ಕೇರಳ: ವಯನಾಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಮಾಡಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದು, ಚೊಚ್ಚಲ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಈವರೆಗೆ ನಡೆದ ಮತ ಎಣಿಕೆಯಲ್ಲಿ ಪ್ರಿಯಾಂಕಾ ಗಾಂಧಿ 68,000 ಮತಗಳನ್ನು ಗಳಿಸಿದ್ದಾರೆ. ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 20,000 ಮತಗಳು ಹಾಗೂ ಬಿಜೆಪಿಯ ನವ್ಯಾ ಹರಿದಾಸ್ 11,235 ಮತಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. https://ainlivenews.com/huge-subsidy-for-farmers-who-buy-tractors-under-pm-kisan-yojana-apply-today/ ಪ್ರಿಯಾಂಕಾ ಗಾಂಧಿ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ವಯನಾಡ್ ಉಪಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ 68,000 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
Author: AIN Admin
ವಿಜಯಪುರ: ಕುಡಿದ ನಶೆಯಲ್ಲಿ ತಡರಾತ್ರಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ. ಸಿಂದಗಿ ತಾ. ಮಲಘಾಣ ಗ್ರಾಮದ ನಿವಾಸಿ ಶರಣಪ್ಪ ಕಕ್ಕಳಮೇಲಿ (45) ಕೊಲೆಯಾದ ವ್ಯಕ್ತಿಯಾಗಿದ್ದು, https://ainlivenews.com/huge-subsidy-for-farmers-who-buy-tractors-under-pm-kisan-yojana-apply-today/ ತಡರಾತ್ರಿ ತಲೆ ಮೇಲೆ ಕಲ್ಲು ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕುಡಿದ ನಶೆಯಲ್ಲಿ ಹಂತಕರು ಕೊಲೆ ಮಾಡಿರುವ ಶಂಕೆಯಾಗಿದ್ದು, ಸ್ಥಳಕ್ಕೆ ಸಿಂದಗಿ ಪಿಎಸ್‌ಐ ಆರೀಪ್ ಮುಶಾಪುರಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ಮಾಡಲಾಗಿದ್ದು, ಇಂದುಫಲಿತಾಂಶ ಹೊರಬೀಳಲಿದೆ. ಭಾರತೀಯ ಜನತಾ ಪಕ್ಷನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಆದರೆ ಮಹಾ ವಿಕಾಸ್ ಅಘಾಡಿ ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಸ್ಥಾಪಕ ರಾಜ್ಠಾಕ್ರೆ ಪುತ್ರ ಅಮಿತ್ಗೆ ಹಿನ್ನಡೆಯಾಗಿದೆ. ಮಾಹಿಮ್ – ಮಹಾಯುತಿ ಅಭ್ಯರ್ಥಿ ಅಮಿತ್ ಠಾಕ್ರೆ ಅವರಿಗೆ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ 5447 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. https://ainlivenews.com/huge-subsidy-for-farmers-who-buy-tractors-under-pm-kisan-yojana-apply-today/ ಬಾರಮತಿ ಕ್ಷೇತ್ರ- ಮಹಾಯುತಿ ಅಭ್ಯರ್ಥಿ ಅಜಿತ್ ಪವಾರ್ಗೆ ಹಿನ್ನಡೆಯಾಗಿದೆ. ಮುಂಬೈನ ವರ್ಲಿ ಕ್ಷೇತ್ರ-ಶಿವಸೇನೆ ಅಭ್ಯರ್ಥಿ ಆದಿತ್ಯ ಠಾಕ್ರೆ ಮುನ್ನಡೆ ಸಾಧಿಸಿದ್ದಾರೆ. ಮುಂಬಾದೇವಿ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ಅಮಿತ್ ಪಟೇಲ್ ಮುನ್ನಡೆ ಸಾಧಿಸಿದ್ದಾರೆ. ಸಾಕೋಲಿ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ನಾನಾಪಟೋಲೆಗೆ ಹಿನ್ನಡೆಯಾಗಿದೆ.
ನಮ್ಮ ಮನೆಗಳಲ್ಲಿ ದಿನನಿತ್ಯ ಬಳಸುವ ಕೆಲವು ಆಹಾರ ಪದಾರ್ಥಗಳು ಬುದ್ಧಿಶಕ್ತಿಯನ್ನು ಬಲಪಡಿಸುತ್ತವೆ. ಅಂಥಹ ತರಕಾರಿಯಲ್ಲಿ ಬೂದುಗುಂಬಳಕ್ಕೆ ಅಗ್ರಸ್ಥಾನ. ತೂಕ ಇಳಿಸಿಕೊಳ್ಳಲು ವ್ಯಾಯಾಮದ ಜತೆಗೆ ನಾವು ತೆಗೆದುಕೊಳ್ಳುವ ಆಹಾರ, ಕುಡಿಯುವ ಪಾನೀಯವು ಪ್ರಮುಖ ಪಾತ್ರವಹಿಸುತ್ತವೆ. ಹಾಗೆಯೇ ನಿತ್ಯ ಬೆಳಗ್ಗೆ ಬೂದುಗುಂಬಳದ( Ash Gourd)ಜ್ಯೂಸ್ ಕುಡಿಯುವುದರಿಂದ ನೀವು ತೂಕವನ್ನು ಇಳಿಸಿಕೊಳ್ಳಬಹುದು. ಇದು ಬಾಡಿಯನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ದೂರ ಇದರಲ್ಲಿರುವ ನೈಸರ್ಗಿಕ ನೀರಿನಂಶ ಮತ್ತು ಖನಿಜದ ಸಾಂದ್ರತೆಯು ಹಲವು ರೀತಿಯಲ್ಲಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಕರುಳಿನ ಕ್ಯಾನ್ಸರ್ ಭೀತಿಯನ್ನು ತಡೆಯುವಲ್ಲಿ ಇದರ ಪಾತ್ರವನ್ನು ಹಿರಿದಾಗಿಸಲಾಗಿದೆ. ಕೆರಾಟಿನಾಯ್ಡ್‌ಗಳಂಥ ಉತ್ತಮ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಕ್ಯಾನ್ಸರ್‌ಕಾರಕಗಳ ಕೆಲಸಕ್ಕೆ ತಡೆಯೊಡ್ಡುತ್ತವೆ; ಜೊತೆಗೆ, ಕ್ಯಾನ್ಸರ್ ಕಣಗಳು ಹರಡದಂತೆ ಮಾಡುವಲ್ಲಿ ಪ್ರಭಾವಶಾಲಿಯಾಗಿವೆ. ಹೃದಯದ ಮಿತ್ರ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಒಂದೆರಡೇ ಅಲ್ಲ. ಸರಳವಾದ ವಿಟಮಿನ್ ಸಿ ಯಂಥ ಉರಿಯೂತ ಶಾಮಕಗಳಿಂದ ಹಿಡಿದು, ಸಂಕೀರ್ಣ ಕೆರಾಟಿನಾಯ್ಡ್‌ಗಳವರೆಗೆ ಈ ಅಂಶಗಳು ಬೂದುಗುಂಬಳದಲ್ಲಿ ಸಾಂದ್ರವಾಗಿವೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.…
ರೈತರ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆಯಾದರೂ, ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿಯಲ್ಲಿ ಆಧುನಿಕತೆ ತರಲು ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ, ಬೀಜ, ಗೊಬ್ಬರ, ಖರೀದಿಗೆ ಪ್ರೋತ್ಸಾಹಧನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಶೇ.90ರಷ್ಟು ಸಹಾಯಧನ ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಶೇ.90ರಷ್ಟು ಸಹಾಯಧನ ಸಿಗುತ್ತದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ. ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುವುದು. ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ , ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್,ರೋಟೋವೇಟರ್,ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ. ಸಹಾಯಧನ ಪಡೆಯಲು ಅಗತ್ಯ ದಾಖಲೆಗಳು? ರೈತರ ಜಮೀನಿನ ಪಹಣಿ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಪಹಣಿ ಜಂಟಿಯಾಗಿದ್ದರೆ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು. ರೈತರು ಫ್ರೂಟ್ಸ್ ಐಡಿ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…
ಯುವಕರನ್ನು ಉದ್ಯೋಗಶೀಲರನ್ನಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಗಿಕವಾಗಿ ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಯುವಕರು ಮಾಸಿಕ 5,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯಲಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಬಯಸುವ ಯಾವುದೇ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕು. ಯಾರು ಅರ್ಜಿ ಸಲ್ಲಿಸಲು ಆರ್ಹರು, ವಯೋಮಿತಿ ಏನು? ವಿವರಣೆ ಇಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ವಯೋಮಿತಿ: ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21 ರಿಂದ 24 ವರ್ಷಗಳ ನಡುವೆ ಇರಬೇಕು. ಅಲ್ಲದೆ, ಅಭ್ಯರ್ಥಿಯು ಪೂರ್ಣ ಸಮಯದ ಉದ್ಯೋಗದಲ್ಲಿ ಇರಬಾರದು, ಒಬ್ಬರು ಪೂರ್ಣ ಸಮಯದ ಶಿಕ್ಷಣ, ವ್ಯಾಸಂಗದಲ್ಲಿರಬಾರದು. ಅದ್ಯಾಗೂ ಆನ್‌ಲೈನ್ ಅಥವಾ ದೂರಶಿಕ್ಷಣದ ಮೂಲಕ ಅಧ್ಯಯನ ಮಾಡುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಯಾರು ಅರ್ಜಿ ಸಲ್ಲಿಸಬಹುದು? ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಪಾಸಾದ ವಿದ್ಯಾರ್ಥಿಗಳು ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024 ಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಐಟಿಐ ತೇರ್ಗಡೆ, ಪಾಲಿಟೆಕ್ನಿಕ್ ಡಿಪ್ಲೊಮಾ ಹೊಂದಿರುವವರು…
ಗಡಿಬಿಡಿಯ ಹೊರತಾಗಿ ಇನ್ನೇನೂ ಇಲ್ಲ ಅನುಭವಿಸುವುದಕ್ಕೆ ಎನ್ನುವಂತೆ ಬದುಕುತ್ತೇವೆ ನಾವು. ಎಲ್ಲಿಯವರೆಗೆ ಎಂದರೆ ಎಷ್ಟೇ ದುಡಿದರೂ ಕೂತು ತಿನ್ನುವುದಕ್ಕೆ ನಮಗೆ ಸಮಯವಿಲ್ಲ. ಅದಲ್ಲದೆ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ಇಂದಿಗೂ ಅನೇಕರಿಗೆ ತಿಳಿದಿಲ್ಲ. ಆದ್ದರಿಂದಲೇ ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಸರಿಯಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಜನರು, ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಹಾಸಿಗೆಯಲ್ಲಿ ಕುಳಿತು ತಿನ್ನೋದು ನಿಲ್ಲಿಸಿ. ಲಕ್ಷ್ಮೀ ವಾಸ ಪ್ರತಿದಿನ ಹಾಸಿಗೆಯಲ್ಲಿ ಕುಳಿತು ಊಟ ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಸಿಗೆಯು ಮಲಗುವ ಸ್ಥಳ, ಅಲ್ಲಿ ಎಂದಿಗೂ ತಿನ್ನಬಾರದು. ನೆಮ್ಮದಿ ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ಮನೆಯಲ್ಲಿ ವಿವರಿಸಲಾಗದ ಶಾಂತಿಯ ನಷ್ಟವು ಉಂಟಾಗುತ್ತದೆ. ಆದ್ದರಿಂದ ನೀವು ಈ ಅಭ್ಯಾಸವನ್ನು ಬದಲಾಯಿಸಬೇಕಾಗಿದೆ. ಹಾಸಿಗೆಯ ಮೇಲೆ ಕುಳಿತು ತಿನ್ನುವವರು ಸಾಲದ ಸಮಸ್ಯೆಗಳಲ್ಲಿ…
ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ಅಷ್ಟಮಿ ನಕ್ಷತ್ರ: ಮಖಾ ರಾಹು ಕಾಲ: 09:00 ನಿಂದ 1:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಸಂ.4:49 ನಿಂದ ಸಂ.6:34 ತನಕ ಅಭಿಜಿತ್ ಮುಹುರ್ತ: ಬೆ.11:40 ನಿಂದ ಮ.12:24 ತನಕ ಮೇಷ ರಾಶಿ: ನಿಮ್ಮ ವ್ಯವಹಾರ ಕಾರ್ಯ ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ,ಯಂತ್ರಗಳ ಬಿಡಿ ಭಾಗಗಳ ಉದ್ಯಮದಾರರಿಗೆ ಆರ್ಥಿಕ ನಷ್ಟ, ಗುತ್ತಿಗೆದಾರರಿಗೆ ಹೊಸ ಟೆಂಡರ್ ಭಾಗ್ಯ, ಒಳಸಂಚುಗಳ ಬಗ್ಗೆ ಜಾಗೃತಿ ಇರಲಿ,ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನವರಿಗೆ ಉದ್ಯಮದಲ್ಲಿ ಚೇತರಿಕೆ,ತಮಗೆ ಬರಬೇಕಾದ ಬಾಕಿ ಸಾಲದ ಮೊತ್ತ ಕೈಸೇರುವುದು. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಹೊಸ ಆದಾಯ ಮೂಲ ಗೋಚರಿಸಲಿದೆ, ಅಷ್ಟೇ…
ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶ ನಾಳೆ ಹೊರಬೀಳಲಿದೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣದ ಮತದಾರರು ನೀಡಿರುವ ಮತಗಳ ಎಣಿಕೆ ನಡೆಯಲಿದ್ದು,ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದು ಬಹಿರಂಗವಾಗಲಿದೆ.ಮೂರರಲ್ಲಿ ಎಲ್ಲರ ಚಿತ್ತ ನೆಟ್ಟಿರೋದು ಚನ್ನಪಟ್ಟಣದ ಕಡೆ..ಯಾಕಂದ್ರೆ ಗೌಡರ ಕುಟುಂಬ ಹಾಗೂ ಡಿಕೆ ಬ್ರದರ್ಸ್ ನಡುವಿನ ಕಾಳಗದಲ್ಲಿ ಯಾರ ಕೈಮೇಲಾಗುತ್ತದೆ ಅನ್ನೋ ಕುತೂಹಲವಿದೆ. ಸಂಡೂರು,ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಳೆ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದೊಳಗೆ ಫಲಿತಾಂಶ ಹೊರಬೀಳಲಿದೆ.ಮತದಾರರು ಹಾಕಿರುವ ಮತಗಳು ಯಾರಿಗೆ ಅನ್ನೋದು ಗೊತ್ತಾಗುತ್ತದೆ. ಮೂರು ಕ್ಷೇತ್ರಗಳಲ್ಲೂ ಸಾಕಷ್ಟು ಪೈಪೋಟಿ ಇದ್ದು ಇಂತವರೇ ಗೆಲ್ತಾರೆ ಅಂತ ಹೇಳೋದು ಕಷ್ಟ.ಸಮೀಕ್ಷೆಗಳು ವರದಿ ಪ್ರಕಟಿಸಿದ್ದು ಮೂರು ಕ್ಷೇತ್ರಗಳು ಒಂದೊಂದು ಪಕ್ಷ ಗೆಲ್ಲಲಿವೆ ಎಂದಿದ..ಆದರೆ ಫಲಿತಾಂಶವೇ ಉಲ್ಟಾ ಆದ್ರೂ ಅಚ್ಚರಿಯಿಲ್ಲ.ಹಾಗಾಗಿ ನಾಳಿನ ಫಲಿತಾಂಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಯಾರು ಸೋಲ್ತಾರೆ ಯಾರು ಗೆಲ್ತಾರೆ ಅನ್ನೋದು ನಾಳೆ ಹೊರಬೀಳಲಿದೆ. https://ainlivenews.com/if-bpl-card-is-cancelled-will-grilakshmi-get-money-finally-lakshmi-hebbalkar-kotru-clarification/ ಇನ್ನು ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಕುತೂಹಲ…
ಬೆಂಗಳೂರು: ಹನಿ ಟ್ರಾಪ್ ಮಾಡಿ 2.5 ಕೋಟಿ ವಸೂಲಿ ಮಾಡಿದ್ದ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ,. ತಬ್ಸಂ ಬೇಗಂ, ಅಜೀಮ್ ಉದ್ದಿನ್ ಆನಂದ್. ಅಭಿಷೇಕ್ ಬಂಧಿತ ಆರೋಪಿಗಳಾಗಿದ್ದು, ಆರ್ ಟಿ ನಗರ ಜಿಮ್ ನಲ್ಲಿ ಮಹಿಳೆ ತಬಸುಮ್ ಕೇಂದ್ರ ಸರ್ಕಾರಿ ನೌಕರನನ್ನು ಪರಿಚಯ ಮಾಡಿಕೊಂಡಿದ್ದಳು. ನಂತರ ಫೋನ್ ನಂಬರ್ ಪಡೆದು ಚಾಟಿಂಗ್ ಮಾಡಲಾರಂಭಿಸಿದ್ದಾರೆ. ನಂತರ, ಟೀ, ತಿಂಡಿ ಎನ್ನುತ್ತಾ ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ, ತನ್ನ ಪರಿಚಯದ ಬಗ್ಗೆ ಹೇಳಿಕೊಳ್ಳುತ್ತಾ ತಾನೊಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು, ಅದಕ್ಕೆ ಒಂದಷ್ಟು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಇದೇ ನೆಪವನ್ನಿಟ್ಟುಕೊಂಡು 2021ರಿಂದ ನಿರಂತರವಾಗಿ ಸ್ಬಲ್ಪ ಸ್ವಲ್ಪವೇ ಹಣವನ್ನು ಪಡೆದುಕೊಂಡಿದ್ದಾಳೆ. ತಬಸುಮ್ ಗ್ಯಾಂಗ್‌ನಿಂದ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದು, ನೌಕರನ ಕೆಲವೊಂದು ಖಾಸಗಿ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದಾರೆ. https://ainlivenews.com/good-news-for-teacher-post-aspirants-recruitment-of-10-thousand-teachers-soon/ ನಂತರ ಅವರ ಖಾಸಗಿ ಫೊಟೋಗಳನ್ನು ವಾಟ್ಸಾಪ್‌ಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಹಂತ ಹಂತವಾಗಿ ಆರೋಪಿಗಳು 2.5 ಕೋಟಿ ರೂ. ಹಣವನ್ನು ವಸೂಲಿ ಮಾಡಿದ್ದಾರೆ. ಇದರ ನಂತರವೂ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ…