದೆ ಜೈವಿಕ ತಂತ್ರಜ್ಞಾನ (ಬಿಟಿ) ದಲ್ಲೂ ದೊಡ್ಡ ಹೆಸರು ಪಡೆದಿದೆ. ಪಶುಸಂಗೋಪನೆ, ರೇಷ್ಮೆಯಂತಹ ಚಟುವಟಿಕೆಗಳ ವಿಸ್ತರಣೆಗೆ ಅತ್ಯುತ್ತಮ ಅವಕಾಶಗಳಿವೆ.…
ಐಸಿಸಿ ಅಧ್ಯಕ್ಷರಾಗಿ ಅಧಿಕಾರಾವಧಿ ಜಯ್ ಶಾ ಆರಂಭಿಸಿದ್ದಾರೆ. ಇದರೊಂದಿಗೆ ಐಸಿಸಿ ಗದ್ದಿಗೆ ಏರಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೂ ಜಯ್ ಶಾ ಪಾತ್ರರಾಗಿದ್ದಾರೆ. 2024ರ ಆಗಸ್ಟ್ 27ರಂದು ಜಯ್ ಶಾ ಐಸಿಸಿ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2020ರಿಂದ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಯನ್ನು ಬಯಸದಿರಲು ನಿರ್ಧರಿಸಿದ ನಂತರ ಜಯ್ ಶಾ ಆ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದರು. ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಸುತ್ತಲಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಮತ್ತು ಕ್ರಿಕೆಟ್ ಅನ್ನು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಒಲಿಂಪಿಕ್ ಕ್ರೀಡೆಯನ್ನಾಗಿಸುವ ಮಹತ್ವದ ಜವಾಬ್ದಾರಿ ಆಡಳಿತಾಧಿಕಾರಿ ಜಯ್ ಶಾ ಅವರ ಮುಂದಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಭಾಷಣ ಮಾಡಿದ ಜಯ್ ಶಾ, ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ, ಮಹಿಳಾ ಕ್ರಿಕೆಟ್ ಆಟದಲ್ಲಿ ಮತ್ತಷ್ಟು ಬೆಳವಣಿಗೆ ತರಬೇಕೆಂಬ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು. https://ainlivenews.com/do-you-need-a-free-borewell-for-your-agricultural-land-if-so-apply-like-this/ ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆ. ಐಸಿಸಿ ನಿರ್ದೇಶಕರು ಹಾಗೂ ಸದ್ಯರ ಬೆಂಬಲ ಮತ್ತು ಅಪಾರವಾದ…
ಫುಟ್ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ ನಡುವೆ ಶುರುವಾಗ ಘರ್ಷಣೆಗೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಗಿನಿಯಾದ 2ನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. 2021ರ ದಂಗೆಯ ನಂತರ ಅಧಿಕಾರ ವಹಿಸಿಕೊಂಡು ತನ್ನನ್ನು ತಾನು ಅಧ್ಯಕ್ಷ ಎಂದು ಘೋಷಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ರೆಫ್ರಿ ನೀಡಿದ ವಿವಾದಿತ ತೀರ್ಪು ಅಭಿಮಾನಿಗಳ ಘರ್ಷಣೆಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ತಿಳಿದುಬಂದಿದೆ.ಘಟನೆ ನಂತರ ಇಲ್ಲಿನ ಸ್ಥಳೀಯ ಆಸ್ಪತ್ರೆ ಮುಂಭಾಗ ಹೆಣಗಳ ರಾತ್ರಿಯೇ ಇತ್ತು, ಕೆಲವರ ದೇಹಗಳನ್ನ ಆಸ್ಪತ್ರೆಯ ವರಾಂಡದಲ್ಲಿ ಇಡಲಾಗಿತ್ತು. https://ainlivenews.com/do-you-need-a-free-borewell-for-your-agricultural-land-if-so-apply-like-this/ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ ಎನ್ನಲಾಗಿದೆ. ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ರೆಫ್ರಿ ತೀರ್ಪಿನಿಂದ ರೊಚ್ಚಿಗೆದ್ದು ಘರ್ಷಣೆಗೆ ಇಳಿದಿದ್ದರು. ಇದು ದೊಡ್ಡ ದಂಗೆಯಾಗಿ ಮಾರ್ಪಟ್ಟಿತು. ಈ ವೇಳೆ ಸಮೀದಲ್ಲಿದ್ದ ಪೊಲೀಸ್ ಠಾಣೆಯನ್ನೂ ಧ್ವಂಸಗೊಳಿಸಿದ್ದಾರೆ ಎಂದು ಹೇಳಿರುವುದಾಗಿ…
ವಾಷಿಂಗ್ ಟನ್: ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ನೇಮಕವನ್ನು ಆರಂಭಿಸಿದ್ದಾರೆ. ಹೊಸ ಆಡಳಿತಕ್ಕೆ ಅಮೇರಿಕಾ ಸಜ್ಜುಗೊಳ್ಳುತ್ತಿದ್ದು, ಭಾರತ ಮೂಲದ ಕಶ್ಯಪ್ ʻಕಶ್ʼ ಪಟೇಲ್ ಅವರನ್ನ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಈ ಮೂಲಕ ಟ್ರಂಪ್ ಸಂಪುಟಕ್ಕೆ ಆಯ್ಕೆಯಾದ ಭಾರತೀಯ ಮೂಲದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಕಶ್ಯಪ್ ಅವರದ್ದಾಗಿದೆ. https://ainlivenews.com/do-you-need-a-free-borewell-for-your-agricultural-land-if-so-apply-like-this/ ಈ ಮಾಹಿತಿಯನ್ನು ಟ್ರಂಪ್ ತಮ್ಮ ಟ್ರೂಥ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಪ್ರಜೆ ಕಶ್, ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಎಫ್‌ಬಿಐಗೆ ಇನ್ನಷ್ಟು ಸಮಗ್ರತೆಯನ್ನು ತರಲಿದ್ದಾರೆ. ಕಶ್ ಪಟೇಲ್ ಅವರು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಪ್ರಕಟಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ. ಯಾರು ಈ ಕಶ್? ಕಾಶ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು…
ಸೂರ್ಯೋದಯ: 06:34, ಸೂರ್ಯಾಸ್ತ : 05:36 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಮಾರ್ಗಶಿರ ಮಾಸ, ತಿಥಿ:ಪಾಡ್ಯ ನಕ್ಷತ್ರ:ಜೇಷ್ಠ ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 01:30 ನಿಂದ 03:00 ತನಕ ಅಮೃತಕಾಲ:ಇಲ್ಲ ಅಭಿಜಿತ್ ಮುಹುರ್ತ: ಬೆ.11:43 ನಿಂದ ಮ.12:27 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಪತ್ರಿಕಾ ಮಾಧ್ಯಮದವರಿಗೆ ಖುಷಿ ಸಂದೇಶ,ಉದ್ಯಮದಾರರಿಗೆ ಕೂಲಿ ಕಾರ್ಮಿಕರ ಕೊರತೆ, ತಡೆಹಿಡಿದ ಸರಕಾರಿ ಕೆಲಸ ಕಾರ್ಯಗಳು ಸುಗಮ, ವ್ಯಾಪಾರ ವಹಿವಾಟಗಳಲ್ಲಿ ಮಿಶ್ರ ಫಲ, ನ್ಯಾಯಾಲಯ ತೀರ್ಪು ಪ್ರಗತಿ, ಮಂಗಳ ಕಾರ್ಯ ನಡೆಸುವ ಪ್ರಯತ್ನ ಯಶಸ್ಸು, ಪ್ರೇಮಿಗಳಿಗೆ ಮನಸ್ಸಿಗೆ ಅಘಾತ, ದಾಯಾದಿಗಳ ಕಲಹ, ಸಲ್ಲದ ಅಪವಾದ,ಮುಖ್ಯ…
ಬೇಸಿಗೆಯಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದೆಂದರೆ ಮೈಯನ್ನು ತಂಪಾಗಿಸುತ್ತದೆ. ಇದರಿಂದ ದೇಹಕ್ಕೆ ಉಲ್ಲಾಸವಾ ಗುತ್ತದೆ. ಆರ್ದ್ರತೆ ಮತ್ತು ಶಾಖದಿಂದ ಪರಿಹಾರವನ್ನು ಪಡೆಯುತ್ತಾರೆ. ಕೆಲವರಂತೂ ಬೇಸಿಗೆ ಇರಲಿ, ಮಳೆ ಇರಲಿ, ಚಳಿ ಇರಲಿ ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಅದರಲ್ಲೂ ಈಗ ಚಳಿಗಾಲ ಶುರುವಾಗುತ್ತಿರುವ ಹೊತ್ತಲ್ಲಿ, ಹೃದಯದ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಲೇಬೇಕು ಎಂಬುದು ಆರೋಗ್ಯ ತಜ್ಞರ ಕಟ್ಟುನಿಟ್ಟಿನ ಸಲಹೆ. ತಣ್ಣೀರ ಸ್ನಾನದಿಂದ ದೂರ ಇರಿ.. ನಮ್ಮಲ್ಲಿ ಅನೇಕರಿಗೆ ಸ್ನಾನಕ್ಕೆ ಬಿಸಿ ನೀರು ಬಳಕೆ ಮಾಡಿ ಅಭ್ಯಾಸ ಇರುವುದಿಲ್ಲ. ಮಳೆ, ಚಳಿ ಏನೇ ಇರಲಿ ತಣ್ಣೀರಿನಲ್ಲಿ ಸ್ನಾನ ಮಾಡಿದರೇ ಅದೇನೋ ಹಿತ..ಸಮಾಧಾನ ಎನ್ನುವವರು ಇದ್ದಾರೆ. ತಣ್ಣೀರ ಸ್ನಾನ ಉರಿಯೂತ ಕಡಿಮೆ ಮಾಡುತ್ತದೆ, ಒತ್ತಡ, ಆಯಾಸ ನಿವಾರಣೆ ಮಾಡುತ್ತದೆ ಎಂಬಿತ್ಯಾದಿ ಆರೋಗ್ಯ ಸಂಬಂಧಿ ಕಾರಣಕ್ಕೆ ತಣ್ಣೀರ ಸ್ನಾನ ರೂಢಿಸಿಕೊಂಡವರೂ ಅನೇಕರು ಇದ್ದಾರೆ. ಆದರೆ ಚಳಿಗಾಲದಲ್ಲಿ ಈ ತಣ್ಣೀರ ಸ್ನಾನ ಮಾರಣಾಂತಿಕವಾಗಬಹುದು. ಹೃದಯಕ್ಕೆ ಸಮಸ್ಯೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಹೃದಯದ ಕಾಯಿಲೆ ಇದ್ದರೆ ತಣ್ಣೀರಿನ…