Author: AIN Admin

ಕಲಘಟಗಿ: ‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಸಂಘಟನೆಗಳಿಂದ ನ.26ರಂದು ಮೌನ ಪ್ರತಿಭಟನೆ ನಡೆಸಿ ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ತಿಳಿಸಿದ್ದಾರೆ. ‘ದೇಶದ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಧಲೆವಾಲಾ ನ.26ರಿಂದ ಆಮರಣಾಂತ ಸತ್ಯಾಗ್ರಹ ಉಪವಾಸ ಹಮ್ಮಿಕೊಂಡಿದ್ದಾರೆ. ಇದು ರೈತರ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ದೇಶಾದ್ಯಂತ ಎಲ್ಲ ರೈತ ಸಂಘಟನೆಗಳು ಬೆಂಬಲಸೂಚಿಸುತ್ತಿವೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ‘ಕೇಂದ್ರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದಲ್ಲಿಯೂ ದೆಹಲಿ ಹೋರಾಟ ಬೆಂಬಲಿಸಿ ಸಹಸ್ರಾರು ಸಂಖ್ಯೆಯ ರೈತರು ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ. ದೆಹಲಿ ರೈತ ಮುಖಂಡರ ಪ್ರಾಣಕ್ಕೆ ಅಪಾಯ ಆದರೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಮತ್ತು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ,…

Read More

ಶ್ರೀನಿವಾಸಪುರ: ಕ್ಷುಲ್ಲಕ ಕಾರಣಕ್ಕೆ ಜ್ಯೂಸ್ ಫ್ಯಾಕ್ಟರಿಯ ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಚ್ಚನಹಳ್ಳಿ ಗ್ರಾಮದ ಬಳಿ ನಡೆದಿದೆ. ಉತ್ತರ ಪ್ರದೇಶ ಮೂಲದ ಉಯ್ಯಾದ್ ತಲಾ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಾರ್ಮಿಕರ ನಡುವೆ ಯಾವುದೋ ಕಾರಣಕ್ಕೆ ಚಿಕ್ಕ ಕಿರಿಕ್ ಆಗಿದೆ, ಬಳಿಕ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದ್ದು, https://ainlivenews.com/do-you-know-how-many-health-benefits-there-are-from-drinking-bitter-gourd-juice/ ಈ ಗಲಾಟೆಯಲ್ಲಿ ಉಯ್ಯಾದ್ ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿಲಾಗಿಯಿತು, ಆದರೆ ದಾರಿ ಮಧ್ಯೆ ಕಾರ್ಮಿಕ ಮೃತಪಟ್ಟಿದ್ದಾನೆ. ಈ ಘಟನೆಯ ಸಂಬಂಧ ಶ್ರೀನಿವಾಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ರಾಕೇಶ್ (20) ಹಾಗೂ ರವಿಯನ್ನು (25) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read More

ಬೆಂಗಳೂರು: ಉಪ ಚುನಾವಣೆ ಸಮರದಲ್ಲಿ ತೀವ್ರ ಪೈಪೋಟಿಗೆ, ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಮತ್ತು ಕಾಂಗ್ರೆಸ್ ಹಾಗೂ ಎನ್​ಡಿಎ ಮಿತ್ರಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್, ಯೋಗೇಶ್ವರ್ ಪ್ರತಿಷ್ಠೆಗೆ ಗೆಲುವಾಗಿದೆ. ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯೋಗೇಶ್ವರ್​ಗೆ 1,12,642 ಮತ ದೊರೆತರೆ, ಎನ್​ಡಿಎ ಅಭ್ಯರ್ಥಿ ನಿಖಿಲ್‌ಗೆ 87,229 ಮತಗಳು ದೊರೆತಿವೆ. ಪಕ್ಷೇತರ ಅಭ್ಯರ್ಥಿಗಳಾದ ನಿಂಗರಾಜುಗೆ 2352, ಜೆ.ಟಿ.ಪ್ರಕಾಶ್‌ಗೆ 1649 ಮತಗಳು ದೊರೆತಿವೆ. https://ainlivenews.com/are-you-eating-while-sitting-on-the-bed-be-careful-dont-do-this-poverty-is-bothering-you/ ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್​ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್​ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು. ಯೋಗೇಶ್ವರ್ ಗೆಲುವಿಗೆ ಕಾರಣವಾದ ಪ್ರಮುಖ 10 ಕಾರಣಗಳು…

Read More

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ನ‌ ಆರೋಪಿ ದರ್ಶನ್ ‌ಗೆ ಪೋಲಿಸರು ಮತ್ತಷ್ಟು ಶಾಕ್ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿರುವ ದರ್ಶನ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ ಹೆಚ್ಚುವರಿ ಚಾರ್ಜ್ ಶೀಟ್ ಗೆ ಸಲ್ಲಿಕೆ ಮಾಡಿದ್ದು  ಈ ಮೂಲಕ ಮಧ್ಯಂತರ ಜಾಮೀನಿಗೂ ಕಂಟಕ ತರೋ ಸಾಧ್ಯತೆಯಿದೆ.ಆಸ್ಪತ್ರೆಯಲ್ಲಿರೋ ಆರೋಪಿ ದರ್ಶನ್ ಮತ್ತೆ ಢವ ಢವ ಶುರುವಾಗಿದೆ.. ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಪೂರ್ಣಗೊಳಿಸಿರೋ ಪೊಲೀಸ್ರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಸಿಹೆಚ್ 57 ನೇ ನ್ಯಾಯಾಲಯಕ್ಕೆ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.  ಕೊಲೆ ಕೇಸ್ ನಲ್ಲಿ ಮತ್ತೆ 20 ಕ್ಕೂ ಸಾಕ್ಷಿಗಳ ಉಲ್ಲೇಖ ಮಾಡಿರೋ ಪೊಲೀಸ್ರು, ಪ್ರಬಲ ಸಾಕ್ಷ್ಯಗಳ ಹೇಳಿಕೆ ದಾಖಲಿಸಿದ್ದಾರಂತೆ.. ಇದ್ರಲ್ಲಿ ಮತ್ತೆ ದರ್ಶನ್ ಪವಿತ್ರಾಗೌಡ ಮೊಬೈಲ್ ರಿಟ್ರೀವ್ ವರದಿಗಳ ಬಗ್ಗೆ ಉಲ್ಲೇಖವಿದೆ…ಜೊತೆಗೆ ಸಾಕಷ್ಟು ಎಫ್ ಎಸ್ ಎಲ್ ವರದಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ‌.ಇನ್ನುಕೊಲೆ ನಡೆದ ಜಾಗದಲ್ಲಿ ದರ್ಶನ್ ಪೋಟೊ ರಹಸ್ಯ…

Read More

ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ನವಮಿ – ನಕ್ಷತ್ರ:ಹುಬ್ಬ ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: ಮ.3:07 ನಿಂದ ಸಂ.4:54 ತನಕ ಅಭಿಜಿತ್ ಮುಹುರ್ತ: ಬೆ.11:40 ನಿಂದ ಮ.12:25 ತನಕ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಉದ್ಯೋಗಿಗಳಿಗೆ ಸಿಗಲಿದೆ, ಉದ್ಯೋಗದಲ್ಲಿ ಪ್ರಗತಿ ಹೊಂದುವ ಸಮಯ ಬಂದಿದೆ, ಇಚ್ಚಿತ ಸ್ಥಾನಕ್ಕೆ ಉದ್ಯೋಗ ಬದಲಾವಣೆ ಬಡ್ತಿ ಯೋಗ ಭಾಗ್ಯ ಸಿಗಲಿದೆ, ಆಕಸ್ಮಿಕ ಧನ ಲಾಭ ಜೂಜಾಟದಿಂದ ಪಡೆಯಲಿದ್ದೀರಿ, ಈ ರಾಶಿಯವರಿಗೆ ಅಧಿಕಾರ ಸಂಪತ್ತು ತಾನಾಗಿಯೇ ಸಿಗಲಿದೆ,…

Read More

ಗದಗ: ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಸಚಿವ ಹೆಚ್ ಕೆ ಪಾಟೀಲ್ ಗದಗದಲ್ಲಿ ಪ್ರತಿಕ್ರಿಯೇ ನೀಡಿದ್ದಾರೆ. ಬಿಜೆಪಿಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ. ರಾಜ್ಯದ ಉಪಚುನಾವಣೆ ಬಹಳ ಮಹತ್ವದ್ದಾಗಿತ್ತು. ರಾಜ್ಯದ ಹಲವಾರು ಬೆಳೆವಣಿಗೆಗಳಿಗೆ ಸಮರ್ಪಕ ಉತ್ತರ ನೀಡಿ ಮಂಗಳಾರತಿ ಮಾಡಿದ್ದಾರೆ ಎಂದಿದ್ದಾರೆ. ವಕ್ಫ್ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದರು. ಸಮಾಜ ಒಡೆಯುವ ದೊಡ್ಡ ಹುನ್ನಾರ ಮಾಡಿದ್ದರು. ಗ್ಯಾರಂಟಿ ನಿಲ್ಲಿಸುತ್ತೇವೆ ಅಂತ ಪ್ರಧಾನಿವರಿಗೂ ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದ್ದರು. ಮುಖ್ಯಮಂತ್ರಿ ತೇಜೋವಧೆ ಮಾಡಿ ಸರ್ಕಾರ ಉಳಿಯೋದಿಲ್ಲ ಅಂತ ಹೇಳಿದ್ರು. ಆದರೆ ಜಾಗೃತ ಮತದಾರ ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವ್ಯಂಗವಾಡಿದ್ದಾರೆ. https://ainlivenews.com/are-you-eating-while-sitting-on-the-bed-be-careful-dont-do-this-poverty-is-bothering-you/ ಚುನಾವಣೆ ಸೋಲಿನಿಂದ ಬಿಜೆಪಿ ಸುಳ್ಳು ನಡೆಯಲ್ಲ ಅಂತ ಅರಿತುಕೊಳ್ಳಬೇಕು. ಸಮಾಜ ಒಡೆಯುವ ಕೆಟ್ಟ ಮನಸ್ಥಿತಿಗಳಿಗೆ ತಕ್ಕ ಶಾಸ್ತಿ ಆಗಿದೆ. ವೈ…

Read More

ಧಾರವಾಡದಲ್ಲಿ ಪೊಲೀಸ್ ಮಕ್ಕಳಿಗಾಗಿಯೇ ನಿರ್ಮಾಣವಾಗಿದ್ದ ಎನ್.ಎ.ಮುತ್ತಣ್ಣ ಸ್ಮಾರಕ ಶಾಲೆ ಬಂದ್ ಆಗುವ ಹಂತ ತಲುಪಿತ್ತು ಆದರೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳ ಪ್ರಯತ್ನದಿಂದ ಆ ಶಾಲೆ ಬಂದ್ ಆಗದೇ ಇಂದಿಗೂ ಕಾರ್ಯ ನಿರ್ವಹಿಸುತ್ತಿದ್ದು, ಆ ಶಾಲೆ ಮತ್ತಷ್ಟು ಬಲ ಕೊಡುವ ನಿಟ್ಟಿನಲ್ಲಿ ಶಾಲಾ ಆವರಣದಲ್ಲಿ ವಸತಿ ನಿಲಯ ಮತ್ತು ಭೋಜನಾಲಯ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಲಾಗಿದೆ. https://ainlivenews.com/good-news-for-the-unemployed-applications-invited-for-pm-internship-scheme-rs-5000-allowance-per-month/ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಸತಿ ಶಾಲೆ ಮತ್ತು ಭೋಜನಾಲಯ ನಿರ್ಮಾಣಕ್ಕೆ ಸಿಎಸ್‌ಆರ್ ಫಂಡ್ ಅಡಿ ಅಂದಾಜು 2 ಕೋಟಿಯಷ್ಟು ಅನುದಾನ ನೀಡಿದ್ದು, ಇಂದು ಕಟ್ಟಡ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಭೂಮಿಪೂಜೆ ನೆರವೇರಿಸಿದರು ಈ ಸ್ಮಾರಕ ಶಾಲೆಯೆ ಇನ್ನೂ ಹೆಚ್ಚಿನ ಮಕ್ಕಳ ಸಂಖ್ಯೆ ಅಗತ್ಯವಿದೆ ಹೊರಗಿನ ಮಕ್ಕಳ ಪ್ರವೇಶಾತಿಗೂ ಅನುಕೂಲ ಕಲ್ಪಿಸಬೇಕು ಶಾಲೆಯ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕೇಂದ್ರ…

Read More

ಬಳ್ಲಾರಿ: ಸಂಡೂರು ಫಲಿತಾಂಶ ಸೋಲನ್ನ ಒಪ್ಪಿಕೊಳ್ತೆವೆ. ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿಲ್ಲ. 5 ಸಾವಿರ ಮತಗಳಿಂದ ನಾವು ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಹೇಳಿದರು. 9 ಸಾವಿರದ ಅಂತದಿಂದ ಕಾಂಗ್ರೆಸ್ ಗೆಲುವಾಗಿದೆ. ಸಿಎಂ ಸಿದ್ದರಾಮಯ್ಯ ಪಂಚಾಯತ್ ಲೇವಲ್ ನಲ್ಲಿ ಪ್ರಚಾರ ಮಾಡಿದ್ದಾರೆ. 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.ಹಣ, ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ಗೆದ್ದಿದ್ದಾರೆ. ಸಂಡೂರು ಸರ್ಕಲ್ ಇನ್ಪ್ಸ ಪೇಕ್ಟರ್ ಮಹೇಶ್ ಗೌಡ ಸೇರಿದಂತೆ ಅನೇಕ ಪೊಲೀಸರ ದುರ್ಬಳಕೆ ಚುನಾವಣೆಯಲ್ಲಿ ಆಗಿದೆ ಎಂದರು. https://ainlivenews.com/good-news-for-the-unemployed-applications-invited-for-pm-internship-scheme-rs-5000-allowance-per-month/ 2028 ರಲ್ಲಿ ಬಂಗಾರಿ ಹನುಮಂತು ಗೆಲ್ಲಲಿದ್ದಾರೆ ಎಂದ ಅವರು, ನಮ್ಮ ಗೆಲುವಿಗೆ ಇನ್ನೂ 5 ಸಾವಿರ ಮತಗಳು ಬೇಕಿತ್ತು. ಸಿಎಂ ಸಿದ್ದರಾಮಯ್ಯ ಅವರು ಬಂದು ಕ್ಯಾಂಪೇನ್ ಮಾಡಿದ್ದಾರೆ.ಹಣದ ಹೊಳೆ ಹಂಚಿದ್ದಾರೆ, ಅಧಿಕಾರ ದುರುಪಯೋಗ ಆಗಿದೆ.ವಾಲ್ಮೀಕಿ ಹಗರಣ, ಮುಡಾ ಹಗರಣ ಇವೇಲ್ಲವೂ ಇವತ್ತು ಕೆಲಸ ಮಾಡಿದೆ. ತುಕಾರಾಂ ಅವರಿಗೆ ಎಂಪಿ ಚುನಾವಣೆಯಲ್ಲಿ ಲೀಡ್ ಎಷ್ಟಿತ್ತು, ಈಗ ಎಷ್ಡಿದೆ ನೋಡಿ? ಎಂದ ರೆಡ್ಡಿ,…

Read More

ಬೆಂಗಳೂರು: ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್​ ಯುವ ಘಟಕ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್​ಡಿ ದೇವೇಗೌಡ, ಹೆಚ್​ಡಿ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನಾನು ಭರವಸೆ ಕೊಟ್ಟಿದ್ದೆ. ಆ ಭರವಸೆ ಕೇವಲ ಚುನಾವಣೆಗೆ ಸಂಬಂಧಪಟ್ಟಿದ್ದಲ್ಲ. ನಾನು ಕೊಟ್ಟ ಮಾತನ್ನು ಹಿಂಪಡೆಯಲ್ಲ ಎಂದರು. https://ainlivenews.com/good-news-for-the-unemployed-applications-invited-for-pm-internship-scheme-rs-5000-allowance-per-month/ ನಾನು ರಾಮನಗರದಲ್ಲಿ ಜನಿಸಿಲ್ಲ, ಆದರೆ, ಭಾವನಾತ್ಮಕ ಸಂಬಂಧವಿದೆ. ನಾನು ಹೆಚ್​ಡಿ ಕುಮಾರಸ್ವಾಮಿ ಅವರ ಜೊತೆ ಸೇರಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಒಂದು ಸಮುದಾಯದ ಮತದಾರರು ಕಾಂಗ್ರೆಸ್​ ಪರ ನಿಂತಿದ್ದಾರೆ. ಸೋಲಿನಿಂದ ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Read More

ಚಿಕ್ಕೋಡಿ: ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ನಾಯಕತ್ವವನ್ನ ಜನ ತಿರಸ್ಕಾರ ಮಾಡಿದ್ದಾರೆ. ವಿಜಯೇಂದ್ರ ಅವರಿಗೆ ಸ್ವಾಭಿಮಾನ ಇದ್ದರೆ ಅವರೇ ರಾಜೀನಾಮೆ ನೀಡಬೇಕು. ವಿಜಯೇಂದ್ರ ನಾಚಿಕೆಗೇಡಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂದು ಹರಿಹಾಯ್ದರು. https://ainlivenews.com/the-government-is-providing-90-subsidy-for-the-purchase-of-mini-power-tiller-apply-today/ ಭರತ ಬೊಮ್ಮಾಯಿ ಸೋಲು ನಿಜಕ್ಕೂ ಆಘಾತ ತಂದಿದೆ. ರೌಡಿಯನ್ನ ಜನ ಆಯ್ಕೆ ಮಾಡಿದ್ದಾರೆ. ಜನರ ತೀರ್ಪು ಬಿಜೆಪಿ ನಾಯಕತ್ವ ಬದಲಾವಣೆ ಆಗಬೇಕು ಎನ್ನುವುದಿದೆ. ಹೊಸ ನಾಯಕತ್ವ ರಾಜ್ಯಕ್ಕೆ ಮತ್ತು ಬಿಜೆಪಿಗೆ ಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಸೋಲು ದುರ್ದೈವ. ಯೋಗೇಶ್ವರ ಅವರಿಗೆ ಟಿಕೆಟ್ ಕೊಡುವಂತೆ ನಾನು ಹೇಳಿದ್ದೆ. ಪಾಪ ಕೊನೆಯ ವರೆಗೂ ಯೋಗೇಶ್ವರ್‌ ಬಿಜೆಪಿ ಪರ ಒಲವು ತೋರಿದ್ದರು. ಜನ ಯೋಗೇಶ್ವರ್‌ ಕೆಲಸ ಮಾಡಿದ್ದನ್ನ ನೋಡಿ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿ ಅವರು ಮುಂದೆ ಯೋಚನೆ ಮಾಡಿ ಪಕ್ಷ ಸಂಘಟನೆ…

Read More