Author: AIN Admin

ಪರ್ತ್: ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಮಾಡಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 487 ರನ್ ಬಾರಿಸಿದ್ದು, ಆಸೀಸ್‌ಗೆ ಮೊದಲ ಟೆಸ್ಟ್ ಗೆಲ್ಲಲು 534 ರನ್‌ಗಳ ಕಠಿಣ ಗುರಿ ನೀಡಿದೆ. ಹೌದು ಸುದೀರ್ಘ ಸ್ವರೂಪದಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸರ್ ಡೊನಾಲ್ಡ್ ಬ್ರಾಡ್ಮನ್ ಅವರನ್ನು ಹಿಂದಿಕ್ಕಿ ಸತತ 16 ತಿಂಗಳ ಬಳಿಕ ಕೊಹ್ಲಿ ಶತಕ ಸಿಡಿಸಿದ್ದಾರೆ.  ಪರ್ತ್ ಟೆಸ್ಟ್‌ಗೆ ಮೊದಲು 29 ಶತಕಗಳೊಂದಿಗೆ ಕೊಹ್ಲಿ, ಬ್ರಾಡ್‌ಮನ್ ಜೊತೆ ಸಮಬಲ ಹೊಂದಿದ್ದರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಕಿಂಗ್‌ ಕೊಹ್ಲಿ 143 ಎಸೆತಗಳಿಗೆ ಶತಕ ಸಿಡಿಸಿದರು. ಆ ಮೂಲಕ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2 ಸಾವಿರ ರನ್ ಪೂರೈಸಿದ ಭಾರತದ 5ನೇ ಬ್ಯಾಟರ್ ಎನಿಸಿಕೊಂಡರು. ಹಾಗೆಯೇ ಈ ಸಾಧನೆ ಮಾಡಿದ 7ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಭಾರತ ತನ್ನ…

Read More

ಬೆಂಗಳೂರು: ದೇವೇಗೌಡ್ರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿಪಿವೈ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ, ಅವರ ವಯಸ್ಸು 92, ದೇಶ, ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಅಂತ ಅನೇಕ ವೇಳೆ‌ ಪ್ರಧಾನಿಯವರೇ ಹೇಳಿದ್ದಾರೆ. ಹಾಗಾಗಿ ಇಲ್ಲಿ ಅಧಿಕಾರದ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇನ್ನೂ ಯಾವುದೇ ಕಾರ್ಯಕರ್ತ ನಿಂತರೂ ಬರುತ್ತಿದ್ದ ನಮ್ಮ ಸಾಂಪ್ರದಾಯಿಕ ಕನಿಷ್ಠ 60 ಸಾವಿರ ಮತಗಳು ಈಗ 87 ಸಾವಿರಕ್ಕೆ ಹೋಗಿ ಮುಟ್ಟಿದೆ. ಪಕ್ಷದ ಅಭಿಮಾನಿಗಳಾಗಿರುವ ಜನ ಯಾರೂ ನಮ್ಮ ಕೈಬಿಟ್ಟಿಲ್ಲ. ಆದ್ರೆ 1 ಸಮುದಾಯದ ಪರವಾಗಿ ದೇವೇಗೌಡರು ಹಿಂದೆ ನಿರ್ಣಯ ಕೈಗೊಂಡಿದ್ದರು, ಮೀಸಲಾತಿ ವಿಚಾರದ ಬಗ್ಗೆಯೂ ತೀರ್ಮಾನ ಮಾಡಿದ್ರು. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಈ ಚುನಾವಣೆಯಲ್ಲೂ ಆ ಸಮುದಾಯವನ್ನ ಕಡೆಗಣಿಸಬಾರದು, ಅವರನ್ನೂ ವಿಶ್ವಾಸಕ್ಕೆ ತಗೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ವಿ. ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅಂತ ಆ…

Read More

ಭದ್ರಾವತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇಲ್ಲಿನ ಕ್ರೈಂ ಗಳು ಒಂದೇ ಎರಡೇ..ರಾಜಕೀಯ ಕರಿ ನೆರಳಿನಲ್ಲಿ ನಲುಗಿ ಹೋಗಿರುವ ಅಧಿಕಾರಿಗಳು ಅಕ್ರಮಗಳು ಹಾಡಹಗಲೇ ನಡೆಯುತ್ತಿದ್ದರೂ, ಕಣ್ಣು ಮುಚ್ಚಿ ಕುಳಿತುಕೊಳ್ಳಬಾಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಅಕ್ರಮ ಕಲ್ಲು, ಮಣ್ಣು, ಮರಳು ದಂಧೆಗಳು ರಾಜಾಶ್ರಯದಲ್ಲಿ ನಡೆಯುತ್ತಿದೆ. ಭದ್ರಾವತಿಯ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನರಸೀಪುರ ಗ್ರಾಮದಲ್ಲಿ ಅಕ್ರಕಮವಾಗಿ ಕಬ್ಬಿಣದ ಅದಿರನ್ನು ವರ್ಷದಿಂದ ಬಗೆಯಲಾಗುತ್ತಿದೆ. ಇದಕ್ಕೆ ರಾಜಕೀಯ ಆಶ್ರಯವಿದೆ ಎನ್ನಲಾಗಿದೆ. ನೆನ್ನೆ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಜೆಸಿಬಿ ಹಾಗು ಲಾರಿ ಟ್ರಾಕ್ಟರ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳಿಗೆ ಗ್ರಾಮಸ್ಥರು ಸರಣಿಯಾಗಿ ಫೋನ್ ಕರೆ ಮಾಡಿದರೂ, ಫೋನ್ ಎತ್ತಲಿಲ್ಲ. https://ainlivenews.com/government-will-provide-rs-3-lakh-subsidy-for-free-borewell-drilling-under-the-ganga-kalyan-yojana/ ಎತ್ತಿದರೂ, ನಾನೊಬ್ಬನೇ ಅಧಿಕಾರಿ ಏನು ಮಾಡಲು ಸಾಧ್ಯ ಎಂದು ಹೇಳಿ ಕೈತೊಳೆದುಕೊಂಡರು ಎನ್ನುತ್ತಾರೆ ಗ್ರಾಮಸ್ಥರು. ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರಾಗಿರುವ ಹಿರಿಯ…

Read More

ನವದೆಹಲಿ: ತಾಯಿ-ಮಗುವಿನ ಬಾಂಧ್ಯವ್ಯ ತುಂಬಾ ಅನ್ಯೋನ್ಯವಾದದ್ದು. ಆದ್ರೆ ಇಲ್ಲೊಬ್ಬ ತಾಯಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು 5 ವರ್ಷದ ಮಗುವನ್ನು ತಾಯಿ ಕೊಲೆ ಮಾಡಿರುವ ಘಟನೆ ದೆಹಲಿಯಅಶೋಕ್ ವಿಹಾರದಲ್ಲಿ ಘಟನೆ ನಡೆದಿದೆ. ದೀಪ್ ಚಂದ್ ಬಂಧು ಆಸ್ಪತ್ರೆಗೆ ಮಗುವನ್ನು ಕರೆತರುವ ಮಾರ್ಗದಲ್ಲಿ ಮೃತಪಟ್ಟಿದೆ. ಮಗು ಹಾಗೂ ತಾಯಿಯ ಗುರುತನ್ನು ಬಹಿರಂಗಪಡಿಸಿಲ್ಲ. ಪೊಲೀಸರ ಮಾಹಿತಿಯ ಪ್ರಕಾರ, ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದ್ದು, ಗುರುತುಗಳು ಪತ್ತೆಯಾಗಿವೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದು, ತಾಯಿ ಸೇರಿದಂತೆ ಮಗುವಿನ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಸತ್ಯ ಬಿಚ್ಚಿಟ್ಟಿದ್ದು, ಸ್ವತಃ ತಾನೇ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಆಕೆಯ ಮೊದಲ ಪತಿ ಅವಳನ್ನು ಬಿಟ್ಟುಹೋಗಿದ್ದ. ಈ ಸಮಯದಲ್ಲಿ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ರಾಹುಲ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಅದಾದ ಬಳಿಕ ಆತನೊಂದಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಮದುವೆಗಾಗಿ ದೆಹಲಿಯಲ್ಲಿರುವ ರಾಹುಲ್ ಮನೆಗೆ ತೆರಳಿದಾಗ ರಾಹುಲ್ ಮತ್ತು ಆತನ ಕುಟುಂಬದವರು…

Read More

ರಾಜ್ಯ ರಾಜಧಾನಿ ಬೆಂಗಳೂರು ದೇಶದಲ್ಲಿರುವ ಮಹಾನಗರಗಳಲ್ಲಿ ಒಂದು. ಆರ್ಥಿಕತೆಯ ವಿಷಯದಲ್ಲಿ ಕರ್ನಾಟಕಕ್ಕೆ ಬೆಂಗಳೂರೇ ಹೃದಯ ಭಾಗ. ಇಂತಹ ಸಿಲಿಕಾನ್ ಸಿಟಿಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲ, ದೇಶ ವಿವಿಧೆಡೆಗಳಿಂದ ಕೆಲಸ ಅರಸಿ ಬರುತ್ತಾರೆ. ಬೆಂಗಳೂರಲ್ಲಿ ಕೆಲಸ ಸಿಕ್ಕರೆ ಲೈಫೇ ಸೆಟಲ್ ಎಂದುಕೊಳ್ಳುವವರೂ ಇದ್ದಾರೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಹಾಗಾದರೆ ಬೆಂಗಳೂರಲ್ಲಿ ಬೇಗ ಕೆಲಸ ಸಿಗಬೇಕು ಎಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಸಕ್ತ ಸಾಲಿನ ಒಂದು ವರ್ಷದ ಅವಧಿಗೆ ಲೈಬ್ರರಿ ಅಪ್ರೆಂಟಿಸ್ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: 3 ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಅಥವಾ ಕರ್ನಾಟಕ ಸರ್ಕಾರ ತಾಂತ್ರಿಕ ನಿರ್ದೇಶನಾಲಯದ ಅಡಿಯಲ್ಲಿ ಡಿಪ್ಲೊಮಾ ಇನ್ ಲೈಬ್ರರಿ ಸೈನ್ಸ್ (ದ್ವಿತೀಯ ಪಿಯುಸಿ ನಂತರದ ಎರಡು ವರ್ಷದ ಕೋರ್ಸ್)ನಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ವೇತನ: 17,000 ರೂಪಾಯಿ ಮಾಸಿಕ ಶಿಷ್ಯವೇತನ. ಅರ್ಜಿ ಸಲ್ಲಿಕೆ: ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾಲಯದ ಅಧಿಕೃತ…

Read More

ರಕ್ತದಲ್ಲಿ ಅಧಿಕ ಸಕ್ಕರೆ ಇರುವುದು ಅಥವಾ ಮಧುಮೇಹವು ಗಂಭೀರವಾದ ಆರೋಗ್ಯದ ಕಾಯಿಲೆಯಾಗಿ ಪರಿಣಮಿಸಿದೆ. ಹಲವಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದ್ರೆ ಇತ್ತೀಚೆಗೆ ಸಣ್ಣ ಮಕ್ಕಳಲ್ಲಿ ಕೂಡ ಮಧುಮೇಹ, ಅಧಿಕ ರಕ್ತದೊತ್ತಡದ ಸಮಸ್ಯೆಗಳು ಉಂಟಾಗುತ್ತಿರುವುದು ಕಳವಳ ಮೂಡಿಸಿದೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಟೈಪ್ 1 ಮಧುಮೇಹವು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದ ಸ್ಥಿತಿಯಾಗಿದೆ. ಇನ್ಸುಲಿನ್ ಎಂಬುದು ನಮ್ಮ ದೇಹದ ಪ್ರಮುಖ ಹಾರ್ಮೋನ್ ಆಗಿದೆ. ನಿಮ್ಮ ಮಗುವನ್ನು ಮಧುಮೇಹದಿಂದ ರಕ್ಷಿಸುವಲ್ಲಿ ಕುಟುಂಬದ ರಕ್ತ ಸರಪಳಿಯು ಜಾಗರೂಕರಾಗಿರಲು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಮಧುಮೇಹದ ಲಕ್ಷಣವೇನು? ನಗರ ಪ್ರದೇಶದ ಮಕ್ಕಳ ಹೊಟ್ಟೆ ಹಾಗೂ ಸೊಂಟದ ಭಾಗ ದಪ್ಪಗಾಗುತ್ತಿದೆ. ಇದರಿಂದಾಗಿ ಇನ್ಸುಲಿನ್ ಪ್ರತಿರೋಧಕ ಹೆಚ್ಚಿ, ಟೈಪ್ 2 ಮಧುಮೇಹದ ಆತಂಕವೂ ಹೆಚ್ಚಿದೆ. ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಇದ್ದರೂ ಕಡಿಮೆ. ಮಕ್ಕಳಲ್ಲಿ ಮಧುಮೇಹ ಆರಂಭವಾಗಿದೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿಯಬಹುದು. ಅವರಿಗೆ ಬಾಯಾರಿಕೆ ಹೆಚ್ಚು.…

Read More

ಬೆಂಗಳೂರು: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೇಸ್​ಗೆ ಮತ್ತೊಂದು ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಸದ್ಯ ಇದೇ ಕೇಸ್​ನಲ್ಲಿ ಜಾಮೀನು ಪಡೆದು ಆಚೆ ಬಂದಿರುವ ನಟ ದರ್ಶನ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದ ದಿನ ಆರೋಪಿಗಳು ನಟ ದರ್ಶನ್​ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನು ಪೊಲೀಸ್​ ಅಧಿಕಾರಿಗಳು ರಿಟ್ರೀವ್‌ ಮಾಡಿದ್ದಾರೆ. ಅಂದು ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆಯಲ್ಲಿ ಸಾಕ್ಷಿದಾರನ ಮೊಬೈಲ್​ನಿಂದ ಫೋಟೋಗಳನ್ನು ರಿಟ್ರೀವ್ ಮಾಡಿದ್ದಾರೆ. ಇನ್ನೂ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಹಾಗೂ ಆರೋಪಿಗಳು ಪೋಸ್ ನೀಡಿದ ಪೋಟೋಗಳು ವೈರಲ್‌ ಆಗಿವೆ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ರಿಲೀಸ್​ ಆದ ಫೋಟೋದಲ್ಲಿ ದರ್ಶನ್​ ರೇಣುಕಾಸ್ವಾಮಿ ಕೇಸ್​ನಲ್ಲಿ A6 ಆರೋಪಿಯಾಗಿ ಕಿಡ್ನಾಪರ್ ಜಗದೀಶ್, A7 ಅನುಕುಮಾರ್ ಹಾಗೂ A8- ಕಾರು ಚಾಲಕ ರವಿ ಇದ್ದಾರೆ. ಈ ಮೂಲಕ ಮಧ್ಯಂತರ ಜಾಮೀನಿಗೂ ಕಂಟಕ ತರೋ ಸಾಧ್ಯತೆಯಿದೆ.ಆಸ್ಪತ್ರೆಯಲ್ಲಿರೋ ಆರೋಪಿ ದರ್ಶನ್ ಮತ್ತೆ ಢವ ಢವ ಶುರುವಾಗಿದೆ..

Read More

ಬೆಂಗಳೂರು: ಎಲ್ಲಿಯವರೆಗೆ EVM ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ರು ಅಂತ ಚರ್ಚೆ ಅಯ್ತು, ಜಾರ್ಖಂಡ್‌ನಲ್ಲಿ ಯಾಕೆ ಮಾಡಿಲ್ಲ ಅಂದ್ರೆ ಕೆಲವು ಕಡೆ ಬಿಟ್ಟು ಬಿಡ್ತಾರೆ. ರಾಜ್ಯದಲ್ಲಿ ಕೆಲವು ಗೆದ್ದೆ ಗೆಲ್ತಿವಿ ಅನ್ನೋ ಕಡೆ ಬಿಡ್ತಾರೆ. ಇದರೊಂದಿಗೆ ಲಾಡ್ಲಿ ಬೆಹಿನ್ ಯೋಜನೆ ಸಾಕಷ್ಟು ಇಂಪ್ಯಾಕ್ಟ್ ಅಗಿದೆ. ಅವರು 6 ತಿಂಗಳು ಮೊದಲು ಕೊಟ್ಟರು, ಇದೆಲ್ಲವೂ ಅವರ ಕೈ ಹಿಡಿದಿದೆ. ನಾವು ಕೊನೆಗೆ ಟಿಕೆಟ್ ಘೋಷಣೆ ಮಾಡಿದ್ವು, ಪಕ್ಷದಲ್ಲೂ ಗೊಂದಲ ಆಯ್ತು. ಶರದ್‌ ಪವಾರ್ ಗುಂಪು, ಉದ್ದವ್ ಠಾಕ್ರೆ ಗುಂಪಿನ ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ವಿದರ್ಭದಲ್ಲಿ ಹೆಚ್ಚು ಸೀಟ್ ಬರಲಿಲ್ಲ. ಎಲ್ಲಿಯವರೆಗೆ ಇವಿಎಂ ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದರು. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಇವಿಎಂ ಇರೋವರೆಗೆ ಬಿಜೆಪಿನೇ ಗೆಲ್ಲುತ್ತಿರುತ್ತೆ. ಒಂದೊಂದು ರಾಜ್ಯ ಬಿಟ್ಟು ಬಿಡ್ತಾರೆ. ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ…

Read More

ಕಲಘಟಗಿ: ಉಪಚುನಾವಣೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕ್ಷೇತ್ರಗಳಲ್ಲೂ ಜನರು ‘ಕೈ’ ಹಿಡಿದಿದ್ದಾರೆ. ಪಟ್ಟಣದ ಆಂಜನೇಯ ವೃತ್ತದಲ್ಲಿ  ರಾಜ್ಯದಲ್ಲಿ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದಂತೆಯೇ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, https://ainlivenews.com/do-you-know-how-many-health-benefits-there-are-from-drinking-bitter-gourd-juice/ ಎಸ್‌ಆ‌ರ್ ಪಾಟೀಲ, ನರೇಶ ಮಲೆನಾಡು, ಹರಿಶಂಕರ ಮಠದ, ಅಜಮತ, ಗೀರದಾರ, ವೃಷಭೇಂದ್ರೆ ಪಟ್ಟಣಶೆಟ್ಟಿ, ಬಾಬು ಅಂಚಟಗೇರಿ, ಲಿಂಗರೆಡ್ಡಿ ನಡುವಿನಮನಿ, ಸೋಮಶೇಖ‌ರ್  ಕಾನಾಪುರ, ಕುಮಾರ್ ಖಂಡೇಕರ, ಕುಬೇರ ಲಮಾಣಿ, ಹನುಮಂತ ಚವರಗುಡ್ಡ ಹಾಜರಿದ್ದರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Read More

ಬೆಂಗಳೂರು: ಮಳೆ ಹೆಚ್ಚಾಗಿ ಆಗದ ರೈತರ ಪಾಲಿಗೆ ಕೊಳವೆ ಬಾವಿಯೇ ಮೂಲಾಧಾರ. ಗಂಗಾ ಕಲ್ಯಾಣ ಯೋಜನೆಯನ್ನು ಬಡ ಹಾಗೂ ಮಧ್ಯಮ ವರ್ಗದ ರೈತರ ಜಮೀನಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಲವಾರು ರೈತರು ಇಂದಿಗೂ ಮಳೆಯನ್ನೇ ಆಶ್ರಯಿಸಿಕೊಂಡು ಜಮೀನು ಕಾರ್ಯದಲ್ಲಿ ತೊಡಗಿದ್ದಾರೆ. ಕಾರಣ ಅವರಲ್ಲಿ ಕೊಳವೆ ಬಾವಿ ತೋಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದಿರುವುದು. ಈ ಕಾರಣಕ್ಕೆ ಸರ್ಕಾರವೇ ಉಚಿತವಾಗಿ ಈ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ನೀವು ಸದುಪಯೋಗಪಡಿಸಿಕೊಳ್ಳಿ. ಯೋಜನೆ ಏನು? : ಕೊಳವೆ ಬಾವಿ (ಬೋರ್ ವೆಲ್) ಕೊರೆಯುವ ಮತ್ತು ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್ ಮತ್ತು ಮೋಟಾರ್ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶ. https://ainlivenews.com/do-you-know-how-many-health-benefits-there-are-from-drinking-bitter-gourd-juice/ ಪ್ರಮುಖವಾಗಿ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ತಂದಿದೆ. ಉಚಿತವಾಗಿ ಕೊಳವೆ…

Read More